ಕುಣಿಗಲ್ :
ಕಾರು ಪಲ್ಟಿಯಾಗಿ ವಿದ್ಯಾರ್ಥಿಯೋರ್ವನ್ನು ಸ್ಥಳದಲ್ಲಿ ಮೃತಪಟ್ಟು ಮತ್ತೋರ್ವನ್ನು ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಜ್ಯ ಹೆದ್ದಾರಿ 33 ರ ತಾಲೂಕಿನ ಮಾದಪ್ಪನಹಳ್ಳಿ ಗೇಟ್ ಬಳಿ ಬುಧವಾರ ಸಂಬವಿಸಿದೆ,
ತಾಲೂಕಿನ ಕಸಬಾ ಹೋಬಳಿ ಬೇಗೂರು ಗ್ರಾಮದ ಸಂದೀಪ್ ಗೌಡ (14) ಮೃತ ದುರ್ದೈವಿ
ಮೃತ ಸಂದೀಪ್ ಗೌಡ ಹಾಗೂ ಬೀಚನಹಳ್ಳಿ ಗ್ರಾಮದ ಕುಮಾರ್ ಬೇಗೂರು ಗ್ರಾಮದಿಂದ ಕಾರಿನಲ್ಲಿ ಬೀಚನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಟ್ಟಿಯಾಗಿ ಈ ಅವಘಡ ಸಂಭವಿಸಿದೆ, ತೀವ್ರವಾಗಿ ಗಾಯಗೊಂಡಿದ್ದ ಕಾರಿನ ಚಾಲಕ ಕುಮಾರ್ ಅವರನ್ನು ಬೆಂಗಳೂರು ಆಸ್ಪತ್ರೆ ಕರೆದೊಯ್ಯಲಾಗಿದೆ, ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ
