ಬೆಂಗಳೂರು:
ಬೆಂಗಳೂರು,ಮೇ3- ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಷಾ ಅವರು ಇಂದು ಪಕ್ಷದ ಪ್ರಮುಖರ ಜೊತೆ ನಡೆಸಬೇಕಾದ ಮಹತ್ವದ ಸಭೆಯನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಬೆಂಗಳೂರಿನಲ್ಲಿ ಇಂದು 3 ಗಂಟೆಗೆ ಖಾಸಗಿ ಹೋಟೆಲ್‍ನಲ್ಲಿ ಕೋರ್ ಕಮಿಟಿ ಸದಸ್ಯರು, ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಪ್ರಮುಖರು, ಸಚಿವರು ಸೇರಿದಂತೆ ಒಟ್ಟು 60 ಪ್ರಮುಖ ಪದಾಕಾರಿಗಳ ಜೊತೆ ಅಮಿತ್ ಷಾ ಸಭೆಯನ್ನು ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು.
ಯೂರೋಪ್ ಪ್ರವಾಸದಲ್ಲಿ ಪ್ರಧಾನಿ ಮೋದಿ: ಬರ್ಲಿನ್‌ನಲ್ಲಿ ಪ್ರತಿಧ್ವನಿಸಿತು ʻ2024; ಮೋದಿ ಒನ್ಸ್ ಮೋರ್ʼ ಘೋಷಣೆ!
ಇದಕ್ಕಾಗಿ ಖಾಸಗಿ ಹೋಟೆಲ್‍ನಲ್ಲಿ ಸಿದ್ದತೆಗಳನ್ನು ಕೈಗೊಳ್ಳಲಾಗಿತ್ತು. ಆದರೆ ಬೆಳಗ್ಗೆ 10 ಗಂಟೆಗೆ ಏಕಾಏಕಿ ಪಕ್ಷದ ಪ್ರಮುಖರ ಜೊತೆ ನಿಗದಿಯಾಗಿದ್ದ ಚರ್ಚೆಯನ್ನು ಅಮಿತ್ ಷಾ ಅವರು ದಿಢೀರನೆ ರದ್ದುಪಡಿಸುವ ಮೂಲಕ ಆಶ್ಚರ್ಯ ಹುಟ್ಟಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವದ ಅಳಿವು-ಉಳಿವಿನ ಪ್ರಶ್ನೆ ಎಂದೇ ಹೇಳಲಾಗಿದ್ದ ಈ ಸಭೆಯಲ್ಲಿ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ
ರಾಜ್ಯ ಸರ್ಕಾರದ ಮೇಲೆ ಕೇಳಿಬಂದಿರುವ 40% ಕಮೀಷನ್ ಆರೋಪ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ, ಸಚಿವ ಈಶ್ವರಪ್ಪ ರಾಜೀನಾಮೆ, ಪಿಎಸ್‍ಐ ನೇಮಕಾತಿ ಅಕ್ರಮ, ಪರೀಕ್ಷೆ ರದ್ದುಪಡಿಸಿರುವುದು ವಿದ್ಯಾರ್ಥಿಗಳ ಪ್ರತಿಭಟನೆ, ಸಚಿವರೊಬ್ಬರ ಹಸ್ತಕ್ಷೇಪದ ಆರೋಪ, ಸಚಿವ ಸಂಪುಟ ವಿಸ್ತರಣೆ/ಪುನಾರಚನೆ, ಪಕ್ಷ ಸಂಘಟನೆ ಸೇರಿದಂತೆ ಹತ್ತು ಹಲವು ಪ್ರಮುಖವ ವಿಷಯಗಳ ಬಗ್ಗೆ ಅಮಿತ್ ಷಾ ರಾಜ್ಯ ಘಟಕದ ನಾಯಕರಿಂದ ಮಾಹಿತಿ ಪಡೆಯಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರು ಹಾಗೂ ಕೋರ್ ಕಮಿಟಿ ಸದಸ್ಯರು ಮತ್ತಿತರರನ್ನು ಸಭೆಗೆ ಆಹ್ವಾನಿಸಲಾಗಿತ್ತು.
ಪದೇ ಪದೇ ಕೇಳಿಬರುತ್ತಿರುವ ನಾಯಕತ್ವ ಬದಲಾವಣೆ ಬಗ್ಗೆ ಅಮಿತ್ ಷಾ ಸ್ಪಷ್ಟ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಲಿದ್ದಾರೆ ಎಂಬ ಮಾತು ಬಿಜೆಪಿ ಪಾಳಯದಲ್ಲಿ ಕೇಳಿಬಂದಿತ್ತು.
ಸಿಎಂ ಬೊಮ್ಮಾಯಿ ಮುಂದುವರಿಕೆ ಇಲ್ಲವೇ ಬದಲಾವಣೆ, ಖಾಲಿ ಇರುವ ಐದು ಸ್ಥಾನಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳುವುದು ಇಲ್ಲವೇ ಕೆಲವು ಸಚಿವರಿಗೆ ಕೋಕ್ ನೀಡಿ ಸಂಪುಟ ಪುನಾರಚನೆ ಮಾಡುವುದು, ವಿಶೇಷವಾಗಿ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ನೀಲನಕ್ಷೆ ಸಿದ್ದಪಡಿಸುವುದು, 2023ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಅಮಿತ್ ಷಾ ಸೂಚನೆ ನೀಡಲಿದ್ದಾರೆ ಎನ್ನಲಾಗಿತ್ತು.
ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್: ಇಂದು ‘ಪುನೀತ್ ರಾಜ್ ಕುಮಾರ್’ಗೆ ಮರಣೋತ್ತವ ‘ಬಸವಶ್ರೀ ಪ್ರಶಸ್ತಿ’ ಪ್ರದಾನ
ಆದರೆ ಏಕಾಏಕಿ ಅಮಿತ್ ಷಾ ಅವರು ವಿಶೇಷ ಸಭೆಯನ್ನು ರದ್ದುಪಡಿಸುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಮೂಲಗಳ ಪ್ರಕಾರ ಸಮಯದ ಅಭಾವ ಇರುವ ಕಾರಣ ಈ ಸಭೆಯನ್ನು ರದ್ದುಪಡಿಸಲಾಗಿದೆ ಎನ್ನಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ