ಬೋಂಡಿ ಬೀಚ್‌ನಲ್ಲಿ 16 ಜನರ ಹತ್ಯೆಗೈದ ಬಂದೂಕುಧಾರಿಗಳ ಗುರುತು ಪತ್ತೆ; ಪಾಕ್‌ನ ತಂದೆ-ಮಗನಿಂದ ಕೃತ್ಯ

ಸಿಡ್ನಿ 

    ಇಲ್ಲಿನ ಬೋಂಡಿ ಬೀಚ್‌ನಲ್ಲಿ ನಡೆದ ಭಯೋತ್ಪಾದಕ(Bondi Beach Terror Attack) ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 16 ಕ್ಕೆ ಏರಿದೆ ಎಂದು ಆಸ್ಟ್ರೇಲಿಯಾದ ಪೊಲೀಸರು ಸೋಮವಾರ ದೃಢಪಡಿಸಿದ್ದಾರೆ. ತನಿಖಾಧಿಕಾರಿಗಳು ಇಬ್ಬರು ಬಂದೂಕುಧಾರಿಗಳನ್ನು ತಂದೆ ಮತ್ತು ಮಗ ಎಂದು ಗುರುತಿಸಿದ್ದಾರೆ. ಬೇರೆ ಯಾವುದೇ ದಾಳಿಕೋರರು ಭಾಗಿಯಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಆಚರಣೆಯ ಸಮಯದಲ್ಲಿ ಸಿಡ್ನಿಯ ಯಹೂದಿ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡು ನಡೆದ ಗುಂಡಿನ ದಾಳಿಯನ್ನು ಅಧಿಕೃತವಾಗಿ ಭಯೋತ್ಪಾದಕ ದಾಳಿ ಎಂದು ವರ್ಗೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನ್ಯೂ ಸೌತ್ ವೇಲ್ಸ್ ಪೊಲೀಸ್ ಆಯುಕ್ತ ಮಾಲ್ ಲ್ಯಾನ್ಯನ್ ಮಾತನಾಡಿ, ಅಧಿಕಾರಿಗಳು ರಾತ್ರೋರಾತ್ರಿ ತನಿಖೆಯಲ್ಲಿ ತ್ವರಿತ ಪ್ರಗತಿ ಸಾಧಿಸಿದ್ದಾರೆ ಮತ್ತು ದಾಳಿಯಲ್ಲಿ ಕೇವಲ ಇಬ್ಬರು ದುಷ್ಕರ್ಮಿಗಳು ಭಾಗಿಯಾಗಿದ್ದಾರೆ ಎಂದು ಹೇಳಿದರು.”ನಾವು ತನಿಖೆಯಲ್ಲಿ ರಾತ್ರೋರಾತ್ರಿ ವೇಗದಲ್ಲಿ ಪ್ರಗತಿ ಸಾಧಿಸಿದ್ದೇವೆ ಮತ್ತು ಕೈಗೊಂಡ ತನಿಖೆಗಳ ಪರಿಣಾಮವಾಗಿ, ನಾವು ಮತ್ತಷ್ಟು ಅಪರಾಧಿಗಳನ್ನು ಹುಡುಕುತ್ತಿಲ್ಲ. ಘಟನೆಯಲ್ಲಿ ಇಬ್ಬರು ಅಪರಾಧಿಗಳು ಭಾಗಿಯಾಗಿದ್ದಾರೆಂದು” ಎಂದು ಅವರು ಹೇಳಿದರು. 

    ಪೊಲೀಸರ ಪ್ರಕಾರ, ದಾಳಿಕೋರರಲ್ಲಿ ಒಬ್ಬನನ್ನು ಅಧಿಕಾರಿಗಳು ಸ್ಥಳದಲ್ಲೇ ಗುಂಡಿಕ್ಕಿ ಕೊಂದಿದ್ದಾರೆ, ಆದರೆ ಎರಡನೇ ಶಂಕಿತನ ಸ್ಥಿತಿ ಗಂಭೀರವಾಗಿದೆ ಆದರೆ ಸ್ಥಿರವಾಗಿದೆ. ದಾಳಿಕೋರರನ್ನು 50 ವರ್ಷದ ನವೀದ್ ಅಕ್ರಮ್ ಮತ್ತು ಅವರ 24 ವರ್ಷದ ಮಗ ಸಾಜಿದ್ ಅಕ್ರಮ್ ಎಂದು ಪೊಲೀಸರು ಗುರುತಿಸಿದ್ದಾರೆ. ಈ ಇಬ್ಬರು ಪುರುಷರು ತಂದೆ ಮತ್ತು ಮಗ ಎಂದು ಲ್ಯಾನ್ಯನ್ ದೃಢಪಡಿಸಿದರು.

   ಯಹೂದಿಗಳ ‘ಹನಕ್ಕಾ’ ಎಂಬ ಧಾರ್ಮಿಕ ಹಬ್ಬ 8 ದಿನಗಳ ಕಾಲ ನಡೆಯುತ್ತದೆ. ಭಾನುವಾರ ಹಬ್ಬದ ಮೊದಲ ದಿನವಾಗಿದ್ದು, 1000-2000 ಯಹೂದಿಗಳು ಹಬ್ಬದ ಆಚರಣೆಗಾಗಿ ಸಿಡ್ನಿಯ ಬೋಂಡಿ ಕಡಲತೀರದಲ್ಲಿ ಸೇರಿದ್ದರು. ಸಂಜೆ 6:30ರ ಸುಮಾರಿಗೆ  ಇಬ್ಬರು ಬಂದೂಕುಧಾರಿಗಳು ಸ್ಥಳಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. 50 ಬಾರಿ ಗುಂಡು ಹಾರಿಸಿರುವುದು ವರದಿಯಾಗಿದೆ. ಉಗ್ರರು ಮಕ್ಕಳು ಮತ್ತು ವೃದ್ಧರನ್ನೇ ಗುರಿಯಾಗಿಸಿ ದಾಳಿ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Recent Articles

spot_img

Related Stories

Share via
Copy link