ಚೋಳೇನಹಳ್ಳಿ ಕೆರೆಯಲ್ಲಿ ಸಾರ್ವಜನಿಕರಿಗೆ ”ಬೋಟಿಂಗ್” ವ್ಯವಸ್ಥೆ

ಮಧುಗಿರಿ:-

  ಪಟ್ಟಣಕ್ಕೆ ಕುಡಿಯುವ ನೀರೋದಗಿಸುವ ಚೋಳೇನಹಳ್ಳಿ ಕೆರೆಯಲ್ಲಿ ಸಾರ್ವಜನಿಕರಿಗೆ ”ಬೋಟಿಂಗ್” ವ್ಯವಸ್ಥೆಯನ್ನು ಇಂದಿನಿಂದ ಫೆಬ್ರವರಿ-5ರ ರಥಸಪ್ತಮಿಯವರೆವಿಗೂ ವ್ಯವಸ್ಥೆ ಮಾಡಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಆರ್. ರಾಜೇಂದ್ರ ತಿಳಿಸಿದ್ದಾರೆ.

  ಶುಕ್ರವಾರದಂದು 50 ವರ್ಷಗಳ ನಂತರ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮದೇವರ ತೆಪ್ಪೋತ್ಸವ ಯಶಸ್ವಿಯಾಗಿ ನಡೆದ ನಂತರ ಮದುಗಿರಿಯ ಸಾರ್ವಜನಿಕರು ಮತ್ತು ಪ್ರವಾಸಿಗರಿಗಾಗಿ ಪ್ರತಿನಿತ್ಯ ಬೆಳಗ್ಗೆ 10 ರಿಂದ ಸಂಜೆ 4ರವರೆಗೂ ಈ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

   ಉಪವಿಭಾಗಾಧಿಕಾರಿ ಗೋಟುರು ಶಿವಪ್ಪ ಮಾತನಾಡಿ ಒಂದು ಬೋಟಿನಲ್ಲಿ 6 ಜನರನ್ನು ಕಂಡಯ್ಯುವ ಸಾಮರ್ಥ್ಯವಿದ್ದು ಪ್ರತಿಯೊಬ್ಬರಿಗೂ ನೂರು ರೂ ರಂತೆ ಶುಲ್ಕ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು .

   ಪುರಸಭೆ ಮಾಜಿ ಅಧ್ಯಕ್ಷ ಎಂ. ಕೆ .ನಂಜುಂಡಯ್ಯ ಮಾತನಾಡಿ ಪ್ರಪ್ರಥಮ ಬಾರಿಗೆ ಚೋಳೇನಹಳ್ಳಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದ್ದು ಎರಡು ದೊಡ್ಡ ಬೋಟುಗಳು ಹಾಗೂ ಒಂದು ಚಿಕ್ಕ ಬೋಟ್ ನಲ್ಲಿ ಒಬ್ಬರು ಮಾತ್ರ ಕೆರೆಯಲ್ಲಿ ಸುತ್ತಾಡಬಹುದಾಗಿತ್ತು, ಒಬ್ಬ ಪ್ರಯಾಣಿಕ ನಿಗೆ ದೊಡ್ಡ ಬೋಟಿನಲ್ಲಿ ನೂರು ರೂಗಳು ಚಿಕ್ಕಬೋರ್ಟಿನಲ್ಲಿ ಒಬ್ಬರಿಗೆ ರೂ.300 ಗಳನ್ನು ಪಡೆಯಲಾಗುವುದು. ಇದು ಬೋಟಿಂಗ್ ನಡೆಸುವವರ ಖರ್ಚು ವೆಚ್ಚಕ್ಕೆ ಸರಿದೂಗಿಸಲಾಗುವುದು ಎಂದು ತಿಳಿಸಿ, ಸಾರ್ವಜನಿಕರ ಸ್ಪಂದನೆಯನ್ನು ಆಧರಿಸಿ ಇನ್ನೂ ಮುಂದಿನ ದಿನಗಳಲ್ಲಿ ಮುಂದುವರೆಸಲು ಯೋಚನೆ ಇದೆ ಎಂದರು.

   ಈ ಹಿಂದೆ ಚಲನಚಿತ್ರ. ನಟ ದಿವಂಗತ ಶಂಕರ್ ನಾಗ್ ರವರು ಮದುಗಿರಿ ಏಕಶಿಲಾ ಬೆಟ್ಟ ಮತ್ತು ನಂದಿ ಬೆಟ್ಟಕ್ಕೆ ರೂಪ್ ವೇ ಹಾಗೂ ಸಿದ್ದರಕಟ್ಟೆಯಲ್ಲಿ ಬೋಟಿಂಗ್ ವ್ಯವಸ್ಥೆಯ ಕನಸು ಕಂಡಿದ್ದರು. ಅದರ ಪ್ರಥಮ ಭಾಗವಾಗಿ ಎಂ.ಎಲ್ಸಿ. ಆರ್. ರಾಜೇಂದ್ರ ರವರ ಮಾರ್ಗದರ್ಶನದಂತೆ ಚೋಳೇನಹಳ್ಳಿ ಕೆರೆಯಲ್ಲಿ ಪ್ರಥಮ ಬಾರಿಗೆ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ.

Recent Articles

spot_img

Related Stories

Share via
Copy link