ಧರ್ಮಸ್ಥಳ ಪ್ರವಾಸ : ಬಸ್‌ಗಳು ಪೊಲೀಸ್ ವಶ

ಮಧುಗಿರಿ

     ಉಚಿತವಾಗಿ ಧರ್ಮಸ್ಥಳ ಪ್ರವಾಸ ಮುಗಿಸಿಕೊಂಡು ಹಿಂದಿರುಗುತ್ತಿದ್ದ ನಾಲ್ಕು ಬಸ್‌ಗಳಲ್ಲಿನ ಮತದಾರರನ್ನು ಚುನಾವಣಾಧಿಕಾರಿಗಳು ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿರುವ ಘಟನೆ ಮಂಗಳವಾರ ನಸುಕಿನ ಜಾವ ನಡೆದಿದೆ.

    ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಗಿಡದಾಗಲಹಳ್ಳಿಯ ಬಳಿ ಧರ್ಮಸ್ಥಳ ಹಾಗೂ ಮತ್ತಿತರ ಪುಣ್ಯಕ್ಷೇತ್ರಗಳ ಉಚಿತ ಪ್ರವಾಸವನ್ನು ಜೆಡಿಎಸ್ ಪಕ್ಷದ ಶಾಸಕರು ಹಾಗೂ ಮುಖಂಡರು ಆಯೋಜಿಸಿದ್ದರು. ಹೋಬಳಿಯ ಗಡಿಭಾಗದಲ್ಲಿ ತನಿಖಾ ಸ್ಥಳಗಳು ಇರುವುದನ್ನು ಮನಗಂಡ ಚಾಲಕರು ಬಸ್‌ಗಳನ್ನು ಬೇರೊಂದು ಮಾರ್ಗದ ಮೂಲಕ ಓಡಿಸಿಕೊಂಡು ಕ್ಷೇತ್ರಕ್ಕೆ ಆಗಮಿಸುತ್ತಿದ್ದರು.

      ಖಚಿತ ಮಾಹಿತಿ ಮೇರೆಗೆ ಉಪವಿಭಾಗಾಧಿಕಾರಿ ರಿಷಿ ಆನಂದ್ ನೇತೃತ್ವದ ಚುನಾವಣಾ ಸಿಬ್ಬಂದಿ ಜೋನಿಗರಹಳ್ಳಿಯ ಮೂಲಕ ಬಡವನಹಳ್ಳಿ ಮಾರ್ಗವಾಗಿ ಬರುತ್ತಿದ್ದ ಬಸ್‌ಗಳನ್ನು ಗಿಡದಾಗಲಹಳ್ಳಿಯ ಬಳಿ ತಡೆದು ನಿಲ್ಲಿಸಿ ಕ್ಷೇತ್ರದ ಮತದಾರರಿಗಾಗಿ ಪ್ರವಾಸ ಆಯೋಜಿಸಿರುವ ಬಗ್ಗೆ ಮಾಹಿತಿ ಹಾಗೂ ಮತ್ತಿತರ ವಿವರಗಳನ್ನು ಸಂಗ್ರಹಿಸಿದ್ದಾರೆ.

     ಮಧುಗಿರಿಯ ಕಸಬಾ ವ್ಯಾಪ್ತಿಯ ಗ್ರಾಮಗಳಾದ ಬಿಜವಾರ, ಶೆಟ್ಟಿಹಳ್ಳಿ, ಐಡಿಹಳ್ಳಿ ಹೋಬಳಿಯ ಬ್ಯಾಡನೂರು ಗ್ರಾಮಗಳ ಸುಮಾರು 200ಕ್ಕೂ ಹೆಚ್ಚು ಮತದಾರರು ಉಚಿತ ಪ್ರವಾಸಕ್ಕೆ ತೆರಳಿದ್ದರು. ಕ್ಷೇತ್ರದಲ್ಲಿ ಮಾದರಿ ನೀತಿಸಂಹಿತೆ ಜಾರಿಯಾಗಿದ್ದರು ಇಲ್ಲಿನ ಜೆಡಿಎಸ್ ಶಾಸಕರು ಮತ್ತು ಮುಖಂಡರು ಮತದಾರರಿಗೆ ಉಚಿತ ಪ್ರವಾಸದ ಆಮಿಷವೊಡ್ಡಿ ಪ್ರವಾಸಕ್ಕೆ ಕಳುಹಿಸಿಕೊಟ್ಟಿದ್ದರು.ಈ ಬಗ್ಗೆ ಚುನಾವಣಾಧಿಕಾರಿ ಹಾಗೂ ಕೃಷಿ ಇಲಾಖೆಯ ಹನುಮಂತರಾಯಪ್ಪ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಪೊಲೀಸರು ನಾಲ್ಕು ಬಸ್‌ಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap