‘Instagramನಲ್ಲಿ ಅನ್ ಫ್ರೆಂಡ್ ಮಾಡಿದ್ದಕ್ಕೇ’ ಬ್ರಿಟನ್ ಮಹಿಳೆ ಮೇಲೆ ಅತ್ಯಾಚಾರ

ನವದೆಹಲಿ: 

   ಕೊಪ್ಪಳದಲ್ಲಿ ಇಸ್ರೇಲ್ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ ಹಸಿರಾಗಿರುವಂತೆಯೇ ಅತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಅಂತಹುದೇ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ ವರದಿಯಾಗಿದೆ.

   ಕರ್ನಾಟಕದ ಕೊಪ್ಪಳ ಬಳಿಯ ಹಂಪಿ ಬಳಿ ಇಸ್ರೇಲ್‌ ಪ್ರವಾಸಿಯ ಮೇಲೆ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಇತ್ತೀಚೆಗೆ ವರದಿಯಾಗಿತ್ತು. ದಡದಲ್ಲಿ ಕುಳಿತು ಸಂಗೀತ ಆಲಿಸುತ್ತಿದ್ದ ವಿದೇಶಿ ಮಹಿಳೆ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಪರಾರಿಯಾಗಿದ್ದರು. ಇದೀಗ ಅಂತಹುದೇ ಮತ್ತೊಂದು ಪ್ರಕರಣ ದೆಹಲಿಯಲ್ಲೂ ವರದಿಯಾಗಿದ್ದು, ಬ್ರಿಟನ್ ಮಹಿಳೆ ಮೇಲೆ ಅತ್ಯಾಚಾರ ವೆಸಗಿರುವ ಘಟನೆ ಬೆಳಕಿಗೆ ಬಂದಿದೆ.

   ದೆಹಲಿಯ ಮಹಿಪಾಲ್‌ಪುರ ಹೋಟೆಲ್‌ನಲ್ಲಿ ಬ್ರಿಟನ್‌ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಹಾಗೂ ಕಿರುಕುಳ ನೀಡಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳ ಪೈಕಿ ಓರ್ವನನ್ನು ಕೈಲಾಶ್ ಎಂದು ಗುರುತಿಸಲಾಗಿದೆ.

   ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾಗಿದ್ದ ಆರೋಪಿ ಕೈಲಾಶ್ ನನ್ನು ಭೇಟಿಯಾಗುವ ಸಲುವಾಗಿ ಮಹಿಳೆಯು ಬ್ರಿಟನ್‌ನಿಂದ ದೆಹಲಿಗೆ ಬಂದಿದ್ದರು. ಈ ವೇಳೆ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ. ಆರೋಪಿಯ ಸಹಚರ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಘಟನೆ ಕುರಿತು ಬ್ರಿಟನ್‌ ಹೈಕಮಿಷನ್‌ಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

   ಬ್ರಿಟನ್ ಮಹಿಳೆ ಇನ್ ಸ್ಟಾಗ್ರಾಮ್ ನಲ್ಲಿ ಅನ್ ಫ್ರೆಂಡ್ ಮಾಡಿದಳು ಎಂಬ ಒಂದೇ ಕಾರಣಕ್ಕೆ ಆಕೆಯ ಮೇಲೆ ದೌರ್ಜನ್ಯವೆಸಗಿದ್ದಾರೆ ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ‘ಪೂರ್ವ ದೆಹಲಿಯ ಮಯೂರ್ ವಿಹಾರ್‌ನ ವಸುಂಧರ ನಿವಾಸಿ ಕೈಲಾಶ್‌ಗೆ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಮಾಡುವ ಹವ್ಯಾಸವಿದೆ.

   ಕೆಲವು ತಿಂಗಳ ಹಿಂದೆ, ಆತ ಲಂಡನ್ ನಿವಾಸಿಯಾದ ಆ ಮಹಿಳೆಯೊಂದಿಗೆ ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಸಂಪರ್ಕ ಸಾಧಿಸಿದ್ದರು. ಆ ಮಹಿಳೆ ಮಹಾರಾಷ್ಟ್ರ ಮತ್ತು ಗೋವಾಕ್ಕೆ ಭೇಟಿ ನೀಡಿದಾಗ ಕೈಲಾಶ್ ಅವರನ್ನು ಸಂಪರ್ಕಿಸಿ ಭೇಟಿಯಾಗಲು ಆಹ್ವಾನಿಸಿದ್ದರು. ಆದಾಗ್ಯೂ, ಕೈಲಾಶ್ ಪ್ರಯಾಣಿಸಲು ತನ್ನ ಅಸಾಮರ್ಥ್ಯವನ್ನು ವ್ಯಕ್ತಪಡಿಸಿ, ಬದಲಾಗಿ ದೆಹಲಿಗೆ ಭೇಟಿ ನೀಡುವಂತೆ ಕೇಳಿಕೊಂಡಿದ್ದ.

   ಮಂಗಳವಾರ ಸಂಜೆ, ಮಹಿಳೆ ದೆಹಲಿಗೆ ಬಂದು ಮಹಿಪಾಲಪುರದ ಹೋಟೆಲ್‌ನಲ್ಲಿ ಉಳಿದುಕೊಂಡರು. ಆಕೆಯ ಆಹ್ವಾನಕ್ಕೆ ಓಗೊಟ್ಟು, ಕೈಲಾಶ್ ತನ್ನ ಸ್ನೇಹಿತ ವಾಸಿಮ್ ಜೊತೆ ಹೋಟೆಲ್‌ಗೆ ಹೋಗಿ ಆಕೆಯನ್ನು ಭೇಟಿ ಮಾಡಿದರು. ಮೂವರು ಮದ್ಯ ಸೇವಿಸಿ ಊಟ ಮಾಡಿ ಆಕೆಯ ಕೋಣೆಗೆ ತೆರಳಿದರು. ಈ ವೇಳೆ ಕೈಲಾಶ್ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದಾರೆ. ಆಕೆ ಪ್ರತಿಭಟಿಸಿ ಗದ್ದಲ ಸೃಷ್ಟಿಸಿದಾಗ, ಕೈಲಾಶ್ ವಾಸಿಮ್‌ನನ್ನು ಕೋಣೆಗೆ ಕರೆದು ಅವಳನ್ನು ಶಾಂತಗೊಳಿಸಿದರು. ಬಳಿಕ ಆಕೆ ದೂರು ನೀಡುವುದರೊಂದಿಗೆ ಪ್ರಕರಣ ಬಯಲಾಗಿದೆ ಎಂದು ತಿಳಿದುಬಂದಿದೆ.

Recent Articles

spot_img

Related Stories

Share via
Copy link