ನಾವೂ ಏರ್ ಪೋರ್ಟ್ ಗೆ ಹೋಗುತ್ತಿರುತ್ತೇವೆ. ಏನೋ ನೋಡಬಾರದ್ದನ್ನು ನೋಡಿರುತ್ತೇವೆ. ಎಲ್ಲಾ ಸೂಕ್ಷ್ಮತೆಗಳು ನಮಗೂ ಗೊತ್ತಾಗುತ್ತದೆ. ಹೈದರಾಬಾದ್ ನಲ್ಲಿ ಒಬ್ಬ ವ್ಯಕ್ತಿ ನನಗೆ ಒಬ್ಬ ವ್ಯಕ್ತಿ ಏನೋ ಹೇಳಿದ್ದ. ಅದು ಅಲ್ಲಿಯವರೆಗೆ ಮುಟ್ಟಿದೆ ಎಂದರೆ ಗೆಳೆಯನಾಗಿ ನಾನು ಹೇಳಲೇಬೇಕು. ಅದಕ್ಕೆ ನಾನು ಜ್ಯೋತಿಷ್ಯ ಮೊರೆಯನ್ನೂ ಹೋಗಿದ್ದೆವು. ಜ್ಯೋತಿಷಿಗಳೊಬ್ಬರು ಇವರಿಬ್ಬರ ಜಾತಕದಲ್ಲಿ ಡಿವೋರ್ಸ್ ಅಂತ ಇದೆ ಎಂದಿದ್ದರು. ಇರುವ ಸ್ವಿಫ್ಟ್ ಕಾರು ಬಿಟ್ಟು ಬೆನ್ಜ್ ಕಾರೇ ಬೇಕು ಎಂದರೆ ನಾವೇನೂ ಮಾಡಕ್ಕಾಗಲ್ಲ. ಬೆನ್ಜ್ ಹಿಂದೆ ಹೋಗಿರುವವರು ಯಾರು ಎಂದು ಕರ್ನಾಟಕದ ಜನತೆಗೆ ಗೊತ್ತಾಗುತ್ತದೆ. ಒಬ್ಬ ಸಹೋದರನಾಗಿ ನಾನು ಚಂದನ್ ಪರ ಇದ್ದೇನೆ’ ಎಂದು ಪ್ರಶಾಂತ್ ಹೇಳಿದ್ದಾರೆ.
ಬೆಂಗಳೂರು:
ಬಿಗ್ ಬಾಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸಹ ಸ್ಪರ್ಧಿ ಪ್ರಶಾಂತ್ ಸಂಬರಗಿ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ವಿಚಾರದಲ್ಲಿ ನಾನು ಚಂದನ್ ಪರ ನಿಲ್ಲುತ್ತೇನೆ ಎಂದಿದ್ದಾರೆ.
ಗ್ಯಾರಂಟಿ ನ್ಯೂಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಸಂಬರಗಿ ಕೆಲವು ಸ್ಪೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ‘ಚಂದನ್ ನನ್ನ ಆತ್ಮೀಯ ಗೆಳೆಯ, ನಮ್ಮ ವಿದ್ಯಾರ್ಥಿ ವಿದ್ಯಾರ್ಥಿನಿಯೇ ಸಿನಿಮಾದ ಹೀರೋ. 15 ದಿನ ನಾವು ಒಟ್ಟಿಗೇ ಶೂಟಿಂಗ್ ಮಾಡಿದ್ದೇವೆ, ಹೊಡೆದಾಡಿದ್ದೇವೆ. ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಯಾರು ಎಂದರೆ ಚಂದನ್, ನಿವೇದಿತಾ ಹೆಸರು ಬರುತ್ತದೆ. ಇದು ಎಲ್ಲರಿಗೂ ಶಾಕಿಂಗ್ ಆಗಿತ್ತು. ಆದರೆ ಇವರಿಬ್ಬರ ನಡುವಿನ ಮನಸ್ತಾಪ ನನಗೆ ಒಂದು ವರ್ಷದ ಹಿಂದೆಯೇ ಗೊತ್ತಾಗಿತ್ತು.
ನಿವೇದಿತಾಗೆ ತೆಲುಗಿನಲ್ಲಿ ಅವಕಾಶ ಬರುತ್ತಿದೆ. ಇಬ್ಬರ ಲೈಫ್ ಸ್ಟೈಲ್ ಬೇರೆ. ಸೆಟ್ಟಾಗುತ್ತಿಲ್ಲ. ತೆಲುಗಿನಲ್ಲಿ ಮದುವೆಯಾದವರಿಗೆ ಅವಕಾಶವಿಲ್ಲ, ಡಿವೋರ್ಸ್ ಆದವರಿಗೆ ಅವಕಾಶ, ಈ ಎಲ್ಲಾ ಊಹಾಪೋಹಗಳನ್ನು ನೋಡಿ ಚಂದನ್ ಗೆ ಬೇಸರವಾಗಿದೆ’ ಎಂದಿದ್ದಾರೆ. ‘ಚಂದನ್ ಒಮ್ಮೆ ಅಮೆರಿಕಾಗೆ ಮ್ಯೂಸಿಕ್ ಕನ್ಸರ್ಟ್ ಗೆ ಒಬ್ಬನೇ ಹೋಗಿದ್ದ. ಯಾಕೆ ನಿವೇದಿತಾಳನ್ನು ಕರೆದುಕೊಂಡು ಹೋಗಲಿಲ್ಲ ಎಂದಾಗ ವೀಸಾ ನೆಪ ಹೇಳಿದ್ದ. ಆಗ ನೀನು ಅವಳನ್ನು ಟ್ರಿಪ್ ಗೆ ಕರೆದುಕೊಂಡು ಹೋಗಿಲ್ಲ ಎಂದರೆ ಇನ್ನೊಬ್ಬರು ಕರೆದುಕೊಂಡು ಹೋಗುತ್ತಾರೆ. ನೀನು ಸ್ಪಂದಿಸಲಿಲ್ಲ ಎಂದರೆ ಇನ್ನು ಯಾರೋ ಸ್ಪಂದಿಸುತ್ತಾರೆ, ನೀನು ಭುಜ ಕೊಡಲಿಲ್ಲ ಎಂದರೆ ಬೇರೆ ಯಾರೋ ಕೊಡ್ತಾರೆ. ನಿನ್ನ ವಸ್ತುವನ್ನ ನೀನು ಜೋಪಾನ ಮಾಡಿಕೊ ಎಂದು ಅವನಿಗೆ ಎಚ್ಚರಿಸಿದ್ದೆ.