ಬೆಂಗಳೂರು
ಬೆಂಗಳೂರಿನ ಜೀವನಾಡಿ ಎಂದೇ ಕರೆಲ್ಪಡುವ ಮಹಾನಗರ ಸಾರಿಗೆ ಸಂಸ್ಥೆ ಜನವರಿ ತಿಂಗಳೊಂದರಲ್ಲೆ ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸುವ ಮೂಲಕ ವಸೂಲಾದ ಮೊತ್ತ ಕೇಳಿದರೆ ಖಂಡಿತವಾಗಿಯು ನೀವು ಶಾಕ್ ಆಗುತ್ತೀರಿ . 3,591 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿ, 6.77 ಲಕ್ಷ ರೂ. ಕರ್ತವ್ಯಲೋಪ ಆರೋಪದಡಿ ಕಂಡಕ್ಟರ್‌ಗಳ ವಿರುದ್ಧ 1,521 ಪ್ರಕರಣಗಳು ದಾಖಲಾಗಿವೆ.
ಮಹಿಳಾ ಸೀಟುಗಳನ್ನು ಆಕ್ರಮಿಸಿಕೊಂಡಿದ್ದಕ್ಕಾಗಿ 322 ಪುರುಷ ಪ್ರಯಾಣಿಕರಿಗೆ ಬಿಎಂಟಿಸಿ ದಂಡ ವಿಧಿಸಿದೆ ಮತ್ತು ಅವರಿಂದ 32,200 ರೂಪಾಯಿ ದಂಡ ವಸೂಲು ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ