ಬೋರ್ ವೆಲ್‌ ನಿರ್ವಹಣೆಗೆ ನೂತನ ತಂತ್ರಜ್ಞಾನ ಬಳಕೆಗೆ ಮುಂದಾದ BSSWB….!

ಬೆಂಗಳೂರು

   ಮಳೆ ಬಾರದೆ ಇದ್ದಾಗ ಅಂತರ್ಜಲ ಸಹ ಕುಸಿಯುತ್ತದೆ. ಈ ಕಾರಣದಿಂದಲೇ ಕೊಳವೆ ಬಾವಿಗಳಲ್ಲಿ ನೀರು ಬರದೇ ಬೆಂಗಳೂರಿನಲ್ಲಿ ಸಮಸ್ಯೆ ಆಗುತ್ತಿದೆ. ಇಂತಹ ಸಮಸ್ಯೆ ತಡೆಯಲು ಬೆಂಗಳೂರು ಜಲಮಂಡಳಿಯು AI ತಂತ್ರಜ್ಞಾನ ಸೇರಿದಂತೆ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ.

   ಸೋಮವಾರ ನಗರದ ಚಿನ್ನಪ್ಪ ಗಾರ್ಡನ್ ನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ಮತ್ತು ಐಓಟಿ (IOT) ತಂತ್ರಜ್ಞಾನ ಅಳವಡಿಸಲಾಗಿರುವ ಕೊಳವೆ ಬಾವಿಯ ಟ್ರಯಲ್ ರನ್ ಅನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧ್ಯಕ್ಷರು ಡಾ.ರಾಮ್ ಪ್ರಸಾದ್ ಮನೋಹರ್ ಪರಿಶೀಲಿಸಿದರು.

    ಕೊಳವೆ ಬಾವಿಗಳು ಬತ್ತಿ ಹೋಗುವುದನ್ನು ತಡೆಯಲು ಜಲಮಂಡಳಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ ಎಂದು ಜಲ ಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಹೇಳಿದರು.

     ಈ ವೇಳೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ 14 ಸಾವಿರಕ್ಕೂ ಅಧಿಕ ಕೊಳವೆ ಬಾವಿಗಳಿವೆ. ಇವುಗಳಲ್ಲಿ ಹಲವು ಕೊಳವೆ ಬಾವಿಗಳು ಸಮರ್ಪಕ ನಿರ್ವಹಣೆ ಇಲ್ಲದೆ ಬತ್ತಿ ಹೋಗಿವೆ. ಕೊಳವೆ ಬಾವಿಗಳ ಪಂಪ್‌ ಸೆಟ್‌ಗಳನ್ನ ಹೆಚ್ಚಿನ ಸಮಯ ಬಳಸುವುದರಿಂದ ನೀರಿಲ್ಲದಿರುವುದು ಗೊತ್ತಾಗಿದೆ.

    ಕೊಳೆವೆ ಬಾವಿಯಲ್ಲಿ ನೀರು ಇಲ್ಲದ್ದ ಗೊತ್ತಾಗದೆ ಮೋಟಾರ್‌ ಅನ್ನು ಓಡಿಸುವುದರಿಂದ ಬಹಳಷ್ಟು ಕೊಳವೆ ಬಾವಿಗಳು ರಿಪೇರಿಗೆ ಬರುತ್ತಿವೆ. ಇತ್ತೀಚೆಗೆ ಕೊಳವೆಬಾವಿಗಳು ಪದೇ ಪದೆ ತಾಂತ್ರಿಕ ಸಮಸ್ಯೆಗೆ ಸಿಲುಕುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಈ AI ಮತ್ತು ಐಓಟಿ(IOT) ತಂತ್ರಜ್ಞಾನ ಅಳವಡಿಸಲಾಗಿದೆ. ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಇಂದು ಪರಿಶೀಲಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.

   ಕೊಳವೆ ಬಾವಿಗಳಿಗೆ ಈ ನೂತನ ತಂತ್ರಜ್ಞಾನದ ಅಳವಡಿಕೆಯಿಂದ ಕೊಳವೆ ಬಾವಿಗಳನ್ನು ಸಮರ್ಥವಾಗಿ ಹಾಗೂ ವೈಜ್ಞಾನಿಕವಾಗಿ ನಿರ್ವಹಿಸಲು ಸುಲಭವಾಗುತ್ತದೆ. ಕೊಳವೆ ಬಾವಿಗಳ ಅನಗತ್ಯ ಬಳಕೆ ತಪ್ಪಿಸಲು ಸಾಧ್ಯವಾಗುತ್ತದೆ. ಬಾವಿಯಲ್ಲಿ ನೀರಿಲ್ಲದೆ ಇರುವಂತಹ ಸಮಯದಲ್ಲಿ ಬಳಸುವುದನ್ನ ತಪ್ಪಿಸುವುದರ ಮೂಲಕ ಕೊಳವೆ ಬಾವಿಗಳು ನಿಷ್ಕ್ರಿಯ ಆಗುವುದನ್ನು ತಪ್ಪಿಸಬಹುದಾಗಿದೆ.

    ಕೊಳವೆ ಬಾವಿಗಳನ್ನು ಸುಸ್ಥಿರವಾಗಿ ಹಾಗೂ ತಾಂತ್ರಿಕವಾಗಿ ಬಳಸುವುದು ಅಲ್ಲದೆ, ಪದೇಪದೇ ಮೋಟಾರ್ ಸುಟ್ಟು ಹೋಗುವಂತಹ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗೆ ಸಿಲುಕುವುದನ್ನು ಈ ಆಧುನಿಕ ತಂತ್ರಜ್ಞಾನಗಳು ತಪ್ಪಿಸುತ್ತವೆ. ಅಲ್ಲದೇ ಇವುಗಳ ನಿರ್ವಹಣೆಯ ವೆಚ್ಚವನ್ನು ಕಡಿಮೆಗೊಳಿಸಲು ತಂತ್ರಜ್ಞಾನ ಅಳವಡಿಕೆ ಸಹಕಾರಿಯಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

    ನಗರದಲ್ಲಿ ಜನರಿಗೆ ಕುಡಿಯುವ ನೀರನ್ನು ಪೂರೈಸಲು ಸುನೀಲ್ ‌ಎನ್ನುವವರಿಗೆ ಸೇರಿದ ಖಾಸಗಿ ಟ್ಯಾಂಕರ್ ಕೆಎ-52 ಸಿ-0204 ಪಡೆದುಕೊಳ್ಳಲಾಗಿತ್ತು. ವಾರ್ಡ್ ನಂ 130ರಲ್ಲಿರುವ ಸಾರ್ವಜನಿಕರಿಗೆ ವಿತರಿಸಲು ಸೂಚಿಸಲಾಗಿತ್ತು. ಆದರೇ ಸದರಿ ಖಾಸಗಿ ಟ್ಯಾಂಕರ್ ಮಾಲೀಕ‌ ಸುನೀಲ್ ಅವರು ಶೆಟ್ಟಿಹಳ್ಳಿ ಮುಖ್ಯ ರಸ್ತೆಯ ಮಲ್ಲಸಂದ್ರ ವಾರ್ಡ್ ಸಂ 14ರಲ್ಲಿ ವಾಣಿಜ್ಯ ಉದ್ದೇಶಕ್ಕೆ ನೀರು ವಿತರಿಸಿರುವುದು ಮಾ.24ರಂದು ಕಂಡು ಬಂದಿದೆ.

   ಹೀಗಾಗಿ ಆ ಖಾಸಗಿ ಟ್ಯಾಂಕರ್ ಮಾಲೀಕ ಸುನೀಲ್ ಎನ್ನುವವರ ವಿರುದ್ಧ ಜಲಮಂಡಳಿಯ ಸಹಾಯಕ ಎಂಜನಿಯರ್ ಕಾರ್ತಿಕ್ ಮಂಜು ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap