ಬೆಂಗಳೂರು :
ರಾಜ್ಯದಲ್ಲಿ ಬೌದ್ಧ ಸಮುದಾಯದ ಅಭಿವೃದ್ಧಿಿಗಾಗಿ ಬೌದ್ಧರ ಅಭಿವೃದ್ಧಿಿ ನಿಗಮ ಸ್ಥಾಾಪಿಸಿ ಅಗತ್ಯ ಅನುದಾನ ಮೀಸಲಿಡಬೇಕು ಎಂದು ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಎಂ.ವೆಂಕಟಸ್ವಾಾಮಿ ರಾಜ್ಯ ಸರ್ಕಾರಕ್ಕೆೆ ಒತ್ತಾಾಯಿಸಿದರು.
ಸದಾಶಿವನಗರದ ನಾಗಸೇನಾ ಬುದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ 2569 ನೇ ಬುದ್ಧ ಪೂರ್ಣಿಮೆ ಜಯಂತಿ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು.
ಜಗತ್ತಿಿಗೆ ಶಾಂತಿ-ಅಹಿಂಸೆಯನ್ನು ಪ್ರತಿಪಾದಿಸಿದ ಬುದ್ಧನ ತತ್ವ-ಬೋಧನೆಗಳು ಇಂದಿಗೂ ಪ್ರಸ್ತುತವಾಗಿವೆ. ಬಹುವರ್ಷಗಳ ಬೇಡಿಕೆ ಬಳಿಕ ಸರ್ಕಾರವೇ ಬುದ್ಧಜಯಂತಿ ಆಚರಣೆ ಮುಂದಾಗಿರುವುದು ಸ್ವಾಾಗತಾರ್ಹ. ಹಾಗೆಯೇ ಬುದ್ಧಜಯಂತಿಯಂದು ಸರ್ಕಾರಿ ರಜೆ ಘೋಷಿಸಬೇಕು. ಜೊತೆಗೆ ಸಮುದಾಯದ ಏಳಿಗೆಗೆ ಬೌದ್ಧರ ಅಭಿವೃದ್ಧಿಿ ನಿಗಮ ಸ್ಥಾಾಪಿಸಬೇಕು ಎಂದು ಸರ್ಕಾರಕ್ಕೆೆ ಆಗ್ರಹಿಸಿದರು.
ಬೌದ್ಧ ಧರ್ಮದ ಪವಿತ್ರ ಸ್ಥಳ ಬುದ್ಧಗಯಾದಲ್ಲಿ ಅನ್ಯಧರ್ಮಿಯರು ಆಡಳಿತ ನಡೆಸುತ್ತಿಿದ್ದು ಇದಕ್ಕೆೆ ಕೇಂದ್ರ ಹಾಗೂ ಬಿಹಾರ ಸರ್ಕಾರ ಕಡಿವಾಣ ಹಾಕಿ ಮುಕ್ತಿಿಗೊಳಿಸಬೇಕು. ಅಲ್ಲಿಗೆ ಬೌದ್ಧ ಧರ್ಮಿಯರನ್ನೇ ನೇಮಕ ಮಾಡಬೇಕು ಎಂದು ಮನವಿ ಮಾಡಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಾಮಿ ಮಾತನಾಡಿ, ಜಗತ್ತಿಿಗೆ ಶಾಂತಿ ಮತ್ತು ಅಹಿಂಸೆಯನ್ನು ಪರಿಚಯಿಸಿದ ಗೌತಮ ಬುದ್ಧನ ತತ್ವ-ಬೋಧನೆಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು. ಜಗತ್ತು ಈಗಾಗಲೇ ಮಹಾಯುದ್ಧಗಳಿಂದ ತಲ್ಲಣಿಸಿದೆ. ಹಾಗಾಗಿ ಜಗತ್ತಿಿನಲ್ಲಿ ಶಾಂತಿ ನೆಲೆಸಬೇಕಿದೆ. ಬುದ್ಧನ ಬೋಧನೆಗಳನ್ನು ಎಲ್ಲರೂ ಪರಿಪಾಲಿಸುವಂತಾಗಬೇಕು ಎಂದರು.
ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಮಾತನಾಡಿ, ಭಾರತವು ಬುದ್ಧನ ನಾಡು. ಜಗತ್ತಿಿನಲ್ಲಿ ಶಸ್ತ್ರಾಾಸ್ತಗಳಿಂದ ಶಾಂತಿ ನೆಲೆಸಲು ಸಾಧ್ಯವಿಲ್ಲ. ಬುದ್ಧನ ಕಾಲದಲ್ಲಿ ಶಾಂತಿ, ಅಹಿಂಸೆ ಎಲ್ಲವೂ ಇತ್ತು. ಹಾಗಾಗಿ ಆತನು ಬೋಧಿಸಿದ ಬೋಧನೆ ಸಂದೇಶಗಳು ಇಂದಿಗೂ ಪ್ರಸ್ತುತ. ಬುದ್ಧನ ಜಗತ್ತು ಅಸ್ತಿಿತ್ವಕ್ಕೆೆ ಬಂದಲ್ಲಿ ವಿಶ್ವ ಶಾಂತಿ ನೆಲೆಸಲಿದೆ ಎಂದರು.
ಪ್ರೋೋ.ಬಿ. ಕೃಷ್ಣಪ್ಪ ಟ್ರಸ್‌ಟ್ ಅಧ್ಯಕ್ಷೆೆ ಇಂದಿರಾ ಕೃಷ್ಣಪ್ಪ ಬುದ್ಧನ ಜೀವನ, ಸಂದೇಶ, ಹಾಗೂ ಪಂಚ ತ್ರಿಿಪಿಟಿಕಗಳ ಕುರಿತು ಪ್ರವಚನ ನೀಡಿದರು. ಇದೇ ವೇಳೆ ನಾಗಸೇನಾ ಬುದ್ಧ ವಿಹಾರದ ಬಿಕ್ಕುಣಿ ಬುದ್ಧಮ್ಮ ಸಾನಿಧ್ಯದಲ್ಲಿ 120 ಕ್ಕೂ ಹೆಚ್ಚು ಮಂದಿ ಬೌದ್ಧ ಧೀಕ್ಷೆೆ ಪಡೆದುಕೊಂಡರು.
ಅಂಬೇಡ್ಕರ್ ಉದ್ಯಾಾನದಲ್ಲಿ ಬೋಧಿ ರಥಯಾತ್ರೆೆಗೆ ಚಾಲನೆ:
ಬುದ್ಧ ಪೂರ್ಣಿಮೆ ಅಂಗವಾಗಿ ಕಾರ್ಯಕ್ರಮ ಆರಂಭಕ್ಕೂ ಮೊದಲು ನಂದಿನಿ ಲೇಔಟ್‌ನ ಅಂಬೇಡ್ಕರ್ ಉದ್ಯಾಾನದಿಂದ ಅದ್ಧೂರಿ ಬೋಧಿ ರಥಯಾತ್ರೆೆ ನಡೆಯಿತು. ಅಲಂಕೃತ ವಾಹನದಲ್ಲಿ ಗೌತಮ ಬುದ್ಧನ ಭಾವಚಿತ್ರವನಿಟ್ಟು ಮೆರವಣಿಗೆ ನಡೆಸಲಾಯಿತು. ಬೌದ್ಧ ಬಿಕ್ಕುಗಳು ಹಾಗೂ ಉಪಾಸಕರು ಬಾವುಟವನ್ನು ಹಿಡಿದು ರಥಯಾತ್ರೆೆಯಲ್ಲಿ ಪಾಲ್ಗೊೊಂಡಿದ್ದರು. ಯಾತ್ರೆೆಯು ಭಾಷ್ಯಂ ವೃತ್ತದ ಮೂಲಕ ಸದಾಶಿವನಗರದ ನಾಗಸೇನಾ ಬುದ್ಧವಿಹಾರ ತಲುಪಿತು.
ಕಾರ್ಯಕ್ರಮದಲ್ಲಿ ಭಗವಾನ್ ಬುದ್ಧ ಹೋಮಿಯೋಪತಿ ಮೆಡಿಕಲ್ ಕಾಲೇಜು ಅಧ್ಯಕ್ಷ ಕೆ.ಚಂದ್ರಶೇಖರ್, ನಾಗಸೇನಾ ವಿದ್ಯಾಾಲಯದ ಪ್ರಾಾಂಶುಪಾಲ ಸುಬ್ಬರಾಮಯ್ಯ , ಅಧ್ಯಕ್ಷರಾದ ವೆಂಕಟಸ್ವಾಮಿ, ವಿರೋದ್ ಪಕ್ಷ ನಾಯಕ ಛಲವಾದಿ ನಾರಾಯಣ , ಸುಬ್ಬರಮಯ್ಯ, ಲಲಿತ ನಾಯಕ್, ಚಂದ್ರಶೇಖರ್ , ಗೋಪಾಲ್, ಜಯಕಾಂತ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.








