ಬಸ್ ಬೆನತ್ತುತ್ತಿರುವವಿದ್ಯಾರ್ಥಿಗಳು

ತಿಪಟೂರು:

           ವಿದ್ಯೆಯನ್ನು ಬೆನ್ನತ್ತಿಹೊರಟ ವಿದ್ಯಾರ್ಥಿಗಳು ಕಾಲೇಜಿಗಿಂತ ಹೆಚ್ಚಿನ ಸಮಯವನ್ನು ಬಸ್‍ಗಾಗಿಕಾಯುವಂತಹ ಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸವಾಗಿದ್ದುತಾಲ್ಲೂಕಿನಲ್ಲಿಒಂದಲ್ಲಾಒಂದು ಸ್ಥಳದಲ್ಲಿ ಬಸ್ ತಡೆಹಿಡಿಯವ ಘಟನಗೆಳಗು ಜರುಗುತ್ತಲೇಇವೆ.

ತಾಲೂಕಿನ ಬಿದರೆಗುಡಿಯಲ್ಲಿಂದು ವಿದ್ಯಾರ್ಥಿಗಳು ಬಸ್‍ಗಾಗಿಕಾಯುತ್ತಿದ್ದರು ಕೆಲವು ರಾಜ್ಯರಸ್ತೆ ಸಾರಿಗೆ ಬಸ್‍ಗಳನ್ನು ನಿಲ್ಲಿಸದೇ ಹೋದ ಸಂದರ್ಭದಲ್ಲಿ ಪೋಷಕರು ಆಗೂ ಸಾರ್ವಜನಿಕರು ಬಸ್‍ಗಳನ್ನು ತಡೆದು ನಿಲ್ಲಿಸಿ ವಿದ್ಯಾರ್ಥಿಗಳನ್ನು ಹತ್ತಿಸಿದ ಘಟನೆಜರುಗಿದೆ.
ಈ ಸಂದರ್ಭದಲ್ಲಿರಾಜ್ಯರಸ್ತೆ ಸಾರಿಗೆ ಬಸ್‍ನ ಚಾಲಕ ಹಾಗೂ ಪೋಷಕರ ನಡುವೆಚರ್ಚೆನಡೆಯಿತು. ಬಸ್ ಚಾಲಕ ನಿಮಗೆ ನಿಮ್ಮಊರಿನಲ್ಲಿ ನಿಲುಗಡೆಗೆಯಾವುದೇಆದೇಶವಿಲ್ಲದೇಇರುವುದರಿಂದ ನಾವು ಬಸ್ ನಿಲ್ಲಿದೇ ಹೋಗುತ್ತೇವೆಅದನ್ನು ನೀವು ತಡೆದರು ನಮಗೆ ಬಸ್‍ಗೆ ಹತ್ತಿಸಿಕೊಳ್ಳಲು ಆಗುವುದಿಲ್ಲ. ಇಲ್ಲಿ ನಿಲುಗಡೆಇರುವ ಬಸ್‍ಗಳನ್ನು ನಿಲ್ಲಿಸಿ ಹತ್ತಿಸಿ ಕಳುಹಿಸಿ ಸುಮ್ಮನೆದೂರದಊರಿಗೆ ಹೋಗುವ ಪ್ರಯಾಣಿಕರಿಗೆತೊಂದರೆಆಗುತ್ತದೆ ಬಸ್ ತಡೆಯಬೇಡಿಎಂದು ಚಾಳಕ ತಿಳಿಸಿದರು.

ಬಸ್‍ಗಳನ್ನು ತಡೆದಿದ್ದರಿಂದರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸಂಚಾರದಟ್ಟಣೆಉಂಟಾಯಿತು ಈ ಸಂದರ್ಭದಲ್ಲಿ ನಮಗಾಗಿ ಬಸ್ ತಡೆಯುತ್ತಿದ್ದಾರೆ ಎಂಬ ಪರಿವಿಯೇಇಲ್ಲದೇಎಲ್ಲಿ ಶಾಲಾ-ಕಾಲೇಜುಗಳಿಗೆ ತೊಂದರೆಯಾಗುತ್ತದೆಂದು ಹೆದರಿದೂರದಲ್ಲಿ ನಿಂತಿದ್ದ ಬಸ್‍ಅನ್ನು ಬೆನ್ನಟ್ಟಿಹೋದವರಂತೆಓಡುತ್ತಿರುವುದು ವಿದ್ಯಾರ್ಥಿಗಳಿಗೆ ಓದಿನಲ್ಲಿಇರುವಆಸಕ್ತಿಯನ್ನುತೋರಿಸುವಂತಿತ್ತುಇಲ್ಲ ಶಿಕ್ಷಕರ ಶಿಕ್ಷೆಗೆ ಹೆದರಿಓಡುತ್ತಿದ್ದರೋ ತಿಳಿಯುತ್ತಿಲ್ಲ.

ಅಂತುಇಂತುಕುಂತಿಮಕ್ಕಳಿಗೆ ರಾಜ್ಯವಿಲ್ಲವೆಂಬ ಗಾದೆಯಂತೆ ಶಿಕ್ಷಣ ಸಚಿವರ ನಾಡಿನಲ್ಲಿ ವಿದ್ಯಾರ್ಥಿಗಳು ಬಸ್‍ಗಾಗಿಅಲೆಯುವುದಂತುತಪ್ಪುತ್ತಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link