ಮಾಲಿನ್ಯ ಮುಕ್ತ ನಗರದತ್ತ ಹೆಜ್ಜೆ ಇರಿಸಿದ BMTC…..!

ಬೆಂಗಳೂರು

    ಈ ಮಧ್ಯೆ ನಗರವನ್ನು ಮಾಲಿನ್ಯ ಮುಕ್ತವಾಗಿಸುವ ಉಪಕ್ರಮಗಳಿಗೆ ಪೂರಕವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್ ಪ್ರೊಟೋಟೈಪ್ ಬಸ್ ಗಳಿಗೆ ಬೆಂಗಳೂರಿನಲ್ಲಿ ಚಾಲನೆ ನೀಡುತ್ತಿದೆ.

    ಬೆಂಗಳೂರು ಸ್ಮಾರ್ಟ್‌ ಮೊಬಿಲಿಟಿ ಸಿಟಿ ಲಿಮಿಟೆಡ್ ನ ಮೊದಲ ಬಿಎಂಟಿಸಿ ಎಲೆಕ್ನಿಕ್ ಪ್ರೊಟೋಟೈಪ್ ಬಸ್ ಶುಕ್ರವಾರ ಶಾಂತಿನಗರದ ಟಿಟಿಎಂಸಿಯಲ್ಲಿ ಸಾರಿಗೆ ಸಚಿವ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಗ್ರಿನ್ ಸಿಗ್ನಲ್ ಕೊಡಲಿದ್ದಾರೆ. ಇದು ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ವಾಯು ಮಾಲಿನ್ಯ ತಡೆಗೆ ಪೂರಕವಾದ ಬಿಎಂಟಿಸಿಯ ದಿಟ್ಟ ಹೆಜ್ಜಯಾಗಿದೆ.

    ಏನಿದು ಎಲೆಕ್ನಿಕ್ ಪ್ರೊಟೋಟೈಪ್ ಬಸ್? ಜಿಸಿಸಿ ಮಾದರಿಯಲ್ಲಿ 12 ಮೀಟರ್ ಹವಾನಿಯಂತ್ರಣ ರಹಿತ , ಲೋ ಪ್ರೋರ್, ಎಲೆಕ್ನಿಕ್ ಬಸ್ ಗಳು ಇವಾಗಿವೆ. ಬಿಎಂಟಿಸಿ ಟಾಟಾ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಷನ್ ಕಂಪನಿಯಿಂದ ಗುತ್ತಿಗೆ ಆಧಾರದಲ್ಲಿ 921 ಎಲೆಕ್ನಿಕ್ ಬಸ್ಸುಗಳು ಕಾರ್ಯಾಚರಣೆಗೆ ಇಳಿಯಲಿವೆ. ಈ ಎಲೆಕ್ಟ್ರಿಕ್ ಬಸ್ಸುಗಳು ನಿತ್ಯ 200 ಕಿಲೋಮೀಟರ್ ಸಂಚರಿಸಲಿವೆ.

    ವಿದ್ಯುತ್ ಒಗೊಂಡಂತೆ ಪ್ರತಿ ಒಂದು ಕಿಲೋಮೀಟರ್ ಗೆ 41 ರೂಪಾಯಿ ತಗುಲಲಿದೆ. ಈ ಬಸ್‌ಗಳನ್ನು ಕಂಪನಿಯಿಂದ 12 ವರ್ಷಗಳು ಗುತ್ತಿಗೆ ಪಡೆಯಲಿದ್ದು, ದಶಕಕ್ಕು ಹೆಚ್ಚು ಕಾಲ ಬೆಂಗಳೂರು ಜನರಿಗೆ ಸೇವೆ ನೀಡಲಿವೆ.

    ಕೆಆರ್ ಪುರ ಮೆಟ್ರೋ ನಿಲ್ದಾಣದಿಂದ ಗೊರಗುಂಟೆಪಾಳ್ಯ ಸೇರಿ ಈ ನಾಲ್ಕು ಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ ಸೇವೆ ಇನ್ನೂ ನಗರದಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಬಿಎಂಟಿಸಿ ಡೀಸೆಲ್ ಬಸ್‌ಗಳು ಭವಿಷ್ಯದಲ್ಲಿ ವಿದ್ಯುತ್ ಬಸ್ (ಇವಿ)ಗಳಾಗಿ ಪರಿವರ್ತನೆ ಮಾಡಿ ಮರುಬಳಕೆಗೆ ಬರುವಂತೆ ಮಾಡಲು ತೈವಾನ್‌ನ ಕಂಪನಿಗಳು ಆಸಕ್ತಿ ವಹಿಸಿವೆ. ಈ ಸಂಬಂಧ ರಾಜ್ಯ ಸರ್ಕಾರದ ಜೊತೆ ಪ್ರಾಥಮಿಕವಾಗಿ ಚರ್ಚಿಸಿವೆ ಎಂದು ಸಚಿವ ಎಂಬಿ ಪಾಟೀಲ್ ಅವರು ಹೇಳಿದ್ದರು.

   ಡೀಸೆಲ್ ಬಸ್‌ಗಳು ಸಹ ಭವಿಷ್ಯದಲ್ಲಿ ಇವಿಗಳಾಗಿ ಬದಲಾದರೆ ಪರಿಸರಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಲಿದೆ. ವಾಯು ಮಾಲಿನ್ಯಕ್ಕೆ ಕಡಿವಾಣ ಬೀಳಲಿದೆ ಎಂದಿದ್ದ ಸಚಿವರು ಈ ಬಗ್ಗೆ ಸಾರಿಗೆ ಇಲಾಖೆ ಜತೆ ಚರ್ಚಿ ತೀರ್ಮಾನಿಸುವುದಾಗಿ ತಿಳಿಸಿದ್ದರು. ಈ ಮಧ್ಯೆ ಬೆಂಗಳೂರು ಸ್ಮಾರ್ಟ್‌ ಮೊಬಿಲಿಟಿ ಸಿಟಿ ಲಿಮಿಟೆಡ್ ನ ಮೊದಲ ಬಿಎಂಟಿಸಿ ಎಲೆಕ್ನಿಕ್ ಪ್ರೊಟೋಟೈಪ್ ಬಸ್‌ಗಳಿಗೆ ಚಾಲನೆ ದೊರೆಯುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap