‘ಕೆಜಿಎಫ್ 2:
‘ಕೆಜಿಎಫ್ 2’ ಸಿನಿಮಾ ಬಿಡುಗಡೆಗೆ ಇನ್ನು ಕೇವಲ 11 ದಿನ ಮಾತ್ರ ಬಾಕಿ ಉಳಿದಿದೆ. ಈ ಕಾರಣಕ್ಕೆ ಇಡೀ ಚಿತ್ರತಂಡ ಉತ್ತರ ಭಾರತದಿಂದ ಭರ್ಜರಿ ಪ್ರಚಾರ ಆರಂಭಿಸುತ್ತಿದೆ. ದೆಹಲಿ, ಮುಂಬೈ ಅಂತ ಓಡಾಡಿಕೊಂಡಿರುವ ಯಶ್, ಶ್ರೀನಿಧಿ ಶೆಟ್ಟಿ ಶೀಘ್ರದಲ್ಲಿಯೇ ದಕ್ಷಿಣ ಭಾರತದ ಕಡೆ ಮುಖ ಮಾಡಲಿದ್ದಾರೆ.
ಸಿನಿಮಾದ ಟ್ರೈಲರ್, ಸಾಂಗ್, ಟೀಸರ್ ಎಲ್ಲವೂ ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲವನ್ನು ಮೂಡಿಸಿದೆ. ‘ಕೆಜಿಎಫ್ 2’ ಸಿನಿಮಾ ಹೇಗಿರುತ್ತೋ? ಅಧೀರ ಹಾಗೂ ಯಶ್ ಕಾಳಗ ಅದ್ಯಾವ ಲೆವೆಲ್‌ನಲ್ಲಿ ಇರುತ್ತೋ? ಅಂತ ಎದುರು ನೋಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾ ತಂಡ ಕೂಡ ದಿನದಿಂದ ದಿನಕ್ಕೆ ಪ್ರಚಾರದ ವೇಗವನ್ನು ಹೆಚ್ಚಿಸುತ್ತಲೇ ಇದೆ. ಈ ಮಧ್ಯೆ ಬಿಡುಗಡೆಗೂ ಮೊದಲೇ ಹೊಸ ದಾಖಲೆಯನ್ನು ಮಾಡಿದೆ.
ಐಪಿಎಲ್ ಇತಿಹಾಸದಲ್ಲೇ ಭಾರೀ ಮುಖಭಂಗ: ದೊಡ್ಡ ಬದಲಾವಣೆಗೆ ಸಿಎಸ್ಕೆ ಸಜ್ಜು?
ಹೌದು ‘ಕೆಜಿಎಫ್ 2’ ಸಿನಿಮಾ ಬಿಡುಗಡೆಗೂ ಮೊದಲೇ ಹೊಸ ದಾಖಲೆ ಮಾಡಿದೆ. ಕೇವಲ 12 ಗಂಟೆಯಲ್ಲಿ ಈ ಸಿನಿಮಾದ ಟಿಕೆಟ್‌ಗಳು ಬಿಕರಿಯಾಗಿವೆ. ಕನ್ನಡದ ಯಾವುದೇ ಸಿನಿಮಾ ಬಿಡುಗಡೆಗೆ ಇನ್ನೂ 11 ದಿನಗಳ ಇರುವಾಗಲೇ ಇಂತಹದ್ದೊಂದು ಸಾಧನೆ ಮಾಡಿರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ ಪಂಡಿತರು. ಹಾಗಿದ್ದರೆ, ಕೆಜಿಎಫ್ 2 ಟೀಮ್ ಮಾಡಿದ ಸಾಧನೆ ಏನು? ಎಲ್ಲಿ ಏನೇನು ಸಾಧನೆ ಮಾಡಿದೆ? ಅನ್ನುವುದನ್ನು ನೋಡೋಣ.
ಕನ್ನಡ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ 2’ ನೋಡಲು ಇಡೀ ವಿಶ್ವವೇ ಕಾದು ಕೂತಿದೆ. ಹೀಗಾಗಿ ಚಿತ್ರತಂಡ ಮೊದಲು ಎಲ್ಲಿ ಬುಕ್ಕಿಂಗ್ ಶುರು ಮಾಡುತ್ತೆ ಎಂದು ಕಾತುರದಿಂದ ನೋಡುತ್ತಿದ್ದಾರೆ. ಈ ಅವಕಾಶ ಮೊದಲ ಯುಕೆ ಸಿನಿಪ್ರಿಯರಿಗೆ ಸಿಕ್ಕಿದೆ. ‘ಕೆಜಿಎಫ್ 2’ ಸಿನಿಮಾ ಯುಕೆ ವಿತರಕ ಈಗಾಗಲೇ ಸಿನಿಮಾ ಬುಕ್ಕಿಂಗ್ ಆರಂಭ ಮಾಡಿದ್ದಾರೆ. ಟಿಕೆಟ್ ಬುಕ್ಕಿಂಗ್ ಆರಂಭ ಮಾಡುತ್ತಿದ್ದಂತೆ ಜನರು ಮುಗಿದ್ದಿದ್ದು ಟಿಕೆಟ್‌ಗಳನ್ನು ಖರೀದಿ ಮಾಡಿದ್ದಾರೆ.
ದೇಶದಲ್ಲಿ ಪೆಟ್ರೋಲ್ ಡಿಸೇಲ್ ದರ ಮತ್ತೆ ಹೆಚ್ಚಳ: 14 ದಿನಗಳಲ್ಲಿ 8.49 ರೂ. ಏರಿಕೆ
12 ಕೆಜಿಎಫ್ 2 ಹೊಸ ದಾಖಲೆ
ಯುಕೆ ವಿತರಕರು ‘ಕೆಜಿಎಫ್ 2’ ಸಿನಿಮ ಬಿಡುಗಡೆಗೆ ಇನ್ನೂ 11 ದಿನಗಳು ಬಾಕಿ ಇರುವಾಗಲೇ ಟಿಕೆಟ್ ಬಿಕ್ಕಿಂಗ್ ಶುರುಮಾಡಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸಿನಿಪ್ರಿಯರು ಮುಗಿಬಿದ್ದು ಟಿಕೆಟ್ ಬುಕಿಂಗ್ ಮಾಡುತ್ತಿದ್ದಾರೆ. ಕೇವಲ 12 ಗಂಟೆಯಲ್ಲಿ ವಿದೇಶದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಟಿಕೆಟ್ ಬುಕ್ ಮಾಡಿದ್ದಾರೆ. ಇದು ಕನ್ನಡ ಸಿನಿಮಾ ಮಟ್ಟಿಗೆ ದಾಖಲೆ ಎಂದೇ ಹೇಳಲಾಗುತ್ತಿದೆ. ಯುಕೆಯಲ್ಲಿ ಟಿಕೆಟ್ ಬುಕ್ ಆಗಿರುವ ಬಗ್ಗೆ ಸ್ವತ: ಯುಕೆಯಲ್ಲಿ ಸಿನಿಮಾ ವಿತರಣೆ ಮಾಡುತ್ತಿರುವ ಸಂಸ್ಥೆ ಆರ್‌ಎಫ್‌ಟಿ ಫಿಲಂಸ್ ಟ್ವೀಟ್ ಮೂಲಕ ಹೇಳಿಕೊಂಡಿದೆ.
‘ಕೆಜಿಎಫ್ 2’ ಜೊತೆ ದಳಪತಿ ವಿಜಯ್ ಅಭಿನಯದ ಬೀಸ್ಟ್ ಹಾಗೂ ಬಾಲಿವುಡ್ ಸಿನಿಮಾ ‘ಜೆರ್ಸಿ’ ಬಿಡುಗಡೆಗೆ ಸಜ್ಜಾಗಿದೆ. ಉತ್ತರ ಭಾರತದಲ್ಲಿ ‘ಕೆಜಿಎಫ್ 2’ಗೆ ‘ಜೆರ್ಸಿ’ ಟಕ್ಕರ್ ಕೊಡುತ್ತಿದೆ. ಇನ್ನೊಂದು ದಕ್ಷಿಣ ಭಾರತದಲ್ಲಿ ದಳಪತಿ ವಿಜಯ್ ಅಭಿನಯದ ‘ಬೀಸ್ಟ್’ ಅಖಾಡಕ್ಕೆ ಇಳಿದಿದೆ. ಈ ಸಂಬಂಧ ಬಾಕ್ಸಾಫೀಸ್ ಮೇಲೆ ಸವಾರಿ ಮಾಡಲು ಹೊರಟಿದ್ದ ಯಶ್‌ಗೆ ಎರಡು ಸಿನಿಮಾ ಯಾವ ರೀತಿ ಎದುರಾಗುತ್ತೆ ಎನ್ನುವುದನ್ನು ನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ