ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಇತ್ತೀಚಿನ ದಿನಗಳಲ್ಲಿ ಬಂಪರ್ ಬೆಲೆ ಸಿಗುತ್ತಿದ್ದು, ಬೆಳೆಗಾರರು ಖುಷಿಯಲ್ಲಿದ್ದಾರೆ. ರಾಜ್ಯದ ಮಾರುಕಟ್ಟೆಗಳಲ್ಲಿ ಶನಿವಾರ ರಾಶಿ ಅಡಿಕೆ ಧಾರಣೆ ಕೆಲವು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆಯಾಗಿದ್ದರೆ, ಇನ್ನೂ ಕೆಲವು ಮಾರುಕಟ್ಟೆಗಳಲ್ಲಿ ಕುಸಿತ ಕಂಡಿದೆ.
ಕರ್ನಾಟಕ ರೈತರ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಧಾರಣೆ ಇತ್ತೀಚಿನ ದಿನಗಳಲ್ಲಿ ಉತ್ತಮ ಸ್ಥಿತಿಯಲ್ಲಿದೆ.
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳ ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಡಿಕೆ ಧಾರಣೆ 50,929 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್(Market)ಗಳಲ್ಲಿ ಇತ್ತೀಚಿನ(04-04-2022)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.
ತಾಲೂಕು | ಅಡಿಕೆ | ಗರಿಷ್ಠ ಬೆಲೆ (ಫೆಬ್ರವರಿ 04, 2022) |
ಕೊಪ್ಪ (ಚಿಕ್ಕಮಗಳೂರು ಜಿಲ್ಲೆ) | ರಾಶಿ ಅಡಿಕೆ | 41,319 ರೂ. |
ಚನ್ನಗಿರಿ (ದಾವಣಗೆರೆ ಜಿಲ್ಲೆ) | ರಾಶಿ ಅಡಿಕೆ | 46,299 ರೂ. |
ದಾವಣಗೆರೆ (ದಾವಣಗೆರೆ ಜಿಲ್ಲೆ) | ರಾಶಿ ಅಡಿಕೆ | 46,329 ರೂ. |
ಹೊನ್ನಾಳಿ (ದಾವಣಗೆರೆ ಜಿಲ್ಲೆ) | ರಾಶಿ ಅಡಿಕೆ | 46,299 ರೂ. |
ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ) | ರಾಶಿ ಅಡಿಕೆ | 47,509 ರೂ. |
ಶಿರಸಿ (ಉತ್ತರ ಕನ್ನಡ ಜಿಲ್ಲೆ) | ರಾಶಿ ಅಡಿಕೆ | 47,919 ರೂ. |
ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ) | ರಾಶಿ ಅಡಿಕೆ | 50,929 ರೂ. |
ಭದ್ರಾವತಿ (ಶಿವಮೊಗ್ಗ ಜಿಲ್ಲೆ) | ರಾಶಿ ಅಡಿಕೆ | 46,019 ರೂ. |
ಹೊಸನಗರ (ಶಿವಮೊಗ್ಗ ಜಿಲ್ಲೆ) | ರಾಶಿ ಅಡಿಕೆ | 45,699 ರೂ. |
ಸಾಗರ (ಶಿವಮೊಗ್ಗ ಜಿಲ್ಲೆ) | ರಾಶಿ ಅಡಿಕೆ | 47,769 ರೂ. |
ಶಿಕಾರಿಪುರ (ಶಿವಮೊಗ್ಗ ಜಿಲ್ಲೆ) | ರಾಶಿ ಅಡಿಕೆ | 45,900 ರೂ. |
ಶಿವಮೊಗ್ಗ (ಶಿವಮೊಗ್ಗ ಜಿಲ್ಲೆ) | ರಾಶಿ ಅಡಿಕೆ | 45,799 ರೂ. |
ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ) | ರಾಶಿ ಅಡಿಕೆ | 47,099 ರೂ. |
ತುಮಕೂರು (ತುಮಕೂರು ಜಿಲ್ಲೆ) | ರಾಶಿ ಅಡಿಕೆ | 46,600 ರೂ. |
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ