ಬಳ್ಳಾರಿ:
ಉಪಚುನಾವಣೆಗೆ ತೆರೆ ಬಿದ್ದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ.ಬಳಿಕ ಮಾಧ್ಯಮದವರ ಜತೆ ಮಾತನಾಡಿ, ಸಂಡೂರಿನಲ್ಲಿ ಉತ್ತಮ ಮತದಾನವಾಗಿದೆ. ಶೇಕಡಾವಾರು ಮತದಾನ ಹೆಚ್ಚಾಗಿದೆ. ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಕಾರ್ಯಕರ್ತರು ಸಾಕಷ್ಟು ಕಷ್ಟಪಟ್ಟಿದ್ದಾರೆ .ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳು, ಸಿಎಂ ಸಿದ್ರಾಮಯ್ಯ ಕಾರ್ಯಕ್ರಮ ಸಹಕಾರಿಯಾಗಿದೆ. ಎಲ್ಲರನ್ನೂ ಕರೆದುಕೊಂಡು ವೋಟ್ ಹಾಕಿಸಿದ್ದಾರೆ. ಹಿರಿಯ ನಾಗರಿಕರೂ ಕೂಡಾ ಮತ ಚಲಾಯಿಸಿದ್ದಾರೆ. ಪ್ರತಿಯೊಬ್ಬ ಮತದಾರರನ್ನೂ ತಲುಪಿದ್ದೇವೆ.
ನಮ್ಮ ಯೋಜನೆಯಂತೆ ಜನರಿಗೆ ಮಾಡುವ ಕೆಲಸ ಮನವರಿಕೆ ಮಾಡಿದ್ದೇವೆ. ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿದಿದೆ. ಸಂಡೂರು ತಾಲ್ಲೂಕಿನ ಜನ ಪ್ರಬುದ್ಧರು. ಕೊನೇ ಹಂತದಲ್ಲಿ ನಿರ್ಧರಿಸುತ್ತಾರೆ. ಮೊದಲು ಎಲ್ಲವನ್ನೂ ಗ್ರಹಿಸಿ ಯಾರಿಗೆ ಆಶೀರ್ವಾದ ಯಾರಿಗೆ ಮಾಡಬೇಕೋ ಅವರಿಗೆ ಮಾಡುತ್ತಾರೆ. ಬಳ್ಳಾರಿ ರಾಜಕಾರಾಣ ಮೊದಲೇ ಒಪ್ಪುವುದಿಲ್ಲ. ತಿರಸ್ಕಾರ ಮಾಡ್ತಾರೆ.ಅಭಿವೃದ್ಧಿಗೆ ಬೆಂಬಲಿಸುತ್ತಾರೆ. ಈ ಬಾರಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದರು.
