ಮಧುಗಿರಿ ಉಪವಿಭಾಗದಲ್ಲಿ ಮಾಜಿಪ್ರಧಾನಿ ದೇವೇಗೌಡರ ಪ್ರಚಾರ ಇಂದು
ತುಮಕೂರು:
ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಕ್ರಮಬದ್ಧಗೊಂಡ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಹೊರಬಂದ ಬಳಿಕ 3 ಪಕ್ಷಗಳಿಂದ ಪ್ರಚಾರ ಬಿರುಸುಗೊಂಡಿದ್ದು, ಪಕ್ಷದ ಜಿಲ್ಲಾ ಮುಖಂಡರ, ರಾಜ್ಯ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಮತಯಾಚನೆ ಕಾರ್ಯ ಮಾಡಲಾಗುತ್ತಿದೆ.
ವಿಧಾನ ಪರಿಷತ್ ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್‍ಕುಮಾರ್ ಪರ ಚುನಾವಣೆ ಪ್ರಚಾರಕ್ಕೆ ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಆಗಮಿಸುತ್ತಿದ್ದು, ಮಧುಗಿರಿ ಉಪವಿಭಾಗ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜಿನಪ್ಪ ತಿಳಿಸಿದ್ದಾರೆ.
ಮಾಜಿ ಶಾಸಕ ಹಿರಿಯ ಮುಖಂಡ ವೈ.ಎಸ್.ವಿ.ದತ್ತ ಅವರೊಂದಿಗೆ ಪ್ರಚಾರದಲ್ಲಿ ಭಾಗವಹಿಸಲಿರುವ ದೇವೇಗೌಡರು,ಮೊದಲಿಗೆ ಬೆಳಿಗ್ಗೆ 10.30ಕ್ಕೆ ಕೊರಟಗೆರೆಯ ಮಾರುತಿ ಕಲ್ಯಾಣ ಮಂಟಪದಲ್ಲಿ ಸ್ಥಳೀಯಸಂಸ್ಥೆ ಸದಸ್ಯರ ಸಭೆ ನಡೆಸಲಿದ್ದಾರೆ. ನಂತರ ಮಧುಗಿರಿಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂಭಾಗದ ವಕ್ಕಲಿಗರ ಸಮುದಾಯ ಭವನದಲ್ಲಿ ಮಧ್ಯಾಹ್ನ 12ಕ್ಕೆ ಸಭೆನಡೆಸಲಿದ್ದು, ನಂತರ 3ಕ್ಕೆ ಸಿರಾಕ್ಕೆ ತೆರಳಿ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರಚಾರ ನಡೆಸಲಿದ್ದಾರೆ. ಈ ಚುನಾವಣಾ ಪ್ರಚಾರದಲ್ಲಿ ಜಿಲ್ಲೆಯ ಜೆಡಿಎಸ್ ಹಾಲಿ ಮಾಜಿ ಶಾಸಕರು,ಜಿಲ್ಲಾಘಟಕದ ಪದಾಧಿಕಾರಿಗಳು, ಗ್ರಾಮಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆಯ ಜೆಡಿಎಸ್ ಸದಸ್ಯರುಗಳು ಸಕಾಲಕ್ಕೆ ಆಗಮಿಸಬೇಕಾಗಿ ಕೋರಿದ್ದಾರೆ.
ಸಿರಾದಲ್ಲಿ ಬಿಜೆಪಿ ಪ್ರಚಾರ:
ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್‍ಗೌಡ ಗುರುವಾರ ಸಿರಾ ತಾಲೂಕಿನಲ್ಲಿ ಸ್ಥಳೀಯ ಸಂಸ್ಥೆ ಸದಸ್ಯರಲ್ಲಿ ಮತಯಾಚನೆ, ಹಿರಿಯರ ಮುಖಂಡರ ಆಶೀರ್ವಾದ ಪಡೆದರು. ಸಿರಾ ಶಾಸಕ ಸಿ.ಎಂ.ರಾಜೇಶ್‍ಗೌಡ ಅವರ ತಂದೆ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರ ಆಶೀರ್ವಾದ ಪಡೆದು ಬರಗೂರು ಇನ್ನಿತರ ಗ್ರಾಮ ಪಂಚಾಯಿತಿಗಳಲ್ಲಿ ಮತಯಾಚನೆ ನಡೆಸಿದರು. ಸಿರಾ ಗ್ರಾಮಾಂತರ ಮಂಡಲ ಅಧ್ಯಕ್ಷ ರಂಗಸ್ವಾಮಿ, ನಿಗಮದ ಅಧ್ಯಕ್ಷರಾದ ಎಸ್.ಆರ್.ಗೌಡ, ಬಿ.ಕಿ.ಮಂಜುನಾಥ್, ಜೈರಾಮ್, ನಾಗರಾಜ್, ದೇವರಾಜ್ ಇನ್ನಿತರರು ಹಾಜರಿದ್ದರು.
ಕಾಂಗ್ರೆಸ್ ಅಭ್ಯರ್ಥಿಯಿಂದ ಪಂಚಾಯಿತಿ ಪ್ರಮುಖರ ಭೇಟಿ:
ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಅವರು ಗುರುವಾರ ಜಿಲ್ಲೆಯ ವಿವಿಧ ಗ್ರಾಮಪಂಚಾಯಿತಿ ಕಾಂಗ್ರೆಸ್ ಸದಸ್ಯರ ಭೇಟಿ, ಸಮಾಲೋಚನೆ ನಡೆಸಿದರು. ಪಕ್ಷದ ಹಿರಿಯ ಮುಖಂಡರೊಡನೆ ಚರ್ಚೆ ನಡೆಸಿದರು. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಶಾಸಕ ವೆಂಕಟರಮಣಪ್ಪ,ಮಾಜಿಶಾಸಕರಾದ ಷಡಾಕ್ಷರಿ, ಕೆ.ಎನ್.ರಾಜಣ್ಣ, ಡಾ.ರಫೀಕ್ ಅಹಮದ್, ಶಾಸಕ ಡಾ.ರಂಗನಾಥ್, ಸಂಸದ ಡಿ.ಕೆ.ಸುರೇಶ್, ಮಾಜಿ ಸಂಸದರು ಸೇರಿ ಪಕ್ಷದ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ತಮ್ಮ ಕ್ಷೇತ್ರ
ನಾಳೆಯಿಂದ ಕಾಂಗ್ರೆಸ್ ಅಭ್ಯರ್ಥಿ ನಿರಂತರ ಪ್ರಚಾರ
ನ.27ರಿಂದ 30ರವರೆಗೆ ಜಿಲ್ಲೆಯ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ರಾಜಣ್ಣ ಅವರ ಪರ ಕಾಂಗ್ರೆಸ್ ನಾಯಕರ ಪ್ರಚಾರ ಸಭೆಗಳನ್ನು ಏರ್ಪಡಿಸಲಾಗಿದೆ. ಪಾವಗಡದ ಎಸ್‍ಎಸ್‍ಕೆ ಸಮುದಾಯಭವನದಲ್ಲಿ ನ.27ರಂದು ಬೆಳಿಗ್ಗೆ 11ಕ್ಕೆ, ಕೊರಟಗೆರೆಯ ಗೊರವನಹಳ್ಳಿ ಕಮಲಪ್ರಿಯ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 3ಕ್ಕೆ , ತಿಪಟೂರಿನ ಕಲ್ಪತರು ಆಡಿಟೋರಿಯಂನಲ್ಲಿ ನ.28ರಂದು ಬೆಳಿಗ್ಗೆ 11ಕ್ಕೆ, ಗುಬ್ಬಿಯ ಕಾಂಗ್ರೆಸ್ ಕಚೇರಿಯಲ್ಲಿ ಮಧ್ಯಾಹ್ನ 3ಕ್ಕೆ, ನ.29ರಂದು ಮಧುಗಿರಿಯ ಎಂಎನ್‍ಕೆ ಕಲ್ಯಾಣಮಂಟಪ, ನ.30ರಂದುಬೆಳಿಗ್ಗೆ 11ಕ್ಕೆ ಸಿರಾದಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪ ಹಾಗೂ ಮಧ್ಯಾಹ್ನ 3ಕ್ಕೆ ಚಿಕ್ಕನಾಯಕನಹಳ್ಳಿ ತಾತಯ್ಯನಘೋರಿ ಸಮುದಾಯ ಭವನದಲ್ಲಿ ಪ್ರಚಾರ ಸಭೆ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ