
ಚಳ್ಳಕೆರೆ : ಕರ್ನಾಟಕ ರಾಜ್ಯದ ಪ್ರಭಾವಿರಾಜಕೀರಣಿಯಲ್ಲಿಒಬ್ಬರಾದ ಜಿಲ್ಲಾ ಉಸ್ತುವಾರಿ, ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್‌ರವರ ಮನೆಯ ಕಾಂಪೌAಡ್‌ನಲ್ಲಿ ವಾಮಾಚಾರ ನಡೆದ ಬಗ್ಗೆ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಚಿವರ ಸಾವಿಗೆ ವಾಮಾಚಾರ ಕಾರಣವಾಯಿತೇ ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಆದರೆ, ಮೃತಪಟ್ಟ ನಾಲ್ಕನೇ ದಿನ ಅವರ ಸಾವಿನ ಬಗ್ಗೆ ವಾಮಾಚಾರದ ನಂಟಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಸುಧಾಕರ ಸಾವಿನ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಲಾರಂಭಿಸಿದೆ. ನಗರದ ಬೆಂಗಳೂರು ರಸ್ತೆಯಲ್ಲಿನ ಗೊಮ್ಮಟ ನಿಲಯದ ಒಳಭಾಗದಲ್ಲಿ ಬೋರ್‌ವೆಲ್ ಪಕ್ಕದಲ್ಲೇ ತಾಮ್ರದ ತಗಡು, ನಿಂಬೆಹಣ್ಣು, ತಾಯತ ಹಾಗೂ ಮಟನ್‌ಪೀಸ್ ಪತ್ತೆಯಾಗಿದ್ದು ಯಾರೋ ಸುಧಾಕರ ವಿರೋಧಿಗಳು ಮಾಟಮಾಡಿಸಿರಬಹುದು ಎಂಬ ಶಂಕೆ ಮೂಡಿದೆ.

ಬೋರ್‌ವೆಲ್ ಪಕ್ಕ ದೊರೆತ ವಾಮಾಚಾರದ ವಸ್ತುಗಳನ್ನು ಸುಧಾಕರ ಸಿಬ್ಬಂದಿ ಸುಟ್ಟುಹಾಕಿದ್ದಾರೆ ಎನ್ನಲಾಗಿದೆ. ಆದರೆ, ವಿಡಿಯೋ ವೈರಲ್ ಆಗಿದೆ. ಸುಧಾಕರ ನಿಧನದಲ್ಲಿ ವಾಮಾಚಾರದ ಪಾತ್ರ ಇದೆಯೋ, ಇಲ್ಲವೆಂಬ ಬಗ್ಗೆ ಚರ್ಚೆ ಮುಂದುವರೆದಿದೆ. ಮೃತಪಟ್ಟ ನಂತರ ಸುಧಾಕರವರ ಬಗ್ಗೆ ಅಪಾರವಾದ ಅಭಿಮಾನ ಇರುವ ಜನ ಇನ್ನೂ ಕಣ್ಣಿರು ಹಾಕುತ್ತಿರುವ ಸಂದರ್ಭದಲ್ಲಿ ವಾಮಾಚಾರ ನಡೆದಿರುವ ಬಗ್ಗೆ ಬಂದಿರುವ ವಿಡಿಯೋ ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ.
ಸುಧಾಕರ ನಿವಾಸದಲ್ಲಿ ದೊರೆತ ವಾಮಾಚಾರದ ಬಗ್ಗೆ ಯಾವುದೇ ಪ್ರಕ್ರಿಯೆಯನ್ನು ನೀಡಲು ಅವರ ಕುಟುಂಬ ವರ್ಗನಿರಾಕರಿಸಿದೆ. ವಾಮಾಚಾರದ ನಂಟಿನ ಬಗ್ಗೆ ಪ್ರಚಾರವಾದ ಸಾಮಾಜಿಕ ಜಾಲತಾಣಗಳ ವರದಿಯ ಬಗ್ಗೆಯೂ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದು, ಸುಧಾಕರವರ ಸಾವಿನ ಬಗ್ಗೆ ತನಿಖೆ ನಡೆಸಲು ಪೊಲೀಸ್ ಇಲಾಖೆ ಮುಂದಾಗಬೇಕೆAದು ಆಗ್ರಹಿಸಿದ್ದಾರೆ.








