ಕೆಲಸಕ್ಕೆ ಹಾಜರಾಗದಿದ್ದರೆ BMTC’ ನೌಕರರಿಗೆ ಸಂಬಳ ಕಟ್!

 ಬೆಂಗಳೂರು : 

      ಕೆಲಸಕ್ಕೆ ಹಾಜರಾಗದಿದ್ದರೆ ಮಾರ್ಚ್ ತಿಂಗಳ ವೇತನ ಕಡಿತಗೊಳಿಸಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ  ಎಚ್ಚರಿಕೆ ನೀಡಿದ್ದಾರೆ.

     ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಷ್ಕರ ನಿರತ ನೌಕರರ ಮನವೊಲಿಕೆಗೆ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಸಾರಿಗೆ ನಿಗಮಗಳು ಈಗಾಗಲೇ ನಷ್ಟದಲ್ಲಿವೆ.ಆದರೂ ನೌಕರರು ಪ್ರತಿಭಟನೆ ಮುಂದುವರೆಸಿದ್ದಾರೆ. ಅವರು ಕೆಲಸಕ್ಕೆ ಹಾಜರಾಗಬೇಕು. ಕೆಲಸಕ್ಕೆ ಬರದಿದ್ದರೆ ಮಾರ್ಚ್ ತಿಂಗಳ ವೇತನ ಕಡಿತಗೊಳಿಲಾಗುವುದು ಎಂದು ಹೇಳಿದ್ದಾರೆ.

      ಮುಷ್ಕರ ನಿರತರ ಮನವೊಲಿಕೆಗೆ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಉಪಮುಖ್ಯಮಂತ್ರಿಗಳು ಕೂಡ ಸಭೆ ನಡೆಸಿ ಸಂಧಾನ ಯತ್ನ ನಡೆಸಿದ್ದಾರೆ. ಸಾರಿಗೆ ನಿಗಮಗಳು ಈಗಾಗಲೇ ನಷ್ಟದಲ್ಲಿವೆ. ಆದರೂ ನೌಕರರು ಪ್ರತಿಭಟನೆ ಮುಂದುವರಿಸಿದ್ದಾರೆ. ಅವರು ಕೆಲಸಕ್ಕೆ ಹಾಜರಾಗಬೇಕು. ಯಾರ್ಯಾರು ಕರ್ತವ್ಯಕ್ಕೆ ಬರುವುದಿಲ್ಲವೋ ಅವರಿಗೆ ನಾವು ಸಂಬಳ ನೀಡುವುದಿಲ್ಲ. 

      ಇನ್ನು ಬೆಂಗಳೂರಿನಲ್ಲಿ ಮುಷ್ಕರದ ಹಿನ್ನೆಲೆಯಲ್ಲಿ ಇಂದು ಕೇವಲ 135 ಬಿಎಂಟಿಸಿ ಬಸ್ ಗಳು ಸಂಚಾರ ಮಾಡುತ್ತಿವೆ. ಖಾಸಗಿ ಬಸ್ ಗಳ ಮೂಲಕ ಸಂಚಾರ ನಡೆದಿದೆ ಎಂದು ಮಾಹಿತಿ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link