ಗುಬ್ಬಿ: ಬೆಳಗಿನ ಹೊತ್ತು ಗುಬ್ಬಿಯಲ್ಲಿ ಬಸ್ ಸಮಸ್ಯೆ : ನೂರಾರು ವಿಧ್ಯಾರ್ಥಿಗಳು ಹಾಗೂ ಉದ್ಯೋಗಿಗಳ ಪರದಾಟ

ಗುಬ್ಬಿ

    ಪಟ್ಟಣದಿಂದ ಬೆಳಿಗ್ಗೆ ಏಳು ಗಂಟೆಯಿಂದ ಎಂಟು ಮೂವತ್ತರ ಸಮಯದವರೆಗೆ ತುಮಕೂರು ಹಾಗೂ ಬೆಂಗಳೂರಿಗೆ ಉದ್ಯೋಗ ಅರಸಿ ಹೋಗುವವರು ಹಾಗೂ ಕಾಲೇಜು ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು ಇದ್ದು ಇವರೆಲ್ಲಾ ಬಸ್ ಗಳಿಗಾಗಿ ಪರದಾಡುವ ಸ್ಥಿತಿ ಕಳೆದ ದಶಕಗಳಿಂದಲೇ ಕಂಡು ಬಂದಿದೆ ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಕೆ ಎಸ್ ಆರ್ ಟಿ ಸಿ ವಿಫಲವಾಗಿದೆ.

   ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಬೆಳಗಿನ ಸಮಯದಲ್ಲಿ ತುಮಕೂರು ನಗರಕ್ಕೆ ಮೂವತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಜಿಲ್ಲೆಯ ಮೂಲೆ ಮೂಲೆಯಿಂದ ವಿದ್ಯಾಭ್ಯಾಸ ಅರಸಿ ಬರುತ್ತಾರೆ ಎಲ್ಲರೂ ಒಟ್ಟಿಗೆ ಬರುವುದರಿಂದ ಬಸ್ ವ್ಯವಸ್ಥೆ ಕಲ್ಪಿಸಿವುದು ಕಷ್ಟಸಾದ್ಯವೆನ್ನುತ್ತಾರೆ.

   ಮತ್ತು ಗುಬ್ಬಿಯಲ್ಲಿ ಬಸ್ ಡಿಪೋ ಆದರೆ ಈ ಸಮಸ್ಯೆಗೆ ಪರಿಹಾರ ಒದಗಿಸಬಹುದು ಎನ್ನುತ್ತಾರೆ ಆದರೆ ಅಸಲಿ ವಿಚಾರ ಬೇರೆ ಇದೆ ಇದು ಉಪಹಾರದ ಸಮಯವಾದ್ದರಿಂದ ಸುಮಾರು ಬಸ್ ಗಳು ಅಲ್ಲಲ್ಲೇ ಅವರಿಗೆ ಅನುಕೂಲ ವಿರುವ ಕಡೆ ಹೋಟಲ್ ಬಳಿ ನಿಲ್ಲುತ್ತವೆ ಈ ಕಾರಣಕ್ಕೆ ದಿಢೀರ್ ಎಂದು ಒಂದು ಗಂಟೆ ಕಾಲ ಬಸ್ ಸಂಚಾರ ನಿಲ್ಲುತ್ತದೆ ಬೆರಳೆಣಿಕೆಯ ಬಸ್ ಗಳಲ್ಲಿ ನೂಕು ನುಗ್ಗಲು ಉಂಟಾಗಿ ಕೆಲವರ ಜೇಬಿಗೂ ಕತ್ತರಿಯಾಗುತ್ತದೆ,ಇನ್ನಾದರೂ ಅಧಿಕಾರಿಗಳು ಗಮನಹರಿಸಿ ಈ ಸಮಯದಲ್ಲಿ ಗುಬ್ಬಿ ತುಮಕೂರು ನಡುವೆ ಕಲ್ಪಿಸಿ ಎಂದು ನಿತ್ಯಪ್ರಯಾಣಿಕರು ಮನವಿ ಮಾಡಿದ್ದಾರೆ,ಕೆ ಎಸ್ ಆರ್ ಟಿ ಸಿ ನಿಗಮದ ಅಧ್ಯಕ್ಷರು ಪ್ರತಿನಿಧಿಸುವ ಕ್ಷೇತ್ರದ ಕೇಂದ್ರ ಸ್ಥಾನದಲ್ಲೇ ಹೀಗಾದರೆ ಇನ್ನು ಬೇರೆ ಊರುಗಳ ಪಾಡೇನು.

Recent Articles

spot_img

Related Stories

Share via
Copy link