ಬೆಂಗಳೂರು
ರಾಜ್ಯದಲ್ಲಿ ನಿತ್ಯ ತರಕಾರಿಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಇವತ್ತು ಒಂದು ರೀತಿ ಬೆಲೆ ಇದ್ದರೆ ಮರು ದಿನ ಇನ್ನೊಂದು ರೀತಿ ಬೆಲೆ ಇರುತ್ತದೆ. ಬೆಲೆ ಏರಿಕೆಯಿಂದಾಗಿ ಜನ ಹೈರಾಣಾಗಿದ್ದಾರೆ. ಟೊಮೆಟೋ ಬದಲಿಗೆ ಪರ್ಯಾಯವಾಗಿ ಹುಣಸೆ ಹಣ್ಣು ಬಳಕೆಗೆ ಜನ ತೀರ್ಮಾನಿಸಿದ್ದಾರೆ.
ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಚೀನಾದಿಂದ ಹದಿನೈದು ವರ್ಷ ಹಿಂದೆ! ಆದರೆ ಇಲ್ಲೊಬ್ಬ ರೈತ ಬೆಳೆದ ಟೊಮೆಟೋ ಇನ್ನೇನು ಮಾರುಕಟ್ಟೆಗೆ ಸಾಗಿಸುವ ಹೊತ್ತಿಗೆ ಟೊಮೆಟೊ ತುಂಬಿದ ಬೊಲೆರೋವನ್ನು ಖದೀಮರು ಕದ್ದಿದ್ದಾರೆ. ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಶನಿವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಹಿರಿಯೂರಿನಿಂದ ಕೋಲಾರಕ್ಕೆ ಶನಿವಾರ ರೈತ ತಾನು ಬೆಳೆದ ಟೊಮೆಟೋವನ್ನು ಸಾಗಿಸುತ್ತಿದ್ದರು.
ಈ ವೇಳೆ ಮೂವರು ಕಾರಿನಲ್ಲಿ ಟೊಮೆಟೊ ವಾಹನವನ್ನು ಹಿಂಬಾಲಿಸಿದ್ದಾರೆ. ಬೊಲೆರೋ ವಾಹನವನ್ನು ಹಿಂಬಾಲಿಸಿಕೊಂಡು ಬಂದ ಮೂವರು ಆರ್‌ಎಮ್‌ಸಿಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಬೊಲೆರೋ ವಾಹನವನ್ನು ಅಡ್ಡಗಟ್ಟಿ ನಾಟಕವಾಡಿದ್ದಾರೆ. ಟೊಮೆಟೊ ತುಂಬಿದ ವಾಹನ ತಮ್ಮ ಕಾರಿಗೆ ಪೀಣ್ಯಾ ಬಳಿ ಟಚ್ ಮಾಡಿದೆ ಎಂದು ವಾದಿಸಿದ್ದಾರೆ. ರೈತ ಮತ್ತು ಡ್ರೈವರ್ ಜೊತೆಗೆ ಮಾತಿಗಿಳಿದಿದ್ದಾರೆ. ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಹಲ್ಲೆ ಕೂಡ ಮಾಡಿದ್ದಾರೆ.
ಹಣಕ್ಕಾಗಿ ಬೇಡಿಕೆ ಕೂಡ ಇಟ್ಟಿದ್ದಾರೆ. ರೈತ ಮತ್ತು ಡ್ರೈವರ್ ತಮ್ಮ ಬಳಿ ಹಣವಿಲ್ಲ ಎಂದು ಹೇಳಿದಾಗ ಮೊಬೈಲ್‌ನಿಂದ ಹಣ ಟ್ರಾನ್ಸಫರ್ ಮಾಡಿ ಎಂದು ಒತ್ತಾಯಿಸಿದ್ದಾರೆ. ಬಳಿಕ ಬೊಲೆರೋದಲ್ಲಿ ಟೊಮೆಟೋ ಕಂಡು ತಮ್ಮ ವರಸೆ ಬದಲಾಯಿಸಿದ್ದಾರೆ. ರೈತ ಮತ್ತು ಡ್ರೈವರ್ ಕರೆದುಕೊಂಡು ಚಿಕ್ಕಜಾಲ ತನಕ ಹೋಗಿ ಅಲ್ಲಿ ರೈತನನ್ನು ಬಿಟ್ಟು, ಡ್ರೈವರ್ ಮತ್ತು ಟೊಮೆಟೋ ಸಮೇತ್ ಪರಾರಿಯಾಗಿದ್ದಾರೆ. ಸದ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಳಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ. ಇತ್ತ ಟೊಮೆಟೊ ಕಳೆದುಕೊಂಡ ರೈತ ಕಂಗಾಲಾಗಿದ್ದಾನೆ.
ಟೊಮೆಟೋ ಕಳ್ಳತನಕ್ಕೆ ಹೆದರಿ ಬೌನ್ಸರ್‌ಗಳನ್ನು ನೇಮಿಸಿಕೊಂಡ ತರಕಾರಿ ವ್ಯಾಪಾರಿ ಟೊಮೆಟೋ ಬೆಲೆ ಏರಿಕೆಯಾಗಿರುವುದರಿಂದ ಉತ್ತರ ಪ್ರದೇಶದ ವಾರಣಾಸಿಯಲ್ಲಿ, ಅಜಯ್ ಫೌಜಿ ಎಂಬ ತರಕಾರಿ ಮಾರಾಟಗಾರ ಟೊಮೇಟೊ ಕಳ್ಳತನಕ್ಕೆ ಹೆದರಿ ಬೌನ್ಸರ್‌ಗಳನ್ನು ನೇಮಿಸಿಕೊಂಡು ಖರೀದಿಗೆ ಬರುವ ಗ್ರಾಹಕರನ್ನು ನಿರ್ವಹಿಸುತ್ತಿದ್ದಾರೆ. ಟೊಮೆಟೋ ಬೆಲೆ ಹೆಚ್ಚಳಕ್ಕೆ ಕೋಲಾರ ಕಾರಣ! ಹೆಚ್ಚು ಬೆಲೆ ಇದ್ದರೂ ನಷ್ಟದ ಭೀತಿಯಲ್ಲಿ ರೈತರು ಈ ಬಗ್ಗೆ ಮಾತನಾಡಿದ ಅಜಯ್ ಫೌಜಿ, “ಟೊಮೆಟೋ ಬೆಲೆ ತುಂಬಾ ಹೆಚ್ಚಿರುವುದರಿಂದ ನಾನು ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದೇನೆ.
ಜನರು ಗಲಾಟೆ ಮಾಡುತ್ತಾ, ಟೊಮೆಟೊಗಳನ್ನು ಕಳ್ಳತನ ಮಾಡುತ್ತಿದ್ದಾರೆ. ನಮ್ಮ ಅಂಗಡಿಯಲ್ಲಿ ಟೊಮೆಟೋಗಾಗಿ ಯಾವುದೇ ವಾದ ವಿವಾದಗಳು ಬೇಡ ಹಾಗಾಗಿ ಇಲ್ಲಿ ಬೌನ್ಸರ್‌ಗಳಿದ್ದಾರೆ. ಟೊಮೆಟೊ ಕೆಜಿಗೆ ₹160ಕ್ಕೆ ಮಾರಾಟವಾಗುತ್ತಿದೆ. ಜನರು 50 ಅಥವಾ 100 ಗ್ರಾಂ ಖರೀದಿಸುತ್ತಿದ್ದಾರೆ” ಎಂದು ಹೇಳಿದರು. ಮಧ್ಯಪ್ರದೇಶದ ಅಶೋಕ್ ನಗರದಲ್ಲಿ, ಸ್ಮಾರ್ಟ್‌ಫೋನ್ ಅಂಗಡಿ ಮಾಲೀಕರು ಆಸಕ್ತಿದಾಯಕ ಕೊಡುಗೆ ನೀಡುತ್ತಿದ್ದಾರೆ. ಅವರ ಅಂಗಡಿಯಿಂದ ಮೊಬೈಲ್ ಫೋನ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಕಾಂಪ್ಲಿಮೆಂಟರಿಯಾಗಿ 2 ಕೆಜಿ ಟೊಮೆಟೋಗಳನ್ನು ನೀಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ