ಅಕ್ರಮವಾಗಿ BPL ಕಾರ್ಡ್​​ ಪಡೆದವರಿಗೆ ಶಾಕ್….!

ಬೆಂಗಳೂರು

     ಅಕ್ರಮವಾಗಿ ಬಿಪಿಎಲ್​ ಕಾರ್ಡ್​ ಪಡೆದವರಿಗೆ ಶಾಕ್​​ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, Central Board of Direct Taxation ಮಾಹಿತಿ ಆಧಾರದ ಮೇಲೆ ರಾಜಧಾನಿ ಬೆಂಗಳೂರೊಂದರಲ್ಲೇ ಲಕ್ಷಾಂತರ ಕಾರ್ಡ್​ಗಳು ರದ್ದಾಗುವ ಸಾಧ್ಯತೆ ಇದೆ. ಆಹಾರ ಇಲಾಖೆಗೆ ಕಳೆದ ತಿಂಗಳು ದೊರೆತಿರುವ ಟ್ಯಾಕ್ಸ್​​ ರಿಪೋರ್ಟ್​​ ಆಧಾರದಲ್ಲಿ, ತೆರಿಗೆ ಕಟ್ಟುತ್ತಿದ್ದರೂ ಪಡೆದಿರುವ ಬಿಪಿಎಲ್​ ಕಾರ್ಡ್​ಗಳು ಎಪಿಎಲ್​ ಕಾರ್ಡ್​​ಗಳಾಗಿ ಪರಿವರ್ತನೆಯಾಗಲಿವೆ.

    ಆಹಾರ ಇಲಾಖೆಯ ರಾಜಾಜಿನಗರ ಜಂಟಿ ಆಯುಕ್ತರ ವ್ಯಾಪ್ತಿಯಲ್ಲಿಯೇ 13,329 ಬಿಪಿಎಲ್ ಕಾರ್ಡ್​ಗಳು ರದ್ದಾಗಿದ್ದು, ಅವನ್ನು ಎಪಿಎಲ್​​ ಆಗಿ ಪರಿವರ್ತಿಸಲಾಗಿದೆ. ಈ ಹಿನ್ನಲೆ ರಾಜಾಜಿನಗರದ ಆಹಾರ ಇಲಾಖೆ ಮುಂದೆ ಜನರು ಜಮಾಯಿಸಿದ್ದಾರೆ. ಕಳೆದ ತಿಂಗಳು ರೇಷನ್​​ ಸಿಕ್ಕಿತ್ತು, ಆದ್ರೆ ಈ ತಿಂಗಳು ನಮಗೆ ರೇಷನ್​​ ನೀಡಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರೋ ಮಹಿಳೆಯೋರ್ವರು, ನಾವು ಟ್ಯಾಕ್ಸ್ ಕಟ್ಟುತ್ತಿಲ್ಲ, ಮಗಳು ಕೆಲಸ ಮಾಡುತ್ತಿದ್ದಳು. ಆದರೆ ಈಗ ಅವಳನ್ನು ಮದುವೆ ಮಾಡಿ ಕೊಟ್ಟಿದ್ದೇವೆ. ಹೀಗಿದ್ದರೂ ನಮಗೆ ರೇಷನ್​​ ನೀಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. 

    2017ರಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಮಾನದಂಡಗಳ ಪ್ರಕಾರ, ಬಿಪಿಎಲ್​ ಕಾರ್ಡ್​ ಪಡೆಯಲು ಹಲವು ನಿಬಂಧನೆಗಳನ್ನು ಹೇರಲಾಗಿದೆ. ಸರ್ಕಾರಿ ನೌಕರಿಯಲ್ಲಿರಬಾರದು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಭೂಮಿ, ನಗರ ಪ್ರದೇಶದಲ್ಲಿ 1 ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ಭೂಮಿ ಹೊಂದಿರಬಾರದು, ನಾಲ್ಕು ಚಕ್ರದ ವಾಹನ ಇರಬಾರದು, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಮೀರಬಾರದು ಎಂದು ತಿಳಿಸಲಾಗಿದೆ.

   ಅಕ್ರಮವಾಗಿ ಪಡೆದಿರುವ ಬಿಪಿಎಲ್​​ ಕಾರ್ಡ್​ಗಳನ್ನು ರದ್ದು ಮಾಡಲು ಮುಂದಾಗಿರೋ ರಾಜ್ಯ ಸರ್ಕಾರ ಈಗಾಗಲೇ ಪಡಿತರ ಅಂಗಡಿಗಳ ಮುಂದೆ ಈ ಬಗ್ಗೆ ನೋಟಿಸ್ ಹಾಕಿ, ದಾಖಲೆಗಳನ್ನ ನೀಡಲು ಸೂಚನೆ ನೀಡಿದೆ. ಇದರಿಂದ ಬಡಕುಟುಂಬಗಳು ಕಂಗಲಾಗಿದ್ದು, ಸರ್ಕಾರ ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.  ಈ ಹಿಂದೆ ಹಾವೇರಿ ಜಿಲ್ಲೆಯಲ್ಲಿಯೇ 14 ಸಾವಿರಕ್ಕೂ ಅಧಿಕ ಕಾರ್ಡ್ ರದ್ದು ಮಾಡಲು ಆದೇಶ‌ ಮಾಡಿರೋದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಜಿಲ್ಲೆಯಲ್ಲಿರುವ 2 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್​​ಗಳ ಈ ಪೈಕಿ 14,771 ಅನರ್ಹ ಪಡಿತರ ಚೀಟಿಗಳನ್ನ ಅಧಿಕಾರಿಗಳು ಗುರುತಿಸಿದ್ದರು.

Recent Articles

spot_img

Related Stories

Share via
Copy link