ಕೇಂದ್ರದ ಬ್ಲೂಪ್ರಿಂಟ್ ಬಜೆಟ್

ಬೆಂಗಳೂರು:

25  ವರ್ಷದ ದೀರ್ಘಾವಧಿ ಯೋಜನೆ, ಗುತ್ತಿಗೆದಾರರಿಗೆ ಇ-ಪೇಮೆಂಟ್, ರಾಜ್ಯಗಳಿಗೆ ಲಕ್ಷಕೋಟಿ ಸಾಲ- ಪಾವತಿಗೆ 50 ವರ್ಷ ಸಮಯ..!

ಕೊರೊನಾದಿಂದ ತತ್ತರಿಸುವ ದೇಶದ ಆರ್ಥಿಕ ಪರಿಸ್ಥಿತಿ ಒಂದಡೆ, ಪಂಚರಾಜ್ಯ ಚುನಾವಣೆಗಳು ಮತ್ತೊಂದಡೆ, ಜನಸಾಮಾನ್ಯನ ನಿರೀಕ್ಷೆ, ವಾಣಿಜ್ಯೋಧ್ಯಮಿಗಳ ಆಕಾಂಕ್ಷೆ, ಜನಪ್ರಿಯ ಬಜೆಟ್ ಕುರಿತಾದ ಇದ್ದ ಬೆಟ್ಟದಷ್ಟು ಒತ್ತಡ ಹಾಗೂ ನಿರೀಕ್ಷೆಗಳ ನಡುವೆ ಪ್ರಸ್ತುತಕ್ಕಿಂತ ಭವಿಷ್ಯವನ್ನ ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬ್ಲೂಪ್ರಿಂಟ್(ನೀಲನಕ್ಷೆ) ಬಜೆಟ್ ಮಂಡಿಸಿದ್ದಾರೆ.

ರೈತರು, ಯುವಜನಾಂಗ, ಮಹಿಳೆಯರು, ತೆರಿಗೆದಾರರು ಹಾಗೂ ಉದ್ಯಮಿಗಳನ್ನು ಗಮನದಲ್ಲಿಟ್ಟುಕೊಂಡು ಮಂಡಸಿರುವ ಬಜೆಟ್ ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ, ನೀರಾವರಿ, ಕೃಷಿ ಸೇರಿದಂತೆ ಎಲ್ಲಾ ವಲಯಗಳನ್ನೂ ತಟ್ಟಿಕೊಂಡು, ಡಿಜಿಟಲ್ ಅಲೆಯನ್ನೂ ಒಳಗೊಂಡು ಬಜೆಟ್ ಮಂಡಿಸಲಾಗಿದ್ದು ಸಮತೋಲನೆ ಕಾಪಾಡಿಕೊಳ್ಳವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದರೂ ಅತೃಪ್ತಿ ಉಳಿದುಕೊಂಡಿದೆ.

39.45 ಲಕ್ಷ ಕೋಟಿ ಬಜೆಟ್ ಗಾತ್ರ:

90 ನಿಮಿಷಗಳ ಕಾಲ ತಮ್ಮ ಬಜೆಟ್ ಭಾಷಣದಲ್ಲಿ 39.45 ಲಕ್ಷ ಕೋಟಿ ಬಜೆಟ್ ಗಾತ್ರವನ್ನು ಮಂಡಿಸಿದರು. ಇದರಲ್ಲಿ 10.68 ಲಕ್ಷ ಕೋಟಿ ಬಂಡವಾಳ ವೆಚ್ಚ, ಸಾಲ ಹೊರತುಪಡಿಸಿದ ಆದಾಯ 22.8 ಲಕ್ಷ ರೂ. ಒಳಗೊಂಡಿದೆ. ಕಳೆದ ಬಾರಿ 34 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 6.4 ರಷ್ಟು ವಿತ್ತೀಯ ಕೊರತೆ ಬಜೆಟ್ ಮಂಡಿಸಿದ್ದಾರೆ.

ಉದ್ಯೋಗ ಸೃಷ್ಠಿಗೆ ಆಧ್ಯತೆ:

ಕೇಂದ್ರ ಸರ್ಕಾರದ ಜನಪ್ರಿಯ ಘೋಷಣೆಯಾದ ಉದ್ಯೋಗ ಸೃಷ್ಠಿಯನ್ನ ದೃಷ್ಠಿಯಲ್ಲಿಟ್ಟುಕೊಂಡಿರುವ ನಿರ್ಮಲಾ ಸೀತಾರಾಮನ್ ಮುಂದಿನ ಐದು ವರ್ಷಗಳ ಅವಧಿಯಲ್ಲಿ 60 ಲಕ್ಷ ಉದ್ಯೋಗ ಕಲ್ಪಿಸಲು ಮುಂದಾಗಿದ್ದಾರೆ. ಈಗಾಗಲೇ ಆಂತರಿಕವಾಗಿ 30 ಲಕ್ಷ ಹೆಚ್ಚುವರಿ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದಿದ್ದಾರೆ.

ತೆರಿಗೆ ಬದಲಾವಣೆ ಇಲ್ಲ:

ದೇಶದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೊರೆಯಾಗದ ರೀತಿಯಲ್ಲಿ ಹತ್ತು ಹಲವು ಯೋಜನೆಗಳನ್ನು ಮಂಡಿಸಿದ್ದಾರೆ. ಈ ಬಾರಿ ಆದಾಯ ತೆರಿಗೆ ಮಿತಿ ಹೆಚ್ಚಳವಾಗಬಹುದು ಎಂಬ ಮಧ್ಯಮ ವರ್ಗದ ಜನರ ನಿರೀಕ್ಷೆ ಹುಸಿಯಾಗಿದೆ. ಈ ಬಾರಿಯ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಜನ ಕಲ್ಯಾಣವೇ ನಮ್ಮ ಧ್ಯೇಯ ಎಂಬ ಘೋಷವಾಕ್ಯದೊಂದಿಗೆ ಮೂಲಭೂತ ಸೌಕರ್ಯ ಆತ್ಮನಿರ್ಭರ್ ಯೋಜನೆಯಡಿ ಉದ್ಯೋಗ ಸೃಷ್ಟಿಗೆ ಒತ್ತು, ಮುಂದಿನ 25 ವರ್ಷಗಳವರೆಗೆ ದೇಶದ ಅಭಿವೃದ್ಧಿಗೆ ನೀಲನಕ್ಷೆ, ದೇಶದ ವಿವಿಧ ಭಾಗಗಳಲ್ಲಿ ಪ್ರವಾಹದಿಂದ ತತ್ತರಿಸಿರುವ ರೈತಾಪಿ ವರ್ಗಕ್ಕೆ ಭರಪೂರ ಕೊಡುಗೆ ನೀಡಿದ್ದಾರೆ. ಇದರ ಜತೆಗೆ ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳಿಗೂ ಆದ್ಯತೆ ನೀಡಿದ್ದಾರೆ.

ಕೃಷಿ: ಎಂಎಸ್‍ಪಿಗಾಗಿ 2.37 ಲಕ್ಷ ಕೋಟಿ

ರೈತರ ಬೆಳೆ ಖರೀದಿಗಾಗಿ ಎಂಎಸ್‍ಪಿಗಾಗಿ 2.37 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದಾರೆ. ಕಳೆದ ಬಾರಿ 2.42 ಕೋಟಿ ರೂ. ಮೀಸಲಿಟ್ಟಿದ್ದರು. ಎಂಎಸ್‍ಪಿ ದರದಲ್ಲಿ ದಾಖಲೆಯ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ರಾಸಾಯನಿಕ ಮುಕ್ತ ಕೃಷಿಗೆ ಉತ್ತೇಜನ ನೀಡುವುದರ ಜತೆಗೆ ರೈತರು ತಮಗೆ ಅನುಕೂಲವಾಗುವಂತಹ ಹಣ್ಣು, ತರಕಾರಿ ಬೆಳೆಯಲು ಅನುಕೂಲ
ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ರೈತರಿಂದ 1,200 ಲಕ್ಷ ಮೆಟ್ರಿಕ್ ಟನ್ ಗೋಧಿ ಭತ್ತ ಖರೀದಿ, ತೈಲ ಬೀಜ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ ನೀಡಲಾಗುವುದು.
ವಿದೇಶದಿಂದ ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳ ಬೆಲೆ ಏರಿಕೆ, ಎಣ್ಣೆ ಬೀಜಗಳ ಉತ್ಪಾದನೆ, ಗೋಧಿ, ರಾಗಿ ಬೆಳೆಗಳ ಖರೀದಿಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.

ನಬಾರ್ಡ್ ಮೂಲಕ ಕೃಷಿ ಕ್ಷೇತ್ರದ ಗ್ರಾಮೀಣ ಮತ್ತು ಕೃಷಿ ಸ್ಟಾರ್ಟಪ್‍ಗಳಿಗೆ ಆರ್ಥಿಕ ಸೌಲಭ್ಯ, ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದ್ದು, ರೈತರು ಡ್ರೋಣ್‍ಗಳ ಬಳಕೆಗೆ ಅವಕಾಶ ಕಲ್ಪಿಸಿದ್ದು, ಇದರಿಂದ ಬೆಳೆಗಳ ಮೌಲ್ಯಮಾಪನ, ಭೂ ದಾಖಲೆ, ಕ್ರಿಮಿನಾಶಕ ಸಿಂಪಡಣೆ ಕಾರ್ಯವನ್ನು ನಡೆಸಬಹುದಾಗಿದೆ.

25 ಸಾವಿರ ಕಿ.ಮೀ. ಹೆದ್ದಾರಿ ಅಭಿವೃದ್ಧಿ

ಮುಂದಿನ ಆರ್ಥಿಕ ವರ್ಷದಲ್ಲಿ ಒಟ್ಟು 25 ಸಾವಿರ ಕಿ.ಮೀ ಉದ್ದದಷ್ಟು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ರೈತರಿಗಾಗಿ ಒನ್ ಸ್ಟೇಷನ್ ಒನ್ ಪ್ರಾಡೆಕ್ಟ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, 4 ಸ್ಥಳಗಳಲ್ಲಿ ಲಾಜೆಸ್ಟಿಕ್ ಪಾರ್ಕ್ ಸ್ಥಾಪಿಸಲು ಕ್ರಮಕೈಗೊಂಡಿದ್ದಾರೆ.

ಅಂಗನವಾಡಿ ಮೇಲ್ದರ್ಜೆಗೆ:

ಈ ಬಾರಿಯ ಬಜೆಟ್‍ನಲ್ಲಿ ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗೆ 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲು ಕ್ರಮ, ಜನರ ಕಲ್ಯಾಣವೇ ಸರ್ಕಾರದ ಧ್ಯೇಯವಾಗಿದ್ದು, ನಾರಿ ಶಕ್ತಿಯ ಪ್ರಾಮುಖ್ಯತೆಯನ್ನು ಗುರುತಿಸಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ 3 ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಮಿಷನ್ ಪೆÇೀಷಣ್ 2.0, ಮಿಷನ್ ವಾತ್ಸಲ್ಯ, ಮತ್ತು ಮಿಷನ್ ಶಕ್ತಿಗಳ ಮೂಲಕ ಸಮಗ್ರ ಯೋಜನೆಗೆ ಮುಂದಾಗಿದೆ.

3.8 ಮನೆಗಳಿಗೆ ಕುಡಿಯುವ ನೀರು ಪೂರೈಕೆ, ಪ್ರಧಾನಮಂತ್ರಿಗಳ ಆವಾಜ್ ಯೋಜನೆಗೆ 48 ಸಾವಿರ ಕೋಟಿ ರೂ. ಎಸ್‍ಸಿ/ಎಸ್‍ಟಿ ರೈತರಿಗೆ ಆರ್ಥಿಕ ನೆರವೂ ಸೇರಿದಂತೆ ಮಹಿಳೆಯರ ರಕ್ಷಣೆಗೆ ಆದ್ಯತೆ ನೀಡಿದರು.

ಕ್ರಿಪ್ಟೋ ಕರೆನ್ಸಿಗೆ ಶೇ.30 ತೆರಿಗೆ:

ದೇಶದ ಆರ್ಥಿಕತೆಗೆ ಬಲ ನೀಡುವ ಜತೆಗೆ ಬ್ಲಾಕ್ ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿ ತರುವ ವಿಷಯವನ್ನು ಪ್ರಸ್ತಾಪಿಸಿದ್ದು, ಈ ಸಂಬಂಧ ಆರ್‍ಬಿಐ ಸೂಚನೆ ಹೊರಡಿಸಿದೆ.

ಆರ್‍ಬಿಐ ಈಗಾಗಲೇ ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ ಮತ್ತು ಖಾಸಗಿ ಕ್ರಿಪೆÇ್ಟ ಕರೆನ್ಸಿಗಳಿಗೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ವರ್ಚುವಲ್ ಮತ್ತು ಡಿಜಿಟಲ್ ಆಸ್ತಿಗಳ ಆಧಾರಕ್ಕೆ ಶೇ. 30 ರಷ್ಟು ತೆರಿಗೆ ವಿಧಿಸಲು ಮುಂದಾಗಿದ್ದಾರೆ.

ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆ ಇಳಿಕೆ:

ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆ ಇಳಿಕೆ, ಚಿನ್ನ, ವಜ್ರಾಭರಣ ಪ್ರಿಯರಿಗೆ ಸಿಹಿಸುದ್ದಿ ನೀಡಿರುವ ಕೇಂದ್ರ ಸರ್ಕಾರ, ಶೇ. 5 ರಷ್ಟು ಕಸ್ಟಂ ಡ್ಯೂಟಿ ಕಡಿತ ಮಾಡಿದೆ, ಕಾಪೆರ್Çರೇಟ್ ಸರ್ಚ್‍ಚಾರ್ಜ್ ಶೇ. 7ಕ್ಕೆ ಇಳಿಸಲಾಗಿದೆ.
ಮೊಬೈಲ್ ಚಾರ್ಜರ್‍ಗಳ ಬೆಲೆ ಇಳಿಕೆ, ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ರಾಜ್ಯಸರ್ಕಾರಿ ನೌಕರರಿಗೆ ಮುಂದಿನ ದಿನಗಳಲ್ಲಿ ಆದಾಯ ತೆರಿಗೆ ಶೇ. 14 ಮಿತಿ ನಿಗದಿಪಡಿಸಿದೆ.

ಹೊಸ ರಿಟರ್ನ್ ಪರಿಚಯ:
ತೆರಿಗೆ ಪಾವತಿ ಸರಿಪಡಿಸಿಕೊಳ್ಳಲು ಅವಕಾಶ, ದೇಶಾದ್ಯಂತ ಹೊಸ ರಿಟರ್ನ್ ಪರಿಚಯ, ಬಂಡವಾಳ ಹೂಡಲು ರಾಜ್ಯಗಳಿಗೆ 1 ಲಕ್ಷ ಕೋಟಿ ಅನುದಾನ, 50 ವರ್ಷಗಳ ಕಾಲ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ, ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ಬಂಡವಾಳ ವೆಚ್ಚವನ್ನು ಶೇ. 34.4 ರಷ್ಟು ಹೆಚ್ಚಿಸಲಾಗಿದೆ.ಸಹಜ ಕೃಷಿಗೆ ಒತ್ತು, ಪ್ರವಾಸೋದ್ಯಮ ಚೇತರಿಕೆ, ಯುವಜನರಲ್ಲಿ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗಿದೆ.

200 ಟಿವಿ ಚಾನೆಲ್ಸ್:

ದೇಶ್ ಇ-ಪೆÇೀರ್ಟಲ್ ಒನ್ ಕ್ಲಾಸ್ ಒನ್ ಟಿವಿ ಚಾಲನ್ ಯೋಜನೆಯಡಿ 1 ರಿಂದ 12ನೇ ತರಗತಿವರೆಗೆ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಆರಂಭ, ಈಗಿರುವ 12 ಶೈಕ್ಷಣಿಕ ಚಾಲನ್ ಮಿತಿಯನ್ನು 200ಕ್ಕೆ ಏರಿಕೆ, ವಿಶ್ವಮಟ್ಟದ ಶಿಕ್ಷಣಕ್ಕಾಗಿ ಡಿಜಿಟಲ್ ವಿವಿ ಆರಂಭ, ಮಾನಸಿಕ ಆರೋಗ್ಯಕ್ಕಾಗಿ ರಾಷ್ಟ್ರೀಯ ಟೆಲಿಮೆಂಟಲ್ ಯೋಜನೆ,

ಸೋಲಾರ್ ವಿದ್ಯುತ್ ಕ್ಷೇತ್ರಕ್ಕೆ ಬಜೆಟ್‍ನಲ್ಲಿ ಅದ್ಯತೆ ನೀಡಿದ್ದು, 19,500 ಕೋಟಿ ರೂ. ಮೀಸಲಿಡಲಾಗಿದೆ.

ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ:

ಕೊರೊನಾದಂತಹ ಮಾರಕ ಸಾಂಕ್ರಾಮಿಕ ಕಾಯಿಲೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ದೇಶದಲ್ಲಿ ಲಭ್ಯವಿರುವ ವೈದ್ಯಕೀಯ ಸೇವೆಗಳ ವಿವರಗಳನ್ನು ಆನ್‍ಲೈನ್‍ನಲ್ಲಿ ಒದಗಿಸುವ ಮಹತ್ವದ ಘೋಷಣೆಯನ್ನು ಬಜೆಟ್‍ನಲ್ಲಿ ಪ್ರಕಟಿಸಲಾಗಿದೆ.

ರಾಷ್ಟ್ರಿಯ ವೈದ್ಯಕೀಯ ಸೇವೆಗಳ ಸಮಗ್ರ ವಿವರಗಳನ್ನು ಒದಗಿಸುವ ಆನ್‍ಲೈನ್ ವೇದಿಕೆಯನ್ನು ರೂಪಿಸಲು ಮುಂದಾಗಿದ್ದು, ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ಸೇವೆಗಳ ಸಮಗ್ರ ಮಾಹಿತಿ ಲಭ್ಯವಾಗಲಿದ್ದು, ವಿಶಿಷ್ಟ ಆರೋಗ್ಯ ಗುರುತು ಸಂಖ್ಯೆ ಹಾಗೂ ಸಾರ್ವತ್ರಿಕ ಸೇವೆಗಳ ಮಾಹಿತಿ ಲಭ್ಯವಾಗಲಿದೆ.

ಈ ವರ್ಷದಲ್ಲೇ 5 ಜಿ ಸೇವೆ:
2025ರೊಳಗೆ ಎಲ್ಲ ಹಳ್ಳಿಗಳಲ್ಲಿ ಓಎಸ್‍ಪಿ ಅಳವಡಿಕೆ, ಪ್ರಸಕ್ತ ಸಾಲಿನಲ್ಲೇ 5ಜಿ ಸೇವೆ ಆರಂಭ, ಕೇಂದ್ರ ಯೋಜನೆಗಳ ನಿರ್ವಹಣೆಗಾಗಿ ಇ-ಬಿಲ್ ವ್ಯವಸ್ಥೆ, ಚಿಪ್ ಒಳಗೊಂಡ ಇ-ಪಾಸ್‍ಪೆÇೀರ್ಟ್ ಜಾರಿ, ಮಧ್ಯಮ ಹಾಗೂ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ 6 ಸಾವಿರ ಕೋಟಿ, ಗ್ರಾಮ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವ ಮುಂಗಡಪತ್ರದಲ್ಲಿ 75 ಜಿಲ್ಲೆಗಳಲ್ಲಿ 75 ಬ್ಯಾಂಕ್‍ಗಳ ಸ್ಫಾಪನೆಗೆ ಮುಂದಾಗಿದೆ.

  • ಯಾವುದೇ ಹೊಸ ತೆರಿಗೆಗಳು ಇಲ್ಲ
  • ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ
  • ಆದಾಯ ತೆರಿಗೆಯ ತಪ್ಪುಗಳನ್ನು ಸರಿಪಡಿಸಲು 2 ವರ್ಷ ಕಾಲಾವಕಾಶ
  • ಆರ್‍ಬಿಐನಿಂದ ಡಿಜಿಟಲ್ ಕರೆನ್ಸಿ ಬಿಡುಗಡೆ
  • ಡಿಜಿಟಲ್ ಆಸ್ತಿಗಳಿಗೆ ಶೇ. 30 ರಷ್ಟು ತೆರಿಗೆ
  • ಚಿನ್ನಾ, ವಜ್ರಾಭರಣಗಳ ಅಬಕಾರಿ ಸುಂಕ ಇಳಿಕೆ
  • ಮೊಬೈಲ್, ಮೊಬೈಲ್ ಚಾರ್ಜರ್ ಅಗ್ಗ
  • ದೇಶದ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್‍ಗಳ ಸ್ಥಾಪನೆ
  • ನದಿ ಜೋಡಣೆ ಯೋಜನೆ
  • ರಾಷ್ಟ್ರೀಯ ಹೆದ್ದಾರಿ 25 ಸಾವಿರ ಕಿ.ಮೀ.ಗಳಿಗೆ ವಿಸ್ತರಣೆ
  • ಬೆಂಗಳೂರಿನ ನಿಮ್ಹಾನ್ಸ್‍ನಲ್ಲಿ ಮಾನಸಿಕ ಸ್ವಾಸ್ಥ್ಯಕ್ಕೆ ಟೆಲಿ ಮೆಂಟಲ್ ಹೆಲ್ತ್ ಕೇರ್ ಸ್ಥಾಪನೆ
  • ಶಿಕ್ಷಣಕ್ಕೆ ಒತ್ತು ನೀಡಲು 200 ಶೈಕ್ಷಣಿಕ ಟಿವಿ ಚಾನೆಲ್‍ಗಳಿಗೆ ಚಾಲನೆ
  • 3 ವರ್ಷಗಳಲ್ಲಿ 400 ಹೊಸ ರೈಲು
  • ಪ್ರಧಾನಿ ಗತಿಶಕ್ತಿ ಯೋಜನೆಯಡಿ 100 ಕಾರ್ಬೋ ಟರ್ಮಿನಲ್‍ಗಳ ಅಭಿವೃದ್ಧಿ
  • ಮೆಟ್ರೋ ವ್ಯವಸ್ಥೆಗಳನ್ನು ನಿರ್ಮಿಸಲು ಹೊಸ ಮಾರ್ಗಗಳ ಅನುಷ್ಠಾನ
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳ ಪರಿಷ್ಕರಣೆ
  • ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ, ತಕ್ಷಮ್ ಅಂಗನವಾಡಿ, ಪೆÇೀಷಣ್ 2.0 ಯೋಜನೆಗಳ ಪರಿಷ್ಕರಣೆ
  • ದೇಶದ 1883 ಅನವಶ್ಯಕ ಕಾನೂನುಗಳ ರದ್ದು
  • ಕೃಷಿ ವಲಯದಲ್ಲಿ ಡ್ರೋನ್ ಬಳಕೆಗೆ ಪೆÇ್ರೀತ್ಸಾಹ
  • ಬೆಳೆ ದಾಖಲು, ಭೂ ದಾಖಲೆಗಳು ಕೀಟ ನಾಶಕಗಳ ಸಿಂಪಡಣೆಗೆ ಕಿಸಾನ್ ಡ್ರೋನ್
  • ಸಣ್ಣ ಕೈಗಾರಿಕೆಗಳಿಗೆ 6 ಸಾವಿರ ಕೋಟಿ ರೂ. ನೆರವು
  • ಸಣ್ಣ ಕೈಗಾರಿಕೆಗಳಿಗೆ ಮುಂದಿನ 5 ವರ್ಷಗಳಲ್ಲಿ 6 ಸಾವಿರ ಕೋಟಿ ರೂ. ಮೌಲ್ಯದ ಯೋಜನೆ
  • ಕವಚ್ ಅಡಿಯಲ್ಲಿ ರೈಲು ಜಾಲ ವಿಸ್ತರಣೆ
  • 2 ಸಾವಿರ ಕಿ.ಮೀ. ರೈಲು ಜಾಲ ವಿಸ್ತರಣೆ
  • ಒಂದು ರಾಷ್ಟ್ರ- ಒಂದು ಭೂಮಿ ನೋಂದಣಿ ಯೋಜನೆ
  • ಕನಿಷ್ಠ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯ ಖರೀದಿಸಲು 2.37 ಲಕ್ಷ ಕೋಟಿ ರೂ.
  • ಇ-ಪಾಸ್‍ಪೆÇೀರ್ಟ್ ಜಾರಿ
  • ಉಜ್ವಲ ಯೋಜನೆ ವಿಸ್ತರಣೆ
  • ಕಡಿಮೆ ದರದ ಮನೆಗಳಿಗೆ ತೆರಿಗೆ ವಿನಾಯ್ತಿ
  • 75 ವರ್ಷ ಮೇಲ್ಪಟ್ಟವರಿಗೆ ಠೇವಣಿ ಮೇಲಿನ ಬಡ್ಡಿ, ಬಾಡಿಗೆ ಆದಾಯದ ಮೇಲೆ ತೆರಿಗೆ ವಿನಾಯ್ತಿ
  • ಒಂದು ಮಾರುಕಟ್ಟೆ- ಒಂದು ತೆರಿಗೆ ವ್ಯವಸ್ಥೆ
  • ಪರಿಶಿಷ್ಟ ಜಾತಿ, ಪಂಗಡದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
  • 750 ಏಕಲವ್ಯ ಮಾದರಿಯ ಶಾಲೆ ಆರಂಭ
  • ಸ್ವಚ್ಛತಾ ಮಿಷನ್ 71 ಸಾವಿರ ಕೋಟಿ ರೂ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡ

Recent Articles

spot_img

Related Stories

Share via
Copy link
Powered by Social Snap