ರಷ್ಯದಿಂದ ತೈಲ ಖರೀದಿ- ಅಮೆರಿಕಕ್ಕೆ ತಕ್ಕ ಉತ್ತರ ನೀಡಿದ ಜೈಶಂಕರ್

ಅಮೆರಿಕದ ಜತೆ ಭಾರತದ 2+2 ಮಾತುಕತೆ ನಡೆಯುತ್ತಿದೆ. ಅಂದರೆ, ಭಾರತದ ಇಬ್ಬರು ಸಚಿವರಾದ ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ವಿದೇಶ ಸಚಿವ ಜೈಶಂಕರ್ ಅವರು ಅಲ್ಲಿನ ತತ್ಸಮಾನ ಸಚಿವರೊಂದಿಗೆ ಆ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ವಿಷಯಗಳ ಬಗ್ಗೆ ಸಹಕಾರ ಒಪ್ಪಂದಗಳ ಬಗ್ಗೆ ಸಮಾಲೋಚಿಸುವುದು.

ಮನೆ ಕಟ್ಟೋರಿಗೆ ಬಿಗ್ ಶಾಕ್ : ಕಬ್ಬಿಣ, ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆ!

ಈ ಸಂಬಂಧ ಭಾರತದ ಸಚಿವದ್ವಯರು ಅಮೆರಿಕದಲ್ಲಿ ಸಮಾಲೋಚನೆ ನಿರತರಾಗಿರುವಾಗ ಸಹಜವಾಗಿಯೇ ಭಾರತವು ರಷ್ಯದಿಂದ ಅಗ್ಗದ ತೈಲ ಖರೀದಿಸುತ್ತಿರುವ ವಿಷಯ ಚರ್ಚೆಗೆ ಬಂದಿದೆ. ಇದಕ್ಕೆ ಅಮೆರಿಕದ ಪ್ರತಿರೋಧ ಗೊತ್ತಿರುವಂಥದ್ದೇ. ಇದಕ್ಕೆ ಸಚಿವ ಜೈಶಂಕರ್ ನೀಡಿರುವ ಉತ್ತರ ಮಾರ್ಮಿಕವಾಗಿದೆ.

ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಕರೆ ನೀಡಿ ಪೇಚೆಗೆ ಸಿಲುಕಿದ ಸಿದ್ದರಾಮಯ್ಯ!

“ಪ್ರತಿದಿನ ಮಧ್ಯಾಹ್ನದ ವೇಳೆ ಯುರೋಪ್ ಎಷ್ಟು ತೈಲವನ್ನು ರಷ್ಯದಿಂದ ಖರೀದಿಸುತ್ತಿದೆಯೋ ಅಷ್ಟು ಪ್ರಮಾಣವನ್ನು ನಾವು ಒಂದು ತಿಂಗಳಲ್ಲಿ ಖರೀದಿಸುತ್ತೇವೆ. ಹೀಗಾಗಿ ನಿಮ್ಮ ಗಮನ ಇರಬೇಕಿರುವುದು ಯುರೋಪ್ ಮೇಲೆಯೇ ಹೊರತು ನಮ್ಮ ಮೇಲಲ್ಲ. ನಮ್ಮ ಇಂಧನ ಸುರಕ್ಷತೆಗಾಗಿ ಈ ಕ್ರಮವೇ ಹೊರತು ಮತ್ತೇನಕ್ಕಲ್ಲ” ಎಂದು ಸಚಿವ ಜೈಶಂಕರ್ ಹೇಳಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap