
ಬೆಂಗಳೂರು: ಪುರುಷರಿಗೂ ಶಕ್ತಿ ಯೋಜನೆ ಟಿಕೆಟ್ ನೀಡಿ ಹಣ ಪಡೆದು ವಂಚಿಸುತ್ತಿದ್ದ ಐವರು ಬಿಎಂಟಿಸಿ ಕಂಡಕ್ಟರ್ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ವೈಯಕ್ತಿಕ ಯುಪಿಐ ಕ್ಯೂಆರ್ ಕೋಡ್ಗಳನ್ನು ಬಳಸಿ ನಿಗಮಕ್ಕೆ ಬರಬೇಕಿದ್ದ ಹಣವನ್ನು ಲಪಟಾಯಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಲಕ್ಷಾಂತರ ರೂ. ವಂಚನೆ ಬಯಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಕನ್ನಡ ಓದಲು ಬಾರದ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ಅಲ್ಲದೇ ಅಕೌಂಟ್ನಲ್ಲಿಯೂ ಸಾವಿರಾರು ರೂ. ಹಣ ಇರುವುದು ಪತ್ತೆಯಾಗಿದೆ. ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳ ತಪಾಸಣೆ ವೇಳೆ ಕಂಡಕ್ಟರ್ಗಳ ವಂಚನೆ ಬಯಲಾಗಿದೆ.
ಕಂಡಕ್ಟರ್ಗಳು ವಂಚನೆ:
ಸೂರ್ಯನಾರಾಯಣ ಡಿಪೋ- 18, – 6,117 ರೂ.
ಬೊಮ್ಮಲಿಂಗೇಶ್ ಸಿ ಡಿಪೋ- 18, – : 16,404 ರೂ.
ಬ್ರಿಜೇಶ್ ಬಾಬು- ಡಿಪೋ- 51, – 9,795 ರೂ.
ಮೋಹನ್- ಡಿಪೋ- 18, – 6,117 ರೂ.
ಎನ್.ಪ್ರಕಾಶ್- ಡಿಪೋ – 6- 6,312 ರೂ.
ಒಟ್ಟು 1,82,568 ರೂಪಾಯಿ ಬಿಎಂಟಿಸಿಗೆ ವಂಚನೆ ಮಾಡಲಾಗಿದೆ. ಈ ಹಿಂದೆಯೂ ಇದೇ ವಿಚಾರಕ್ಕೆ ಕೆಲವರನ್ನು ಬಿಎಂಟಿಸಿ ಅಮಾನತು ಮಾಡಿತ್ತು.








