ಸಂಘರ್ಷದ ನೆರಳಲ್ಲಿ ಇಂಧನ ದರ ಏರಿಕೆ : ಗ್ರಾಹಕರ ಜೇಬಿಗೆ ಕತ್ತರಿ

ನವದೆಹಲಿ : ಪಶ್ಚಿಮ ಏಷ್ಯಾ ಸಂಘರ್ಷದಿAದ ಉಂಟಾದ ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್‌ಗೆ ತಲಾ 3 ರೂ. ಹೆಚ್ಚಿಸಲಾಗಿದೆ. ಈ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್- ಡೀಸೆಲ್ ಮಿತವಾಗಿ ಬಳಸಿ, ಸಾರ್ವಜನಿಕ ಸಾರಿಗೆ ಬಳಸುವಂತೆ ಮನವಿ ಮಾಡಿದ ಬೆನ್ನಲ್ಲೇ ಪೆಟ್ರೋಲ್- ಡೀಸೆಲ್ ದರ ಏರಿಕೆಯಾಗಿದೆ. ಪರಿಷ್ಕöÈತ ದರಗಳು ಇಂದಿನಿAದಲೇ ಜಾರಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಶ್ರೀಸಾಮಾನ್ಯನಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮತ್ತಷ್ಟು ಬರೆ ಹಾಕಿದಂತಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ನಡುವೆ ಸಿಎನ್‌ಜಿ ಬೆಲೆಯಲ್ಲಿ ಕೂಡ 2 ರೂಪಾಯಿ ಏರಿಕೆಯಾಗಿದೆ. ಹೊಸ ದರ ಪರಿಷ್ಕರಣೆಯಿಂದ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 16.17 ರೂ. ಆಗಿದ್ದು, ಡೀಸೆಲ್ ಬೆಲೆ 94.10 ರೂ. ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94.77 ರೂ.ಗಳಿಂದ 97.77 ರೂ.ಗಳಿಗೆ ಮತ್ತು ಡೀಸೆಲ್ ದರ ಲೀಟರ್‌ಗೆ 87.67 ರೂ.ಗಳಿಂದ 90.67 ರೂ.ಗಳಿಗೆ ಏರಿಕೆಯಾಗಿದೆ

ಇತರ ಮಹಾನಗರಗಳಲ್ಲಿಯೂ ಪೆಟ್ರೋಲ್ ಬೆಲೆಗಳನ್ನು ಪರಿಷ್ಕರಿಸಲಾಗಿದ್ದು, ಕೋಲ್ಕತ್ತಾದಲ್ಲಿ ಲೀಟರ್‌ಗೆ 108.74 ರೂ., ಮುಂಬೈನಲ್ಲಿ 106.68 ರೂ. ಮತ್ತು ಚೆನ್ನೆöÊನಲ್ಲಿ 103.67 ರೂ. ತಲುಪಿದ್ದು, ಪ್ರತಿ ಲೀರ‍್ಗೆ 2.83 ರಿಂದ 3.29 ರೂ.ಗಳವರೆಗೆ ಏರಿಕೆಯಾಗಿದೆ.

ಡೀಸೆಲ್ ಬೆಲೆಗಳು ಸಹ ಮಹಾನಗರಗಳಲ್ಲಿ ತೀವ್ರ ಏರಿಕೆ ಕಂಡಿದ್ದು, ಕೋಲ್ಕತ್ತಾದಲ್ಲಿ ಲೀಟರ್‌ಗೆ 95.13 ರೂ., ಮುಂಬೈನಲ್ಲಿ 93.14 ರೂ. ಮತ್ತು ಚೆನ್ನೆöÊನಲ್ಲಿ 95.25 ರೂ.ಗಳಿಗೆ ಏರಿದೆ.

ದೆಹಲಿಯಲ್ಲಿ ಸಿಎನ್‌ಜಿ ಬೆಲೆಗಳನ್ನು ಕೆಜಿಗೆ 2 ರೂ.ಗಳಷ್ಟು ಹೆಚ್ಚಿಸಲಾಗಿದೆ. ನಿನ್ನೆಯವರೆಗೆ 85 ರೂ.ಗಳಷ್ಟಿದ್ದ ದರ ಈಗ ಇದು 87 ರೂ.ಗಳಿಗೆ ಏರಿದೆ.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಗಳು ಏರುತ್ತಿರುವ ಮತ್ತು ಪಶ್ಚಿಮ ಏಷ್ಯಾದಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಹೊರತಾಗಿಯೂ ಭಾರತ ಇಲ್ಲಿಯವರೆಗೆ ಚಿಲ್ಲರೆ ಇಂಧನ ಬೆಲೆಗಳಲ್ಲಿ ಪ್ರಮುಖ ಏರಿಕೆ ಮಾಡಿರಲಿಲ್ಲ. ಇದೀಗ ಏಕಾಏಕಿ ಮೂರು ರೂಪಾಯಿ ಹೆಚ್ಚಿಸಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಸುಮಾರು 11 ವಾರಗಳ ಕಾಲ ಚಿಲ್ಲರೆ ಇಂಧನ ಬೆಲೆ ಸ್ಥಿರವಾಗಿರಿಸಿದ್ದವು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅನುಭವಿಸುತ್ತಿರುವ ನಷ್ಟ ಸರಿದೂಗಿಸಲು ಅನಿವರ‍್ಯವಾಗಿ ಪೆಟ್ರೋಲ್- ಡೀಸೆಲ್ ದರ ಹೆಚ್ಚಿಸಲಾಗಿದೆ.

ಲೋಕಸಭಾ ಚುನಾವಣೆಗೆ ಮುನ್ನ ಮಾರ್ಚ್ 2024 ರಲ್ಲಿ ಘೋಷಿಸಲಾದ ಒಂದು ಬಾರಿ ಲೀಟರ್‌ಗೆ 2 ರೂ. ಕಡಿತ ಹೊರತುಪಡಿಸಿ, ಏಪ್ರಿಲ್ 2022 ರಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರಲಿಲ್ಲ.

ಭಾರತದ ಆಮದು ಬ್ಯಾರೆಲ್‌ಗೆ 113 – 114 ಡಾಲರ್‌ಗೆ ಏರಿಕೆ

ರಷ್ಯಾ ಉಕ್ರೇನ್ ವಿರುದ್ಧದ ಯುದ್ಧದಿಂದ ಉಂಟಾದ ಜಾಗತಿಕ ತೈಲ ಆಘಾತದಿಂದ ಗ್ರಾಹಕರನ್ನು ರಕ್ಷಿಸಲು ಇಂಡಿಯನ್ ಆಯಿಲ್ ಕಾಪೋರೇಷನ್, ಭಾರತ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್ ಏಪ್ರಿಲ್ 2022 ರಲ್ಲಿ ದೈನಂದಿನ ಇಂಧನ ಬೆಲೆ ಪರಿಷ್ಕರಣೆಗಳನ್ನು ಸ್ಥಗಿತಗೊಳಿಸಿದವು. ಆರಂಭದಲ್ಲಿ ಮೂರು ಸಂಸ್ಥೆಗಳು ಭಾರೀ ನಷ್ಟವನ್ನು ಅನುಭವಿಸಿದರೂ, ಕಚ್ಚಾ ಬೆಲೆಗಳು ಕಡಿಮೆಯಾದಾಗ ಅವು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡವು. ಪಶ್ಚಿಮ ಏಷ್ಯಾದಲ್ಲಿನ ಹೊಸ ಸಂಘರ್ಷ ಮತ್ತೊಮ್ಮೆ ಜಾಗತಿಕ ಇಂಧನ ಬೆಲೆಗಳನ್ನು ತೀವ್ರವಾಗಿ ಹೆಚ್ಚಿಸಿದೆ. ಸಂಘರ್ಷ ಉಲ್ಬಣಗೊಳ್ಳುವ ಮೊದಲು ಫೆಬ್ರವರಿಯಲ್ಲಿ ಬ್ಯಾರೆಲ್‌ಗೆ ಸರಾಸರಿ 69 ಡಾಲರ್ ನಷ್ಟದ್ದ ಭಾರತದ ಆಮದು ಬ್ಯಾರೆಲ್‌ಗೆ ಸುಮಾರು 113-114 ಡಾಲರ್‌ಗೆ ಏರಿಕೆಯಾಗಿದೆ.

ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ಪೆಟ್ರೋಲ್, ಡೀಸೆಲ್ ತಲಾ ಮೂರು ಹೆಚ್ಚಳ
ಸಿಎನ್‌ಜಿ ಬೆಲೆಯಲ್ಲಿ 2 ರೂಪಾಯಿ ಏರಿಕೆ
ವಾಹನ ಸವಾರರ ಬೇಬಿಗೆ ಮತ್ತಷ್ಟು ಹೊರೆ

Recent Articles

spot_img

Related Stories

Share via
Copy link