ತೋವಿನಕೆರೆ :
ಕಳಂಜಿಯಂ ಸಂಘದ ಮಹಿಳೆಯರು ಕಿರು ಧಾನ್ಯಗಳಿಂದ ಪೌಷ್ಟಿಕ ಖಾದ್ಯಗಳನ್ನು ತಯಾರಿಸಿ ಪ್ರದರ್ಶನ ಮಾಡಿ ಜನರ ಮೆಚ್ಚಿಗೆ ಪಡೆದರು. ತೋವಿನಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುರಿಹಳ್ಳಿಯಲ್ಲಿ ಕಳಂಜಿಯಂ ಸಂಘದ ವತಿಯಿಂದ ಕಿರು ಧಾನ್ಯಗಳಿಂದ ತಯಾರಿಸಿದ ಕಡಬು, ಬರ್ಫಿ, ಕಜ್ಜಾಯ, ಶಾವಿಗೆ, ಪಾಯಸ. ಮಿಠಾಯಿ, ರೊಟ್ಟಿ ಸೇರಿದಂತೆ 20 ಕ್ಕೂ ಹೆಚ್ಚು ಖಾದ್ಯಗಳ ಪ್ರದರ್ಶನ ಮಾಡಿದರು.
ಕೊರಟಗೆರೆ ತಾಲ್ಲೂಕು ಕಳಂಜಿಯಂನ ರೈತ ಕೂಟದ ಸಮನ್ವಯಾಧಿಕಾರಿ ಉಮೇಶ್ ಕಿರು ಧಾನ್ಯಗಳನ್ನು ಆಹಾರದಲ್ಲಿ ಬಳಕೆಯಿಂದ ಆಗುವ ಪ್ರಯೋಜನಗಳನ್ನು ತಿಳಿಸಿದರು.
ತೋವಿನಕೆರೆ ಕೃಷಿಕ ಎಚ್.ಜೆ. ಪದ್ಮರಾಜು ಕಿರು ಧಾನ್ಯಗಳು, ಹಲಸು ಖಾದ್ಯಗಳ ಮೇಳಗಳ ಅವಶ್ಯಕತೆ ಬಗ್ಗೆ ಮಾಹಿತಿ ನೀಡಿದರು. ಸಿದ್ದಪಡಿಸಿಕೊಂಡು ತಂದಿದ್ದ ಖಾದ್ಯಗಳ ತಯಾರಿಸುವ ವಿಧಾನದ ಬಗ್ಗೆ ಸದಸ್ಯರು ಮಾಹಿತಿ ನೀಡಿದರು. ಜೊತೆಗೆ ಕಳಂಜಿಯಂನ ನಳಿನಾ, ಲಕ್ಷ್ಮೀದೇವಮ್ಮ, ವೀಣಾ ಖಾದ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ