ಅನಂತ್ ನಾಗ್‌ಗೆ ‘ಫಾಲ್ಕೆ’ ಪುರಸ್ಕಾರ

ಕನ್ನಡಕ್ಕೆ ಮತ್ತೋಂದು ‘ದಾದಾಸಾಹೇಬ್ ಫಾಲ್ಕೆ’ಯ ಕಿರೀಟ

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಅನಂತ್ ನಾಗ್ ಅವರಿಗೆ ಪ್ರಸಕ್ತ 2024ನೇಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಪ್ರಶಸ್ತಿ ಲಭ್ಯವಾಗಿದೆ. ಡಾ.ರಾಜ್‌ಕುಮಾರ್ ನಂತರ ಭಾರತೀಯ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾದ ಎರಡನೇ ನಟನೆಂಬ ಹೆಗ್ಗಳಿಕೆಗೆ ಅನಂತ್ ನಾಗ್ ಪಾತ್ರರಾಗಿದ್ದಾರೆ. ಸೆಪ್ಟೆಂಬರ್ 22ರಂದು ಗುಜರಾತ್‌ನ ಕೆವಾಡಿಯಾದಲ್ಲಿ ನಡೆಯುವ 72ನೇ ರಾಷ್ಟಿçÃಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಗೌರವ ಪ್ರದಾನ ನಡೆಯಲಿದೆ.

ಕನ್ನಡ ಚಿತ್ರರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಾಗಿ 1995ರ ಸಾಲಿನ (43ನೇ ರಾಷ್ಟಿçÃಯ ಚಲನಚಿತ್ರ ಪ್ರಶಸ್ತಿ) ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ವರನಟ ಡಾ. ರಾಜ್‌ಕುಮಾರ್ ಅವರಿಗೆ ನೀಡಿ ಗೌರವಿಸಲಾಗಿತ್ತು. ಇವರು ಈ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗ ನಟ ಎಂಬ ಹೆಗ್ಗಳಿಕೆ ಪಡೆದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಕನ್ನಡದ ಬೇರೆಯಾವ ನಟರು ಕೂಡ ಈ ಪ್ರಶಸ್ತಿಗೆ ಭಾಜನರಾಗಿರಲಿಲ್ಲ. ಆದರೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ 2024ನೇ ಸಾಲಿನ ಗೌರವಕ್ಕೆ ಅನಂತ್ ನಾಗ್ ಅವರು ಭಾಜನರಾಗಿರೋದು ಕನ್ನಡಿಗರಿಗೆ ಸಂತಸದ ಜೊತೆಗೆ ಗೌರವವನ್ನೂ ಹೆಚ್ಚಿಸಿದೆ.

ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರಗದಲ್ಲಿ ಸಕ್ತಿಯರಾಗಿರುವ ಅನಂತ್ ನಾಗ್, ಕನ್ನಡ, ಹಿಂದಿ ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಲಾತ್ಮಕ ಮತ್ತು ವಾಣಿಜ್ಯ ಮಾದರಿಯ ಚಿತ್ರಗಳಲ್ಲಿ ಮನೋಜ್ಞ ಅಭಿನಯದ ಮೂಲಕ ಕೋಟ್ತಂತರ ಅಭಿಮಾನಿಗಳ ಮನ ಗೆದ್ದಿರುವ ಅನಂತ್ ನಾಗ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಕನ್ನಡ ಚಿತ್ರರಂಗದ ದೊರೆತ ಹೆಮ್ಮೆಯಾಗಿದೆ.

ಮೋದಿ ಅಭಿನಂದನೆ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಿಹಿ ಸುದ್ದಿಯನ್ನು ಹಂಚಿಕೊAಡು ಹಿರಿಯ ನಟನಿಗೆ ಎಕ್ಸ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

Recent Articles

spot_img

Related Stories

Share via
Copy link