ಬೀದರ್‌ನಲ್ಲಿ ಕಾರಿಗೆ ಗೂಡ್ಸ್‌ ವಾಹನ ಡಿಕ್ಕಿ, ತೆಲಂಗಾಣದ ನಾಲ್ವರು ಸಾವು

ಬೀದರ್

    ಬೀದರ್​ನಲ್ಲಿ ಬೆಳ್ಳಂ ಬೆಳಗ್ಗೆಯೇ ಭೀಕರ ರಸ್ತೆ ಅಪಘಾತ  ಸಂಭವಿಸಿದ್ದು, ನಾಲ್ಕು ಮಂದಿಯನ್ನು ಬಲಿ  ಪಡೆದುಕೊಂಡಿದೆ. ಕಾರು ಹಾಗೂ ಗೂಡ್ಸ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಐವರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ತೆಲಂಗಾಣ  ಮೂಲದವರು ಎಂದು ತಿಳಿದುಬಂದಿದೆ.

   ಭಾಲ್ಕಿ ತಾಲೂಕಿನ ನೀಲಮ್ಮನಳ್ಳಿ ತಾಂಡಾ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ತೆಲಂಗಾಣ ಮೂಲದ ರಾಚಪ್ಪ, ನವೀನ್, ನಾಗರಾಜ್ ಮೃತ ದುರ್ದೈವಿಗಳಾಗಿದ್ದಾರೆ. ಮೃತರು ನೆರೆಯ ತೆಲಂಗಾಣದ ಜಗನ್ನಾಥಪುರ ಗ್ರಾಮದವರಾಗಿದ್ದಾರೆ. ನಿನ್ನೆ ಜಗನ್ನಾಥಪುರದಿಂದ ಗಾಣಗಾಪುರ ದತ್ತಾತ್ರೇಯ ದೇವರ ದರ್ಶನಕ್ಕೆ ಇವರು ಬಂದಿದ್ದರು. ಇಂದು ದೇವರ ದರ್ಶನ ಮುಗಿಸಿ ವಾಪಸ್ ಜಗನ್ನಾಥಪುರಕ್ಕೆ ತೆರಳುವ ವೇಳೆ ಕಾರಿಗೆ ಗೂಡ್ಸ್​ ಗಾಡಿ ಡಿಕ್ಕಿ ಹೊಡೆದಿದೆ. ಮೂವರು ಸ್ಥಳದಲ್ಲೇ ಪ್ರಾಣ ತ್ಯಜಿಸಿದ್ದಾರೆ.

   ಗಾಯಾಳುವಿಗೆ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಶೀನಾಥ್ ಎಂಬವರು ಸಾವನ್ನಪ್ಪಿದ ಬಳಿಕ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ ಆಗಿದೆ. ಇನ್ನೋರ್ವ ಗಾಯಾಳು ಪ್ರತಾಪ್‌ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಧನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Recent Articles

spot_img

Related Stories

Share via
Copy link