ಬೆಂಗಳೂರು:
ರಾಜ್ಯದಲ್ಲಿ 14 ಲಕ್ಷ ಬಿಪಿಎಲ್ ಕಾರ್ಡುಗಳನ್ನು ಶೇಕ್ರವೇ ರದ್ದು ಮಾಡಲಾಗುವುದು. ಈಗಾಗಲೇ 3.6 ಲಕ್ಷ ಕಾರ್ಡ್ ಗಗಳನ್ನು ಎಪಿಎಲ್ ಗೆ ಪರಿವರ್ತಿಸಿದ್ದು, ಇನ್ನೂ 10 ಲಕ್ಷ ಪಡಿತರ ಚೀಟಿಗಳ ಪರಿವರ್ತನೆ ಬಾಕಿ ಇದೆ. ಅರ್ಹರ ಬಿಪಿಎಲ್ ಕಾರ್ಡ್ ಗಳು ರದ್ದಾಗಿದ್ದಲ್ಲಿ 24 ಗಂಟೆಯಲ್ಲಿ ವಾಪಸ್ ಬಿಪಿಎಲ್ ಕಾರ್ಡ್ ನೀಡಲಾಗುವುದು ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಆದಾಯ ತೆರಿಗೆ ಪಾವತಿಸುತ್ತಿರುವ ಸದಸ್ಯರನ್ನು ಹೊಂದಿರುವ ಕುಟುಂಬದವರು, ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ಇರುವ ಕುಟುಂಬದವರು, ನಿಗಮ ಮಂಡಳಿಗಳಲ್ಲಿ ಕಾಯಂ ನೌಕರರು ಇರುವ ಕುಟುಂಬದವರು, ಮನೆಗಳನ್ನು ಬಾಡಿಗೆ ನೀಡಿ ಜೀವನ ನಡೆಸುತ್ತಿರುವುದು, 7.5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ರೈತರು, ಸ್ವಂತಕ್ಕೆ ನಾಲ್ಕು ಚಕ್ರದ ವಾಹನ ಹೊಂದಿದವರು, ನಿಗದಿತ ವಾರ್ಷಿಕ ವರಮಾನಕ್ಕಿಂತ ಹೆಚ್ಚು ಆದಾಯ ಗಳಿಸುತ್ತಿರುವವರು, ನಿಯಮಕ್ಕಿಂತ ವಾರ್ಷಿಕವಾಗಿ ಹೆಚ್ಚು ವಹಿವಾಟು ನಡೆಸುತ್ತಿರುವವರು, ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಹರಲ್ಲ.
ನಿಯಮಗಳ ಪ್ರಕಾರ ಬಿಪಿಎಲ್ ಕಾರ್ಡು ಹೊಂದಿದವರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅವರು ಬಿಪಿಎಲ್ ಕಾರ್ಡ್ ನಲ್ಲಿಯೇ ಮುಂದುವರೆಯಲಿದ್ದಾರೆ. ಅನರ್ಹರು ಪಡೆದುಕೊಂಡ ಬಿಪಿಎಲ್ ಕಾರ್ಡ್ ರದ್ದು ಮಾಡಲಿದ್ದು, ಎಪಿಎಲ್ ಕಾರ್ಡುಗಳಾಗಿ ಪರಿವರ್ತನೆ ಮಾಡಲಾಗುವುದು. ಎಪಿಎಲ್ ಕಾರ್ಡ್ ದಾರರಿಗೂ ಬೇರೆ ಸೌಲಭ್ಯಗಳು ಇವೆ ಎಂದು ಹೇಳಲಾಗಿದೆ.