ಸ್ವಿಟ್ಜರ್ ಲ್ಯಾಂಡ್ ಗೆ ಪ್ರಯಾಣ ಬೆಳೆಸಿದ ಸಿಎಂ ಬಿ.ಎಸ್.ವೈ!!

ಬೆಂಗಳೂರು :

     ಸ್ವಿಟ್ಜರ್​ಲ್ಯಾಂಡ್​​ನ ದಾವೋಸ್​ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಬೆಂಗಳೂರಿನಿಂದ ತೆರಳಿದ್ದಾರೆ.

      ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟು, ಅಲ್ಲಿಂದ ಸ್ವಿಟ್ಜರ್​ಲ್ಯಾಂಡ್​​ನ ಜ್ಯೂರಿಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ. ಜ್ಯೂರಿಚ್​ನಿಂದ ಕಾರಿನಲ್ಲಿ ದಾವೋಸ್​ಗೆ ತೆರಳಲಿದ್ದಾರೆ.

      ಸೋಮವಾರದಿಂದ ವಿಶ್ವ ಆರ್ಥಿಕ ಸಮ್ಮೇಳನ ನಡೆಯಲಿದೆ. ಶುಕ್ರವಾರ. ಬಿ.ಎಸ್. ಯಡಿಯೂರಪ್ಪ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

     ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ ಭಾಸ್ಕರ್, ಸಿಎಂ ಅವರ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಮತ್ತಿತರ ಅಧಿಕಾರಿಗಳು ಜೊತೆಗಿದ್ದರು. ಏರ್​ಪೋರ್ಟ್​ನಲ್ಲಿ ಡಿಸಿಎಂ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ್, ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್, ಶಾಸಕ ಎಸ್.ಆರ್. ವಿಶ್ವನಾಥ್ ಸಿಎಂಗೆ ಬೀಳ್ಕೊಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ