ಕರ್ನಾಟಕ ರಾಜ್ಯ ಬಜೆಟ್‌ನ ವಿಶ್ಲೇಷಣೆ-2023

ಚುನಾವಣೆಯ ಪ್ರಣಾಳಿಕೆಯಾಗದೆ, ಆರ್ಥಿಕತೆಯ ಬೆಳವಣಿಗೆಗೆ ಸಾಕ್ಷಿಯಾಗುವುದೇ ರಾಜ್ಯದ ಬಜೆಟ್…

    ಕರ್ನಾಟಕ ಜನತೆಯು 2023ರ ರಾಜ್ಯದ ಬಜೆಟ್‌ನತ್ತ ಮುಖ ಮಾಡಿದ್ದಾರೆ. ಈ ಬಾರಿಯ ಬಜೆಟ್‌ ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಮನ್ನಣೆಯನ್ನು ನೀಡುವರು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಯವರು ಎಂದು ಕಾದು ಕುಳಿತಿದ್ದಾರೆ. ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು 2023-24ನೇ ಬಜೆಟ್‌ನ್ನು ಮಂಡಿಸಲಿದ್ದಾರೆ. ಕಳೆದ ಬಾರಿಯ ಬಜೆಟ್‌ನಲ್ಲಿ ಅನೇಕ ಕ್ಷೇತ್ರಗಳಿಗೆ ಮೀಸಲು ಇರಿಸಿದ್ದರು. ಆದರೂ ಅನೇಕ ಕ್ಷೇತ್ರಗಳಿಗೆ ಬಜೆಟ್‌ನಲ್ಲಿಯಾವುದೇ ಪ್ರಾತಿನಿಧ್ಯ ನೀಡಿರಲಿಲ್ಲ. ಇದುರಜ್ಯದಜನತೆಗೆ ಬೇಸರವನ್ನು ಮೂಡಿಸಿತ್ತು.

     ಹಾಗೆ ಕಳೆದ 15 ದಿನಗಳ ಹಿಂದೆ ಅಂದರೆ ಫೆಬ್ರವರಿ 01ರಂದು ಕೇಂದ್ರ ಸರ್ಕಾರವು 2023-24ನೇ ಸಾಲಿನ ಬಜೆಟ್‌ನ್ನು ಮಂಡಿಸಿತು. ಅದರಲ್ಲಿ ಕೆಲವರಿಗೆ ಸಮಾಧಾನಇನ್ನೂ ಕೆಲವರಿಗೆ ಅಸಮಾಧಾನ ಒಟ್ಟಾರೆಯಾಗಿ ಕೇಂದ್ರದ ಬಜೆಟ್ ಬೇವು-ಬೆಲ್ಲದರೀತಿಯಲ್ಲಿ ಬಜೆಟ್‌ನ್ನು ಮಂಡಿಸಿದರು ಶ್ರೀಮತಿ ನಿರ್ಮಲಾ ಸೀತಾರಾಮನ್‌ರವರು. ಇದರಲ್ಲಿಕರ್ನಾಟಕಕ್ಕೆ ಅಷ್ಟೇನೂ ಪ್ರಾತಿನಿಧ್ಯ ನೀಡಿರುವುದಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆಗಳ ಹಣವನ್ನು ಮೀಸಲಿರಿಸಿರುವುದು ಬಿಟ್ಟರೆಇನ್ಯಾವುದೇ ವಿಶೇಷ ಮುಂಗಡ ಪತ್ರದಲ್ಲಿ ಹಣವನ್ನುಕರ್ನಾಟಕಕ್ಕೆ ಮೀಸಲು ಇರಿಸುವಲ್ಲಿಕೇಂದ್ರ ಸರ್ಕಾರ ವಿಫಲವಾಗಿದೆ.

        ಕಳೆದ ವಾರವಷ್ಟೇ ಪರೋಕ್ಷತೆರೆಗಿಯ ಹಣವನ್ನುಎಲ್ಲಾ ರಾಜ್ಯಗಳಿಗೂ ಹಂಚಿತು. ಅದರಲ್ಲಿ ಕರ್ನಾಟಕಕ್ಕೆ ಒಂದಿಷ್ಟು ಪಾಲನ್ನು ನೀಡಿತು. ಆದರೆಇತರೆ ರಾಜ್ಯಗಳಿಗೆ ಹೋಲಿಸಿ ನೋಡಿದಾಗ ಕರ್ನಾಟಕಕ್ಕೆ ನೀಡಿದ ಪರೋಕ್ಷತೆರಿಗೆಯ ಹಣ ಬಹಳ ಕಡಿಮೆಇದೆಎಂದು ಕೆಲವರುಅಭಿಪ್ರಾಯ ಪಟ್ಟಿದ್ದಾರೆ. ಕಾರಣ ಅತೀ ಹೆಚ್ಚು ಜಿ.ಎಸ್.ಟಿ.ಯ ಹಣಕೇಂದ್ರಕ್ಕೆ ಸಂಗ್ರವಾಗುವುದರಲ್ಲಿಕರ್ನಾಟಕದ ಪಾಲು ಅಗ್ರಗಣ್ಯವಾಗಿದೆ.

      ರಾಜ್ಯದ ಸಾಲದ ಪ್ರಮಾಣವು ಬೇರೆ ಹೆಚ್ಚಾಗುತ್ತಿರುವುದು 2023-24ರ ಬಜೆಟ್ ಮೇಲೆ ಪರಿಣಾಮ ನೇರವಾಗಿಯೇ ಬೀಳಬಹುದು. ರಾಜ್ಯ ಸಭೆಯಲ್ಲಿ ಲಿಖಿತಉತ್ತರ ನೀಡಿರುವ ಸಚಿವರು 2018ರಲ್ಲಿ ರೂ. 2.45 ಲಕ್ಷಕೋಟಿ ಇದ್ದ ರಾಜ್ಯದ ಸಾಲ 2022ರ ಮಾರ್ಚ್ಅಂತ್ಯಕ್ಕೆ 4.73 ಲಕ್ಷಕೋಟಿಗೆ ಏರಿಕೆ ಆಗಿದೆ. ಅಂದರೆ ಕಳೆದ ನಾಲ್ಕು ವರ್ಷಗಳಲ್ಲಿ ದುಪ್ಪಟ್ಟು ಆಗಿದೆ. 2025ರ ವೇಳೆಗೆ ರಾಜ್ಯ ಸರ್ಕಾರದಒಟ್ಟು ಸಾಲದ ಮೊತ್ತವುರಾಜ್ಯದ ಆಗಿನ ಜಿ.ಎಸ್.ಟಿ.ಯ ಶೇ. 27.55ರಷ್ಟಾಗಲಿದೆ ಎಂದೂ ಆರ್ಥಿಕ ಇಲಾಖೆ ಅಂದಾಜಿಸಿದೆ.

        ಕಳೆದ ಬಾರಿಯ ಆಯವ್ಯಯದ ಗಾತ್ರ 2,65,720 ಕೋಟಿ ರೂ.ಗಳಿಗೆ ಮುಖ್ಯಮಂತ್ರಿಗಳು ಬಜೆಟ್‌ನ್ನು ಮಂಡಿಸಿದ್ದರು. ಈ ಬಾರಿ ಸರಿ ಸುಮಾರು 2.5 ಲಕ್ಷ ಕೋಟಿಗಳ ಬಜೆಟ್‌ನ್ನು ಮಂಡಿಸುವ ಸೂಚನೆಗಳು ದೊರೆತಿವೆ. 2022-23ರ ಬಜೆಟ್‌ನಲ್ಲಿ ಅನೇಕ ಹೊಸ ಘೋಷಣೆಗಳನ್ನು ಬಸವರಾಜ ಬೊಮ್ಮಾಯಿಯವರು ಮಾಡಿದ್ದರು. ರೈತರಆದಾಯ ಹೆಚ್ಚಳಕ್ಕೆ ಆದ್ಯತೆ, ಕೃಷಿ ಉತ್ಪಾದನೆ ಹೆಚ್ಚಳ ಹಾಗೂ ರೈತರಕ್ಷೇಮಾಭಿವೃದ್ಧಿ, ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹ, ಪಶುಸಂಗೋಪನೆ, ಹೈನುಗಾರಿಕೆಗೆ ಪ್ರೋತ್ಸಾಹ, ನೀರಾವರಿಗೆಆದ್ಯತೆ, ತಾಲ್ಲೂಕುಗಳ ನವಕರ್ನಾಟಕ ನಿರ್ಮಾಣ, ಶಿಕ್ಷಣದ ಅಭಿವೃದ್ಧಿಎಲ್ಲರಿಗೂಆರೋಗ್ಯ, ಎಲ್ಲೆಲ್ಲಿಯೂಆರೋಗ್ಯದುರ್ಬಲ ವರ್ಗಗಳ ಸಬಲೀಕರಣ, ನೇಕಾರರ ಹಿತರಕ್ಷಣೆಕಾಮಿಕರಕ್ಷೇಮಾಭಿವೃದ್ಧಿ, ಸರ್ವರಿಗೂ ಸೂರು, ಗೌರವಧನ ಹೆಚ್ಚಳ, ಗ್ರಾಮೀಣ ರೈಲು ರಸ್ತೆಯ ದುರಸ್ಥೀಕರಣ, ಬಂದರು ಅಭಿವೃದ್ಧಿ, ಬೆಂಗಳೂರು ಸಮಗ್ರ ರೀತಿಯ ಅಭಿವೃದ್ಧಿಯ ಯೋಜನೆಗಳನ್ನು ವಿವಿಧ ಇಲಾಖೆಯಲ್ಲಿ ಕಳೆದ ಸಾಲಿನ ಬಜೆಟ್‌ನಲ್ಲಿ ಹಣವನ್ನು ಮುಂಗಡವಾಗಿ ಇರಿಸಿದ್ದರು.

    ಸಾಂಕ್ರಾಮಿಕ ರೋಗವಾದ ಕೋವಿಡ್-19ರ ತರುವಾಯ ಕರ್ನಾಟಕದ ಅಭಿವೃದ್ಧಿಗೆ 2022-23ರ ಬಜೆಟ್ ಪೂರಕವಾಗಿದೆ ಅದೇ ರೀತಿಯಲ್ಲಿ 2023-24ರ ಬಜೆಟ್‌ಆರ್ಥಿಕಅಭಿವೃದ್ಧಿಗೆ ಪೂರಕ ವಾಗಿರುವುದು ಎಂಬುದನ್ನು ಕಾದು ನೋಡಬೇಕು 2023ರ ಮೇ ತಿಂಗಳಿನಲ್ಲಿ ಕರ್ನಾಟಕರಾಜ್ಯವು ವಿಧಾನಸಭಾ ಬಜೆಟ್‌ಎಲ್ಲಾ ವರ್ಗದ ಜನರಿಗೂ ಅಂದರೆ ಆಡಳಿತ ಪಕ್ಷ, ವಿರೋಧ ಪಕ್ಷ, ಉದ್ಯೋಗಿಗಳು, ರೈತರ ವರ್ಗ, ಹಿಂದುಳಿದ ವರ್ಗ, ಯುವಕರ ವರ್ಗ ವಿದ್ಯಾರ್ಥಿಗಳ ವರ್ಗಎಲ್ಲಾ ವರ್ಗದ ಜನರು ಕಾದು ನೋಡುತ್ತಿದ್ದಾರೆ.

ಗಮನಹರಿಸಬೇಕಾದ ಅಂಶಗಳು

1. ಮೊದಲಿಗೆ, ರಾಜ್ಯದಲ್ಲಿ ರೈತರು ಅತೀವೃಷ್ಟಿಯಿಂದ ರೈತರು ಕಂಗಾಲು ಆಗಿದ್ದಾರೆ. ರೈತದೇಶದ ಬೆನ್ನೆಲುಬು ರೈತರಿಗೆ ಆಗಿರುವ ಮುಂದೆ ಆಗುವ ತೊಂದರೆಗಳಿಗೆ ಹೆಚ್ಚು ಹಣವನ್ನುಕಾಯ್ದಿರಿಸಬೇಕು. ಬಜೆಟ್‌ನ ಸರಿಸುಮಾರು ಕನಿಷ್ಠ ಮಿತಿ ಇಲ್ಲದೆ 15% ಹಣವನ್ನು ಮೀಸಲಿಡಬೇಕು.

2. ವಿಶೇಷವಾಗಿ ಕಲ್ಪತರು ನಗರ ಅಂದರೆ ತುಮಕೂರು ಇಲ್ಲಿನ ತೆಂಗಿನ ಬೆಳೆಗಾರರು ಕಳೆದ ವರ್ಷದಿಂದ ತೆಂಗಿನಕಾಯಿಗೆ ಉತ್ತಮ ಬೆಲೆ ಸಿಗದೆ ಕಂಗಾಲು ಆಗಿದ್ದಾರೆ. ಒಂದು ವರ್ಷದ ಹಿಂದೆ ಪ್ರತಿಕ್ವಿಂಟಾಲ್‌ಗೆ 19 ಸಾವಿರ ಪಡೆಯುತ್ತಿದ್ದರೈತ ಬೆಳೆಗಾರರು ಇಂದು 10.260ರ ಬೆಲೆಗೆ ಮಾರುವಂತಾಗಿದೆ. ದಯಮಾಡಿ ಅವರಿಗೆ ಕನಿಷ್ಟ 20,000 ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು, ಕಾರಣಆರ್ಥಿಕ ಹಣದುಬ್ಬರರೈತರ ಮೇಲೆ ನೇರ ಪರಿಣಾಮ ಬೀರಿದೆ.

3. ಬೆಂಗಳೂರಿನ ಜನ ಸರಿಸುಮಾರು 70% ಜನ ಮೆಟ್ರೋವನ್ನು ಅವಲಂಬಿಸಿದ್ದಾರೆ. ಪ್ರಸ್ತುತಜಾಲಹಳ್ಳಿಯವರೆಗೂ ಹೊಂದಿದೆ ಮುಂದುವರೆದAತೆಜಾಲಹಳ್ಳಿ ಕ್ರಾಸ್‌ನಿಂದದಾಬಸ್‌ಪೇಟೆಯವರೆಗೂ ವಿಸ್ತರಿಸಿzರೆ. ಜನತೆಗೆ ಸಹಾಯವಾಗುತ್ತದೆ. ಇದರಿಂದರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹಣವು ಬರಲಿದೆ.

4. ತುಮಕೂರುಕೈಗಾರಿಕಾ ಪ್ರದೇಶಗಳ ತಾಣವಾಗಿ ಬೆಳೆದು ನಿಲ್ಲಲು ಸಜ್ಜಾಗಿದೆ. ತುಮಕೂರುಗ್ರಾಮಾಂತರದ 29 ಊರುಗಳನ್ನು ಕೈಗಾರಿಕಾ ಪ್ರದೇಶವೆಂದುಕೇAದ್ರ ಸರ್ಕಾರರಾಜ್ಯ ಪತ್ರವನ್ನು ಹೊರಡಿಸಿದೆ. ಆದ್ದರಿಂದತುಮಕೂರಿನಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾತಿನಿಧ್ಯತೆಯನ್ನು ನೀಡಬೇಕು.

5. ಮೊನ್ನೆ-ಮೊನ್ನೆಯಷ್ಟೆದೇಶದ ಪ್ರಧಾನ ಮಂತ್ರಿಗಳು ತುಮಕೂರುಜಿಲ್ಲೆಯಗುಬ್ಬಿತಾಲ್ಲೂಕಿನ ನಿಟ್ಟೂರುಎಂ.ಎನ್.ಕಾವಲ್‌ನಲ್ಲಿ ಹೆಚ್.ಎ.ಎಲ್. ಉತ್ಪಾದಕಘಟಕಕ್ಕೆ ಚಾಲನೆ ನೀಡಿದ್ದಾರೆ. ಕೈಗಾರಿಕಾಘಟಕದಅಭಿಪ್ರಾಯದಲ್ಲಿ ಮೊದಲ ಹಂತದಲ್ಲಿ 2000 ಉದ್ಯೋಗದೊರೆಯಲಿದೆಎಂದು ಹೇಳಿದೆ. ಆ ಉದ್ಯೋಗಗಳು ತುಮಕೂರಿನಜನತೆಗೆ ಸಿಗುವಂತೆ ಮೊದಲು ಸ್ಥಳೀಯ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಹಣವನ್ನುಕಾಯ್ದಿರಿಸುವುದು.

6. ಕರ್ನಾಟಕದಲ್ಲಿ ಶಿಕ್ಷಣದ ಬೆಳವಣಿಗೆಯ ಪಾತ್ರತುಂಬಾಅಗಾಧ. ಇಡೀದೇಶದಲ್ಲಿಎನ್.ಇ.ಪಿ. (ನೂತನ ಶಿಕ್ಷಣ ನೀತಿಯಲ್ಲಿ)ಯನ್ನು ಜಾರಿಗೊಳಿಸಿದ ಮೊದಲ ರಾಜ್ಯಕರ್ನಾಟಕಎನ್.ಇ.ಪಿ. ಅಡಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತರಬೇತಿಯ ಕಾರ್ಯಾಗಾರಗಳನ್ನು ಮಾಡಿಸುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಸ್ವಲ್ಪ ಹಣವನ್ನುಕಾಯ್ದಿರಿಸುವುದು.

7. ಪದವಿಯನ್ನುಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗಣನೀಯವಾಗಿ ಇಳಿಕೆಯಾಗುತ್ತಿದೆ. ಕಾರಣ ವಿದ್ಯಾಭ್ಯಾಸಕ್ಕೇ ವಿದ್ಯಾರ್ಥಿ ವೇvನಕಡಿತ, ಆರ್ಥಿಕ ದುಸ್ಥಿತಿÀ, ಆರ್ಥಿಕತೆಯ ಹಣದುಬ್ಬರ ಹಿೆÃಗೆ ಹಲವಾರು ಕಾರಣಗಳು ಆದ್ದರಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಹೆಚ್ಚಿಸುವುದು ಹಾಗೂ ಉನ್ನತ ಶಿಕ್ಷಣ ಇಲಾಖಾ ವತಿಯಿಂದ ವಿದ್ಯಾರ್ಥಿಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಜಾರಿಗೆತರಲುರಾಜ್ಯ ಸರ್ಕಾರ 2023-24ರ ಬಜೆಟ್‌ನ ಹಣವನ್ನುಕಾಯ್ದಿರಿಸುವುದು.

8. ಕರ್ನಾಟಕರಾಜ್ಯದ ಸರ್ಕಾರಿ ನೌಕರರಎನ್.ಪಿ.ಎಸ್. v/s. ಒಪಿಎಸ್‌ನಇತ್ಯರ್ಥ ಮಾಡಲು ಸರ್ಕಾರ ಮುಂದಾಗಬೇಕು. ಸರ್ಕಾರಿ ಉದ್ಯೋಗಿಗಳಿಂದ ದಕ್ಷತೆಯನ್ನು ಪಡೆಯಬೇಕೆಂದರೆ ಎನ್.ಪಿ.ಎಸ್. ಬದಲಾಗಿಒಪಿಎಸ್‌ನ್ನು ಮತ್ತೆ ಜಾರಿಗೊಳಿಸಬೇಕು. ಇದರಿಂದಕರ್ನಾಟಕದ ಸರ್ಕಾರಿ ಉದ್ಯೋಗಿಗಳು ನಿಟ್ಟುಸಿರು ಬಿಡುತ್ತಾರೆ. ಅದಕ್ಕಾಗಿ 2023-24ರ ಮುಂಗಡ ಪತ್ರದಲ್ಲಿಒಪಿಎಸ್‌ಜಾರಿಯ ಬಗ್ಗೆ ಒಂದಿಷ್ಟು ಹಣವನ್ನುಕಾಯ್ದಿರಿಸಬೇಕು.

9. ಇತ್ತೀಚಿನ ದಿನಗಳು ಜಾಗತಿಕವಾಗಿ ಅನೇಕ ಮಂದಿ ಉದ್ಯೋಗಗಳನ್ನು ಕಳೆದುಕೊಂಡು ನಿರುದ್ಯೋಗಿಗಳಾಗುತ್ತಿದ್ದಾರೆ. ಇದರ ಬಿಸಿ ಕರ್ನಾಟಕಕ್ಕೂ ಬೀರಿದೆ. ಕಳೆದ ಒಂದೂವರೆ ತಿಂಗಳಿನಲ್ಲಿ ಪ್ರತಿಷ್ಠಿತ ಕಂಪನಿಗಳಿAದ ಸರಿ ಸುಮಾರುಒಂದೂವರೆ ಲಕ್ಷಜನಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಹಾಗೂ ಲಕ್ಷಾಂತರಯುವಕರು ವಿದ್ಯಾಭ್ಯಾಸವನ್ನು ಮುಗಿಸಿ ಉದ್ಯೋಗಕ್ಕಾಗಿ ಹಂಬಲಿಸುತ್ತಿದ್ದಾರೆ. ಆದ್ದರಿಂದ 2023-24ರ ಬಜೆಟ್‌ನಲ್ಲಿ ಹೊಸ ಉದ್ಯೋಗಗಳ ಸೃಷ್ಟಿಗೆ ವಿವಿಧ ಯೋಜನೆಗಳನ್ನು ಜಾರಿಗೆತಂದುಯುವಕರಿಗೆ ಹಾಗೂ ಉದ್ಯೋಗ ಕಳೆದುಕೊಂಡ ನಿರುದ್ಯೋಗಿಗಳಿಗೆ ದಾರಿದೀಪವಾಗಲು ಬಜೆಟ್‌ನಲ್ಲಿ 20% ಹಣವನ್ನು ಮೀಸಲಿಡಬೇಕು.

10. ರಾಜ್ಯ ಸರ್ಕಾರವು ಪ್ರಸ್ತುತಇರುವ 6ನೇ ವೇತನವನ್ನು ಪರಿಷ್ಕರಿಸಿ 7ನೇ ವೇತನ ಶ್ರೇಣಿಯನ್ನುಆದಷ್ಟು ಬೇಗ ಅಂದರೆ ಈ ಹಣಕಾಸಿನ ವರ್ಷದಲ್ಲಿಯೇ (2023-24) ನೀಡಲು ಸರ್ಕಾರ ಮುಂದಾಗಬೇಕು. ಇದರಿಂದ ಸರ್ಕಾರಿ ಉದ್ಯೋಗಿಗಳಲ್ಲಿ ಯುಗಾದಿಯಗಿಫ್ಟ್ ನೀಡಿದಂತಾಗುತ್ತದೆ. ಆದ್ದರಿಂದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು 2023-24ರ ಬಜೆಟ್‌ನಲ್ಲಿ ಹಣವನ್ನುಕಾಯ್ದಿರಸಬೇಕು.

    ಈ ಎಲ್ಲಾ ಮೇಲ್ಕಂಡ ಅಂಶಗಳ ಮೇಲೆ 2023-24ರ ಬಜೆಟ್‌ನಲ್ಲಿ ಆದ್ಯತೆ ನೀಡಿದರೆಎಲ್ಲಾ ವರ್ಗದ ಜನರಿಗೂ ಬೆಲ್ಲವಾಗುವುದರಲ್ಲಿ ಯಾವುದೇ ಸಂಶಯವಿರುವುದಿಲ್ಲ.

ಪ್ರೊ. ಪಿ. ಪರಮಶಿವಯ್ಯ
ತುಮಕೂರು ವಿಶ್ವವಿದ್ಯಾನಿಲಯ

Recent Articles

spot_img

Related Stories

Share via
Copy link
Powered by Social Snap