
ಬೆ0ಗಳೂರು: ಜ್ವಲಂತ ಸಮಸ್ಯೆಗಳ ಚರ್ಚೆಗೆಂದು ಕರೆಯಲಾಗಿದ್ದ ರಾಜ್ಯ ವಿಧಾನ ಮಂಡಲ ಮುಂಗಾರು ಅಧಿವೇಶನ ನಿಗದಿತ ಅವಧಿಗೂ ಮೂರು ದಿನ ಮುನ್ನವೇ ಮುಕ್ತಾಯಗೊಂಡಿದೆ. ಆಗಸ್ಟ್ 13ರಂದು ಆರಂಭವಾದ ಅಧಿವೇಶನ 27ರವರೆಗೆ ನಡೆಯಬೇಕಿತ್ತು. ಪ್ರತಿದಿನ ಗದ್ದಲ, ಕೋಲಾಹಲ, ಆರೋಪ, ಪ್ರತ್ಯಾರೋಪಗಳ ಕಾರಣ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಸದನದ ಹೊರಗಡೆಯಂತೆ ಸದನದ ಒಳಗೂ ವಾಲ್ಮೀಕಿ ನಿಗಮದ ಹಗರಣ ಮತ್ತೆ ಪ್ರತಿಧ್ವನಿಸಿತು. ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸಭೆಯಲ್ಲಿ ವಿಪಕ್ಷಗಳು ಪ್ರತಿಭಟನೆ ಮುಂದುವರೆಸಿದವು. ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದವು. ಈ ಹಿನ್ನೆಲೆಯಲ್ಲಿ ಅಧಿವೇಶನ ಅವಧಿಗೂ ಮುನ್ನವೇ ಮುಂದೂಡಿಕೆಯಾಗಿದೆ.
ಮುಖ್ಯಮAತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಇದು ಮೊದಲ ಅಧಿವೇಶನ. ಸಭಾಧ್ಯಕ್ಷರಾದ ಜಿ.ಎಸ್. ಪಾಟೀಲ್, ಉಪಸಭಾಧ್ಯಕ್ಷರಾದ ಮಾಂಕಾಳ ವೈದ್ಯ, ಸಭಾಪತಿ ಸಲೀಂ ಅಹ್ಮದ್, ಉಪ ಸಭಾಪತಿ ಉಮಾಶ್ರೀ ಅವರಿಗೂ ಇದು ಚೊಚ್ಚಲ ಅಧಿವೇಶನ. ಅದರೆ ಪ್ರತಿಪಕ್ಷಗಳು ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಬಿಗಿಪಟ್ಟು ಹಿಡಿದವು. ಸರ್ಕಾರ ಮಣಿಯಲಿಲ್ಲ. ಈ ಗದ್ದಲ ಮತ್ತು ಕೋಲಾಹಲದ ನಡುವೆಯೂ ಸರ್ಕಾರ ಕೆಲವು ಪ್ರಮುಖ ವಿಧೇಯಕಗಳನ್ನು ಅಂಗೀಕರಿಸುವಲ್ಲಿ ಯಶಸ್ವಿಯಾಗಿದೆ.
ಸದನದ ಹೊರಗಡೆಯಂತೆ ಸದನದ ಒಳಗೂ ವಾಲ್ಮೀಕಿ ನಿಗಮದ ಹಗರಣ ಮತ್ತೆ ಪ್ರತಿಧ್ವನಿಸಿತು. ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸಭೆಯಲ್ಲಿಂದು ವಿಪಕ್ಷಗಳು ಪ್ರತಿಭಟನೆ ಮುಂದುವರೆಸಿದವು. ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದವು.
ಕಲಾಪ ಆರಂಭವಾಗುತ್ತಿದAತೆ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಇದು ಬಂಡ ಸರ್ಕಾರ. ಬೃಷ್ಟಚಾರದಲ್ಲಿ ಭಾಗಿಯಾದ ಸಚಿವರ ರಾಜೀನಾಮೆ ಪಡೆಯುವಲ್ಲಿ ವಿಫಲವಾಗಿದೆ ಎಂದರು.
ಸAಸದೀಯ ವ್ಯವಹಾರಗಳ ಸಚಿವ ಕೃಷ್ಣೇಬೈರೇಗೌಡ, ರಾಜ್ಯದಲ್ಲಿ ಮಳೆ ಕೈಕೊಟ್ಟು ಬರಬಂದಿದೆ. ಎದುರಾಗಿರುವ ಬರಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡಿ ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರತಿಪಕ್ಷ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಆರ್.ಅಶೋಕ ಮಾತನಾಡಿ, ವಾಲ್ಮೀಕಿ ಹಗರಣದಲ್ಲಿ ಭಾಗಿಯಾದ ಸಚಿವರ ರಾಜೀನಾಮೆ ಪಡೆಯದೆ ಬಂಡತನ ಪ್ರದರ್ಶಿಸುತ್ತಿದೆ. ಸರ್ಕಾರದ ನಿಲುವುವನ್ನು ಖಂಡಿಸಿ ಸದನದಲ್ಲಿ ಹಗಲು ರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದರು
ಅಬಕಾರಿ ಸಚಿವ ಶಿವಲಿಂಗೇಗೌಡ ಮಾತನಾಡಿ, ಚರ್ಚೆಗೆ ಸರ್ಕಾರ ಸಿದ್ದವಿದೆ. ಪ್ರತಿಪಕ್ಷಸದಸ್ಯರ ವರ್ತನೆ ಸದನಕ್ಕೆ ಶೋಭೆಯಲ್ಲ. ನಾಗೇಂದ್ರ ವಿರುದ್ದದ ಆರೋಪ ಸಾಬೀತು ಪಡಿಸಿ. ನಾನು ಸದನಕ್ಕೆ ಬಂದು 25 ವರ್ಷ ಆಯಿತು. ಪ್ರತಿಪಕ್ಷಗಳ ಇಂತಹ ಕೆಟ್ಟ ವರ್ತನೆ ನೋಡಿಲ್ಲ ಎಂದು ಕಿಡಿಕಾರಿದರು. ಪ್ರತಿಪಕ್ಷ ಸದಸ್ಯ ಸುನೀಲ್ ಕುಮಾರ್ ಮಾತನಾಡಿ ಮೊದಲು ಸಚಿವರ ರಾಜೀನಾಮೆ ಪಡೆಯಿರಿ ನಂತರ ಚರ್ಚೆ ಮಾಡಲು ನಾವು ಸಿದ್ದ ಎಂದರು.
ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪ್ರತಿಪಕ್ಷ ಸದಸ್ಯರು ಸಭಾಧ್ಯಕ್ಷರ ಮುಂದಿನ ಬಾವಿಗೆ ನುಗ್ಗಿ ಪ್ರತಿಭಟನೆ ಮುಂದುವರಿಸಿ, ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಘೋಷಣೆ ಕೂಗಿದರು. ಭೋಜನ ವಿರಾಮದ ನಂತರ ಕಲಾಪ ಆರಂಭವಾಗುತ್ತಿದ್ದAತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದನದಲ್ಲಿ 7042.69 ಕೋಟಿ ರೂಪಾಯಿ ಪೂರಕ ಅಂದಾಜು ಮಂಡಿಸಿದರು.
ಆರ್. ಅಶೋಕ್ ಮಾತನಾಡಿ ಪೂರಕ ಅಂದಾಜನ್ನು ಏಕ ಪಕ್ಷೀಯವಾಗಿ ಒಪ್ಪಿಗೆ ಪಡೆಯಬಾರದು ಇದರ ಮೇಲೆ ಚರ್ಚೆ ನಡೆಯಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಡಿಸಿದ ಕರ್ನಾಟಕ ಧನವಿಯೋಗ ತಿದ್ದುಪಡಿ ವಿಧೇಯಕ 2026 ಹಾಗೂ ಕರ್ನಾಟಕ ಸಕಾಲ ಸೇವೆಗಳ ತಿದ್ದುಪಡಿ ವಿಧೇಯಕ 2026 ಕ್ಕೂ ಸದನದಲ್ಲಿ ಒಪ್ಪಿಗೆ ದೊರೆಯಿತು.
ಉಪಮುಖ್ಯಮಂತ್ರಿ ಡಾ ಜಿ.ಪರಮೇಶ್ವರ್ ಬರಪರಿಸ್ಥಿತಿಯ ಕುರಿತು ಹೇಳಿಕೆ ನೀಡಿ, 1976 ನಂತರ ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿ ಎದುರಾಗಿದೆ. 240 ತಾಲ್ಲೂಕುಗಳ ಪೈಕಿ 175 ತಾಲ್ಲೂಕಿನಲ್ಲಿ ಮಳೆ ಕೊರತೆ ಎದುರಾಗಿದೆ. 14 ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಬರಪರಿಸ್ಥಿತಿ ಎದುರಿಸಲು ಹಣದ ಕೊರತೆಯಿಲ್ಲ. ಸರ್ಕಾರ ಎಲ್ಲಾ ರೀತಿಯ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದೆ. ಬರ ಪೀಡಿತ ಪ್ರದೇಶಗಳಲ್ಲಿ ಜನರು ನಿರುದ್ಯೋಗ ಕಾರಣದಿಂದ ಗುಳೆ ಹೋಗುವುದನ್ನು ತಪ್ಪಿಸಿ ಅವರಿಗೆ ಉದ್ಯೋಗ ಒದಗಿಸಲು 16ಸಾವಿರದ 460 ಕಾಮಗಾರಿಗಳನ್ನು ಸೃಷ್ಟಿಸಲಾಗಿದೆ ಎಂದರು.
ಮುAದಿನ ಸಚಿವ ಸಂಪುಟ ಸಭೆಯಲ್ಲಿ ಬರಪೀಡಿತ ತಾಲ್ಲೂಕುಗಳನ್ನು ಘೋಷಿಸಲಾಗುವುದು. 144 ತಾಲ್ಲೂಕುಗಳಲ್ಲಿ 25 ವಾರಗಳಿಗಾಗುವಷ್ಟು ಮೇವಿನ ಸಂಗ್ರಹವಿದೆ. ಹೆಚ್ಚವರಿ ಮೇವಿಗಾಗಿ ಕೆಎಂಎಫ್ ಗೆ 25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಮಳೆ ಅಭಾವದಿಂದ ರಾಜ್ಯದಲ್ಲಿ 84.14 ಲಕ್ಷ ಹೆಕ್ಟೇರ್ ಭೂಮಿಯ ಪೈಕಿ 60 ಲಕ್ಷ ಹೆಕ್ಟರ್ ಜಮೀನಲ್ಲಿ ಬಿತ್ತನೆ ಮಾಡಲಾಗಿದೆ. 4.36 ಲಕ್ಷ ಹೆಕ್ಟೆರ್ ಪ್ರದೇಶದ ತೋಟಗಾರಿಕಾ ಬೆಳೆಗಳ ಪೈಕಿ 2.45 ಲಕ್ಷ ಹೆಕ್ಟರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿದೆ. ಮಳೆ ಅಭಾವದಿಂದ ಕೆಲ ಪ್ರದೇಶದಲ್ಲಿ ಬಿತ್ತನೆಯಾದ ಬೆಳೆ ನಾಶವಾಗಿದೆ ಎಂದು ತಿಳಿಸಿದರು.
ನಂತರ ಸಭಾಧ್ಯಕ್ಷ ಜಿ.ಎಸ್.ಪಾಟೀಲ್ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು. ಬಳಿಕ ಪ್ರತಿಪಕ್ಷಗಳ ಸದಸ್ಯರು ಮುಂದುವರಿದ ಧರಣಿ ಹಾಗೂ ಅಹೋರಾತ್ರಿ ಪ್ರತಿಭಟನೆಯ ನಿರ್ಧಾರದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಜಿ.ಎಸ್.ಪಾಟೀಲ್ ಸದನವನ್ನು ಅನಿರ್ಧಿಷ್ಟ ಕಾಲ ಮುಂದೂಡುವುದಾಗಿ ಘೋಷಿಸಿದರು. ವಿಧಾನಪರಿಷತ್ತಿನಲ್ಲೂ ಗದ್ದಲ, ಕೋಲಾಹಲ ಹಿನ್ನೆಲೆಯಲ್ಲಿ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಯಿತು.








