ಮುಸ್ಲಿಂ ನಾಯಕರ ಅಮಾನತು ವಾಪಸ್ ಪಡೆಯುವ ಸಾಧ್ಯತೆ :ಸಚಿವ

ಬೆಂಗಳೂರು: ದಾವಣಗೆರೆ ಉಪಚುನಾವಣೆಯ ಫಲಿತಾಂಶದ ಬಳಿಕ, ಅಮಾನತುಗೊಂಡಿರುವ ಮುಸ್ಲಿಂ ನಾಯಕರ ಅಮಾನತು ಆದೇಶವನ್ನು ವಾಪಸ್ ಪಡೆಯುವ ಸಾಧ್ಯತೆಯಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ವ್ಯಕ್ತಪಡಿಸಿದ್ದಾರೆ.

ಪಿರಿಯಾಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಪ್ರಭಾವಿ ನಾಯಕ ಜಬ್ಬಾರ್ ಸೇರಿದಂತೆ ಇತರ ನಾಯಕರ ಮೇಲಿನ ಅಮಾನತು ಕ್ರಮವು ಉಪಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಒಪ್ಪಿಕೊಂಡಿದ್ದಾರೆ. ಅಲ್ಪಸಂಖ್ಯಾತ ಮತಗಳ ಮೇಲೆ ಈ ಕ್ರಮ ಖಂಡಿತವಾಗಿಯೂ ಪ್ರಭಾವ ಬೀರಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಅಮಾನತುಗೊಂಡ ನಾಯಕರು ಪಕ್ಷಕ್ಕೆ ಮರಳಿದ ಉದಾಹರಣೆಗಳಿವೆ, ಜಬ್ಬಾರ್ ಅವರೂ ಮತ್ತೆ ಪಕ್ಷಕ್ಕೆ ಮರಳಬಹುದು. ಪ್ರಸ್ತುತ ಜಬ್ಬಾರ್ ಅವರನ್ನು ಹೊರತುಪಡಿಸಿ, ಬೇರೆ ಯಾವುದೇ ಮುಸ್ಲಿಂ ನಾಯಕರ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜಕೀಯದಲ್ಲಿ ಯಾವಾಗಲೂ ಕಠಿಣ ನಿಲುವು ತಾಳಲು ಸಾಧ್ಯವಿಲ್ಲ. ಕೆಲವೊಮ್ಮೆ ಹೊಂದಾಣಿಕೆ ಮುಖ್ಯ. ಸಿಎಂ ಕೂಡ ಹಿಂದಿನಷ್ಟೇ ಕಠಿಣವಾಗಿದ್ದಾರೆ ಮತ್ತು ಪಕ್ಷದ ಶಿಸ್ತಿಗೆ ಬದ್ಧವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ಸತೀಶ್ ಜಾರಕಿಹೊಳಿ ಅವರು ಈ ಹೇಳಿಕೆ ನೀಡುವ ಮೂಲಕ ಪಕ್ಷದಲ್ಲಿನ ಭಿನ್ನಮತವನ್ನು ಸರಿಪಡಿಸಲು ಯತ್ನಿಸಿದ್ದಾರೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.

Recent Articles

spot_img

Related Stories

Share via
Copy link