ಬೌಧ ಧರ್ಮ ದೀಕ್ಷಾ ಸಮಾರಂಭ ಪೂರ್ವಭಾವಿ ಸಭೆ

ಚಳ್ಳಕೆರೆ:

                ಚಿತ್ರದುರ್ಗ ಜಿಲ್ಲೆಯ ಬೌಧ ಧರ್ಮ ದೀಕ್ಷಾ ಉತ್ಸವ ಸಮಿತಿ ವತಿಯಿಂದ ಅ.31ರಂದು ನಡೆಯುವ ಧರ್ಮ ಧೀಕ್ಷಾ ಸಮಾರಂಭ ಮತ್ತು ಭಗವಾನ್ ಬುದ್ದರ ಪ್ರತಿಮೆ ಲೋರ್ಕಾಪಣಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮೋಟಾರ್ ಬೈಕ್ ರ್ಯಾಲಿ ನಡೆಸುವ ಬಗ್ಗೆ ಪೂರ್ವ ಭಾವಿ ಸಭೆಯನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಮಾಜದ ಹಿರಿಯ ಮುಖಂಡ, ತಹಶೀಲ್ದಾರ್ ಟಿ.ಮಲ್ಲಿಕಾರ್ಜುನ್ ಪೂರ್ವ ಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಶೋಷಿತ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಿರಂತರ ಸೇವೆಯನ್ನು ಸಲ್ಲಿಸಿದ್ದು, ಅವರು ಭಗವಾನ್ ಬುದ್ದರಿಂದಲೇ ಪ್ರೇರೇಪಣೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ದಲಿತ ಸಮುದಾಯದ ಎಲ್ಲರೂ ಸೇರಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಪೂರ್ವ ಭಾವಿ ಸಭೆಯಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಟಿ.ವಿಜಯಕುಮಾರ್, ಉಮೇಶ್‍ಚಂದ್ರ ಬ್ಯಾನರ್ಜಿ, ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ, ನಗರಸಭಾ ಸದಸ್ಯ ಕೆ.ವೀರಭದ್ರಪ್ಪ, ಮುಖಂಡರಾದ ಭದ್ರಿ, ನಾಗರಾಜು, ಡಿ.ದಯಾನಂದ, ರುದ್ರಮುನಿ, ದ್ಯಾಮರಾಜ್, ಮೊದೂರುತೇಜ, ವಿನೋದ್‍ಕುಮಾರ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap