ಲಕ್ನೋ
ಯೋಗಿ ಆದಿತ್ಯನಾಥ ರಾಜ್ಯದಲ್ಲಿ ಕೊಲೆಯೊಂದರ ಸಾಕ್ಷಿಯಾದ ವ್ಯಕ್ತಿಯ ಬರ್ಬರ ಹತ್ಯೆಯಾದ ನಂತರ ಈ ಹತ್ಯೆಯ ಸಂಚು ರೂಪಿಸಿದ ಆರೋಪಿ ಗ್ಯಾಂಗ್‌ಸ್ಟಾರ್ ಅತೀಕ್ ಅಹ್ಮದ್ ಮನೆಯ ಮೇಲೆ ಬುಲ್ಡೋಜರ್‌ಗಳು ವಿಜೃಂಭಿಸಿವೆ.
ವಕೀಲ ಉಮೇಶ್ ಪಾಲ್ 2005ರ ರಾಜಕಾರಣಿಯ ಹತ್ಯೆಯ ಸಾಕ್ಷಿಯಾಗಿದ್ದರು. ಅವರನ್ನು ಪ್ರಯಾಗ್ ರಾಜ್‌ನಲ್ಲಿರುವ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿ ಹತ್ಯೆಯಾಗಿದ್ದರು. ಐವರು ನಡೆಸಿದ ಗುಂಡಿನ ದಾಳಿಯಲ್ಲಿ ಆತನ ಭದ್ರತಾ ಸಿಬ್ಬಂದಿಯೂ ಸಾವನ್ನಪ್ಪಿದ್ದರು. ಇದನ್ನು ಗ್ಯಾಂಗ್‌ಸ್ಟಾರ್ ರಾಜಕಾರಣಿ ಮತ್ತು ಸಮಾಜವಾದಿ ಪಕ್ಷದ ಮಾಜಿ ನಾಯಕ ಅತೀಕ್ ಅಹ್ಮದ್ ಅವರು ಹತ್ಯೆಯನ್ನು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದರು.