ಬೆಂಗಳೂರು :
ಬರೋಬ್ಬರಿ 11 ತಿಂಗಳುಗಳ ಅನಂತರ ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಸೀಟು ಭರ್ತಿಗೆ ಕೇಂದ್ರ ಸರಕಾರ ಅನುಮತಿ ನೀಡಿದೆ.
ರಾಜ್ಯ ಸರ್ಕಾರ ನಿನ್ನೆ ಥಿಯೇಟರ್ ಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ನೀಡಿ, ಕೊರೋನಾ ಪರಿಷ್ಕೃತ ಗೈಡ್ ಲೈನ್ ಬಿಡುಗಡೆ ಮಾಡಿತ್ತು. ಇಂತಹ ಮಾರ್ಗಸೂಚಿಗೆ ಸ್ಯಾಂಡಲ್ ವುಡ್ ಗಣ್ಯರು ಕಿಡಿಕಾರಿದ್ದರು. ಹೀಗಾಗಿ ಸ್ಯಾಂಡಲ್ ವುಡ್ ಒತ್ತಡಕ್ಕೆ ಇದೀಗ ಮಣಿದಿರುವಂತ ರಾಜ್ಯ ಸರ್ಕಾರ, ಕೊನೆಗೂ ಥಿಯೇಟರ್ ಹೌಸ್ ಪುಲ್ ಗೆ ಅನುಮತಿಸಿದೆ.
ರಾಜ್ಯ ಸರ್ಕಾರದ ಥಿಯೇಟರ್ ಸಂಬಂಧದ ನೀತಿಯ ವಿರುದ್ಧ ಚಿತ್ರರಂಗದ ಗಣ್ಯರು ಸಿಡಿದೆದ್ದರು. ಇದರಿಂದಾಗಿ ಚಿತ್ರರಂಗದ ಗಣ್ಯರ ಸಭೆಯನ್ನು ಕರೆದು, ಚರ್ಚಿಸಿದಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಶೇ.50ರಷ್ಟು ಥಿಯೇಟರ್ ಗಳ ಭರ್ತಿಯ ಕುರಿತಂತೆ ಕನ್ನಡ ಚಿತ್ರರಂಗದ ಗಣ್ಯರೊಂದಿಗೆ ಚರ್ಚಿಸಿದರು.
ಈ ಎಲ್ಲಾ ಚರ್ಚೆಯ ಬಳಿಕ, ಇದೀಗ ರಾಜ್ಯ ಸರ್ಕಾರ ಸ್ಯಾಂಡಲ್ ವುಡ್ ಒತ್ತಡಕ್ಕೆ ಮಣಿದಿದೆ. ಕೊನೆಗೂ ಥಿಯೇಟರ್ ಹೌಸ್ ಪುಲ್ ಗೆ ಒಪ್ಪಿಗೆ ಸೂಚಿಸಿದೆ. ಹೊಸ ಮಾರ್ಗಸೂಚಿಯನ್ನು ಸರ್ಕಾರ ಇಂದು ಪ್ರಕಟಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ