ಮಧುಗಿರಿ :
ಹೊಟ್ಟೆ ನೋವು ವಾಂತಿಯಿಂದ ಬಳುತ್ತಿದ್ದ ಬಾಲಕ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
ತಾಲೂಕಿನ ಕಸಬ ವ್ಯಾಪ್ತಿಯ ಹರಿಹರೊಪ್ಪ ಗ್ರಾಮದ ವಾಸಿ ಲಕ್ಷಣ್ ರವರ ಪುತ್ರ ಅಭಿಷೇಕ್ (14 ) ಹೊಟ್ಟೆ ನೋವು ಹಾಗೂ ವಾಂತಿಯಿಂದ ಬಳುತ್ತಿದ್ದು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಗೆ ದಾಖಲಾಗಿದ್ದನು.
ಹೊಟ್ಟೆ ನೋವು ಹೆಚ್ಚಾದ ಕಾರಣ ಅಲ್ಲಿಂದ ತುರ್ತು ಚಿಕಿತ್ಸೆ ಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದು ಇನ್ನೇನು ವೈದ್ಯರು ಚಿಕಿತ್ಸೆಯನ್ನು ಆರಂಭಿಸುವ ಮೊದಲೆ ಆಸ್ಪತ್ರೆ ಯಲ್ಲಿಯೇ ಮೃತಪಟ್ಟಿದ್ದಾನೆ. ಬಾಲಕನ ಮೃತ ದೇಹವನ್ನು ಶವಾಗಾರದಲ್ಲಿ ಇಡಲಾಗಿದೆ.