ಚಿಕ್ಕಬಳ್ಳಾಪುರ : ಬೋರ್ ವೆಲ್ ಲಾರಿ ಪಲ್ಟಿ, ಮೂವರ ಸಾವು!!

ಚಿಕ್ಕಬಳ್ಳಾಪುರ :

      ಲಾರಿಯೊಂದು ಅಕಸ್ಮಿಕವಾಗಿ ರಸ್ತೆ ಬದಿಗೆ ಮುಗುಚಿ ಬಿದ್ದ ಪರಿಣಾಮವಾಗಿ 3 ಮಂದಿ ಕೂಲಿ ಕಾರ್ಮಿಕರು  ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

     ಚಿಕ್ಕ ಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಚೇಳೂರು ಸಮೀಪದ ಹೊಸವುಡ್ಯ‌ ಬಳಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, ಬೋರ್ ವೆಲ್ ಪೈಪುಗಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ಅಕಸ್ಮಿಕವಾಗಿ ರಸ್ತೆ ಬದಿಗೆ ಮುಗುಚಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

     ಮೃತರ ಪೈಕಿ ಇಬ್ಬರು ಮಧ್ಯಪ್ರದೇಶ ಹಾಗೂ ಮತ್ತೊಬ್ಬ ಛತ್ತೀಸ್ ಗಢ ನಿವಾಸಿಗಳೆಂದು ತಿಳಿದು ಬಂದಿದೆ.

      ಘಟನೆಯಲ್ಲಿ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸಮೀಪದ‌ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಡಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap