ದೇಶದ ಮೊದಲ ಹೈಡ್ರೋಜನ್ ರೈಲು : ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಸಿರು ನಿಶಾನೆ

ನವದೆಹಲಿ : ಜಿಂದ್ ಮತ್ತು ಸೋನಿಪತ್ ನಡುವೆ ಓಡಾಡುವ ದೇಶದ ಮೊದಲ ಹೈಡ್ರೋಜನ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು. ಇದರೊಂದಿಗೆ ಭಾರತವು ಹೈಡ್ರೋಜನ್ ಇಂಧನ ಚಾಲಿತ ರೈಲು ಆರಂಭಿಸಿದ ವಿಶ್ವದ ಐದನೇ ರಾಷ್ಟçವಾಯಿತು. ಈ 10 ಬೋಗಿಗಳ ರೈಲು ಜಿಂದ್-ಸೋನಿಪತ್ ಮಾರ್ಗದಲ್ಲಿ ಚಲಿಸಲಿದ್ದು, 14 ನಿಲ್ದಾಣಗಳನ್ನು ಕ್ರಮಿಸಿ ಗಂಟೆಗೆ ಗರಿಷ್ಠ 75 ಕಿ.ಮೀ ವೇಗದಲ್ಲಿ ಚಲಿಸಲಿದೆ. ಪ್ರಯಾಣ ದರ 5 ರಿಂದ 25 ರವರೆಗೆ ನಿಗದಿಪಡಿಸಲಾಗಿದೆ. ರೈಲು ಸುಮಾರು ಎರಡು ಗಂಟೆಗಳಲ್ಲಿ 89 ಕಿಲೋಮೀಟರ್ ಪ್ರಯಾಣವನ್ನು ಪೂರ್ಣಗೊಳಿಸಲಿದೆ.
ರೈಲಿಗೆ ಹಸಿರು ನಿಶಾನೆ ತೋರಿದ ನಂತರ, ಪ್ರಧಾನಿ ನರೇಂದ್ರ ಮೋದಿ ಜಿಂದ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಪ್ರಧಾನಿ ಮೋದಿ ಎಲಿವೆಟೆಡ್ ರೈಲ್ವೇ ಟ್ರಾ÷್ಯಕ್ ಮತ್ತು ಎರಡು ವೈದ್ಯಕೀಯ ಕಾಲೇಜುಗಳು ಸೇರಿದಂತೆ ಒಟ್ಟು ಒಂಬತ್ತು ಯೋಜನೆಗಳಿಗೆ ಉದ್ಘಾಟನೆ ಮತ್ತು ಅಡಿಪಾಯ ಹಾಕಲಿದ್ದಾರೆ.
ಜಿಂದ್-ಸೋನಿಪತ್ ಪೈಲಟ್ ಮಾರ್ಗ: ಜಿಂದ್ ಮತ್ತು ಸೋನಿಪತ್ ನಡುವೆ ಕಾರ್ಯನಿರ್ವಹಿಸುವ ಈ ಹೈಡ್ರೋಜನ್ ರೈಲು, ಭಾರತೀಯ ರೈಲ್ವೆಗೆ ಒಂದು ಪ್ರಮುಖ ಮೈಲಿಗಲ್ಲು. ಈ ಯೋಜನೆಯು ರೈಲ್ವೆಯ ನಾವೀನ್ಯತೆ, ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ಸಾರಿಗೆಗೆ ಬದ್ಧತೆಯನ್ನು ಸಂಕೇತಿಸುತ್ತದೆ. ಜಿಂದ್-ಸೋನಿಪತ್ ವಿಭಾಗವನ್ನು ಪೈಲಟ್ ಯೋಜನೆಗೆ ಆಯ್ಕೆ ಮಾಡಲಾಗಿದೆ. ರೈಲಿನ ಕಾರ್ಯಾಚರಣೆಯನ್ನು ಬೆಂಬಲಿಸಲು ಜಿಂದ್‌ನಲ್ಲಿ ಸ್ಥಳೀಯ ಹೈಡ್ರೋಜನ್ ಸಂಗ್ರಹಣೆ ಮತ್ತು ಇಂಧನ ತುಂಬುವ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗಿದೆ. ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ ಕಂಪ್ರೆಸರ್ ಹೈಡ್ರೋಜನ್ ಗ್ಯಾಸ್‌ನ ಸ್ಟೋರೇಜ್ ಮತ್ತು ವಿತರಣೆಗೆ ಅಗತ್ಯವಾದ ಪರವಾನಗಿಗಳನ್ನು ನೀಡಿದೆ.
ಟಿಕಮ್‌ಗಢ ನಿಲ್ದಾಣದಲ್ಲಿ ಉದ್ಘಾಟನೆ: ಇಂದು ಪ್ರಧಾನಿ ಮೋದಿ ‘ಅಮೃತ ಭಾರತ ನಿಲ್ದಾಣ ಯೋಜನೆ’ಯಡಿ ಮಧ್ಯಪ್ರದೇಶದ ಟಿಕಮ್‌ಗಢ ರೈಲು ನಿಲ್ದಾಣವನ್ನು ವರ್ಚುವಲ್ ಆಗಿ ಉದ್ಘಾಟಿಸಿದ್ದರು. ಮುಖ್ಯಮಂತ್ರಿ ಮೋಹನ್ ಯಾದವ್ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶುದ್ಧ ಇಂಧನ ಮತ್ತು ‘ಆತ್ಮನಿರ್ಭರ ಭಾರತ’ (ಸ್ವಾವಲಂಬಿ ಭಾರತ) ಗುರಿಗಳನ್ನು ಸಾಧಿಸುವಲ್ಲಿ ಈ ದಿನ ಭಾರತೀಯ ರೈಲ್ವೆಗೆ ಸ್ಮರಣೀಯ ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ.
ರೈಲ್ವೆಯ ಪ್ರಕಾರ, ಇದು ಹಿಂದಿನ ಉಗಿ ಮತ್ತು ಡೀಸೆಲ್ – ಎಂಜಿನ್ ರೈಲುಗಳಿಗೆ ಹೋಲುತ್ತದೆ. ಪ್ರಮುಖ ವ್ಯತ್ಯಾಸವೆಂದರೆ ಈಗ ವಿದ್ಯುತ್ ಅನ್ನು ಹೈಡ್ರೋಜನ್ ಬಳಸಿ ಉತ್ಪಾದಿಸಲಾಗುತ್ತದೆ. ಕಲ್ಲಿದ್ದಲು ಅಥವಾ ಡೀಸೆಲ್ ಅನ್ನು ಸುಡುವ ಅಗತ್ಯವನ್ನು ತೆಗೆದುಹಾಕುತ್ತದೆ ಮತ್ತು ಯಾವುದೇ ಹೊಗೆಯನ್ನು ಹೊರಸೂಸುವುದಿಲ್ಲ. ಈ ಕಾರಣಕ್ಕಾಗಿ ಇದನ್ನು ರೈಲು ಸಾರಿಗೆಯ ಅತ್ಯಂತ ಶುದ್ಧ ವಿಧಾನವೆಂದು ಪ್ರಶಂಸಿಸಲಾಗುತ್ತಿದೆ.

Recent Articles

spot_img

Related Stories

Share via
Copy link