ಲಂಚ ಪ್ರಕರಣ: ಪೊಲೀಸರ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್

ತುಮಕೂರು:

                    ಪೋಲೀಸರ ವಶದಲ್ಲಿದ್ದ ಕಾರು ಬಿಡುಗಡೆಗೆ ಹಾಗೂ ದೋಷಾರೋಪಣಾ ಪಟ್ಟಿಯಲ್ಲಿ ಆರೋಪಿತರ ಹೆಸರನ್ನು ಕೈ ಬಿಡಲು ಲಂಚಕ್ಕೆ ಒತ್ತಾಯಿಸಿ ಹಣ ಪಡೆದಿದ್ದ ಸಿ.ಎಸ್. ಪುರ ಪೋಲೀಸ್ ಠಾಣೆಯ ಪ್ರಕರಣದಲ್ಲಿ ಅಲ್ಲಿನ ಸಬ್ ಇನ್ಸ್ ಪೆಕ್ಟರ್ ಸೇರಿ ಮೂವರು ಪೋಲೀಸರಿಗೆ ಜಾಮೀನು ನೀಡಲು ಇಲ್ಲಿನ 7 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರಾಕರಿಸಿದೆ.

ತಮ್ಮನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಣದು ಕೋರೊ ಪಿ.ಎಸ್. ಐ ಸೋಮಶೇಖರ್, ಹಾಗೂ ಠಾಣೆಯ ಇತರೆ ಪೋಲಿಸ್ ಸಿಬ್ಬಂದಿಗಳಾದ ನಯಾಜ್ ಅಹಮದ್ ಮತ್ತು ಕೇಶವಮೂರ್ತಿ ಅವರುಗಳು ಇಲ್ಲಿನ 7ನೇ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಾಮೀನು ನೀಡಿಕೆಗೆ ಎಸಿಬಿ ಪರ ಅಭಿಯೋಜಕರಾದ ಎನ್.ಬಸವರಾಜು ಆಕ್ಷೇಪಣೆ ಎತ್ತಿದರು. ವಾದ ವಿವಾದ ಆಲಿಸಿದ ನ್ಯಾಯಾಧೀಶರಾದ ಎಸ್. ಸುಧೀಂದ್ರನಾಥ್ ಅವರು ಅರ್ಜಿ ವಜಾಗೊಳಿಸಿದರು.

ವಾಹನ ಬಿಡುಗಡೆಗೆ ನ್ಯಾಯಾಲಯದ ಆದೇಶವಿದ್ದರೂ ಸತಾಯಿಸಿದ್ದ ಪೋಲೀಸರು 20,000 ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಅಲ್ಲದೆ ಠಾಣೆಯಲ್ಲಿ ದಾಖಲಾಗಿದ್ದ ಕೌಟುಂಬಿಕ ಕಲಹದ ದೂರನ್ನು ನ್ಯಾಯಾಲಯಕ್ಕೆ ಸಲ್ಲಿಸುವಾಗ ದೋಷಾರೋಪಣಾ ಪತ್ರದಲ್ಲಿ ಹೆಸರನ್ನು ಕೈಬಿಡಲು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿರುವುದು ಇವೆಲ್ಲವನ್ನೂ ನ್ಯಾಯಾಲಯ ತುಂಬಾ ಗಂಭೀರವಾಗಿ ಪರಿಗಣಿಸಿದೆ.
ಈ ಪ್ರಕರಣದಲ್ಲಿ ಪಿಎಸೈ ಮತ್ತು ಇನ್ನೊಬ್ಬರು ನ್ಯಾಯಾಂಗ ಬಂಧನದಲ್ಲಿದ್ದು ಮತ್ತೊಬ್ಬರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

 

ಹೆಡ್ ಕಾನ್ ಸ್ಟೇಬಲ್ ಮೂಲಕ ಲಂಚ:

ಕೌಟುಂಬಿಕ ಕಲಹದ ವಿಚಾರವಾಗಿ ಸಿ.ಎಸ್. ಪುರ ಠಾಣಿಯಲ್ಲಿ ಚಂದ್ರಣ್ಣ ಎಂಬುವವರ ಮೇಲೆ ಕಳೆದ ಅಕ್ಟೋಬರ್ ತಿಂಗಳ  22 ರಂದು ದೂರು ದಾಖಲಾಗಿತ್ತು. ನ್ಯಾಯಾಲದಲ್ಲಿ ಜಾಮೀನು ಪಡೆದ ಚಂದ್ರಣ್ಣ ತನ್ನ ಕಾರು ಬಿಡಿಸಿಕೊಳ್ಳಲು ಬಂದ ಸಂದರ್ಭದಲ್ಲಿ ಪಿಎಸ್  ಸೋಮಶೇಖರ್ 28 ಸಾವಿರ ರೂ ಬೇಡಿಕೆ ಇಟ್ಟಿದ್ದರು. 16 ಸಾವಿರ ರೂ ಲಂಚವನ್ನು ಹೆಡ್ ಕಾನ್ ಸ್ಟೇಬಲ್ ನಯಾಜ್ ಅಹಮದ್ ಮೂಲಕ  ನೀಡುವ ಸಮಯದಲ್ಲಿ ಎಸಿಬಿ ಇನ್ ಸ್ಟೆಕ್ಟರ್ ವಿಜಯಲಕ್ಷ್ಮೀತಂಡ ಪಿಎಸ್   ಸೋಮಶೇಖರ್ ಮತ್ತು ನಯಾಜ್ ಅವರನ್ನು ವಶಕ್ಕೆ ಪಡೆದಿತ್ತು.

ಎಸಿಬಿ ವಿಚಾರಣೆ ವೇಳೆ ಪರಾರಿ:

ತನಿಖೆ ಆರಂಭಿಸಿದ ಸಂದರ್ಭದಲ್ಲಿ ಠಾಣಿಯ ಎಲ್ಲಾ ಸಿಬ್ಬಂದಿಯ ಮೊಬೈಲ್ ಪಡೆದು ಎಲ್ಲಾ ಸಿಬ್ಬಂದಿಯ ಮೊಬೈಲ್ ಪಡೆದು ವಿಚಾರಣೆ ನಡೆಸಲಾಯಿತು  ಮಧ್ಯಾಹ್ನ ಉಟದ ಸಮಯದಲ್ಲಿ ಠಾಣೆಯಿಂದ ಹೊರಬಂದ ಪಿಎಸ್  ಸೋಮಶೇಖರ್ ಬೈಕ್ ಏರಿ ಪರಾರಿಯಾಗಿದ್ದು, ಸುದ್ದಿಯಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link