ಮಿಡಿಗೇಶಿ
ಮಧುಗಿರಿ ಕಡೆಯಿಂದ ಪಾವಗಡಕ್ಕೆ ಹಾದು ಹೋಗುವ ರಾಜ್ಯ ಹೆದ್ದಾರಿ ಕೆ.ಶಿಫ್ ರಸ್ತೆಯ ಅವರಗಲ್ಲು ಗ್ರಾಮದ ರಸ್ತೆಯಲ್ಲಿ ಮಾ.3 ರಂದು ರಾತ್ರಿ 7-45 ರ ಸಮಯದಲ್ಲಿ ಮಧುಗಿರಿ ಕಡೆಯಿಂದ ಅತಿ ವೇಗವಾಗಿ ಚಾಲಕನ ಅಜಾಗರೂಕತೆಯಿಂದ ಕಾರು ಕೆ.ಎ.51.ಎಂ.ಬಿ 0996 ಹೊಸಕೆರೆ ಕಡೆಯಿಂದ ಅವರಗಲ್ ಗ್ರಾಮಕ್ಕೆ ತನ್ನ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ
ಅವಗರಲ್ಲು ಗ್ರಾಮದವನೇ ಆದ ಯುವಕ ಓಬಳೇಶ್ (23) ಕೆ.ಎ.64.ವಿ.5095 ಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓಬಳೇಶ್‌ನಿಗೆ ಬಲವಾದ ಪೆಟ್ಟು ಬಿದ್ದಿದ್ದು ಮಧುಗಿರಿ ತಾಲ್ಲೂಕು ಆಸ್ಪತ್ರೆಗೆ ಸಾಗಿಸುವ ಮೃತ ಹೊಂದಿರುವ ಬಗ್ಗೆ ವರದಿಯಾಗಿದೆ. ಘಟನಾ ಸ್ಥಳಕ್ಕೆ ಮಿಡಿಗೇಶಿ ಪೋಲೀಸ್ ಠಾಣಾಧಿಕಾರಿ ಶಿವಣ್ಣನವರು ಭೇಟಿ ನೀಡಿದ್ದು ಅಪಘಾತಕ್ಕೀಡಾದ ದ್ವಿಚಕ್ರವಾಹನ ತುಂಡುತುಂಡಾಗಿರುವುದು,
ಅಲ್ಪ ಸ್ವಲ್ಪ ಜಖಂಗೊಂಡಿರುವ ಕಾರನ್ನು ಎರಡನ್ನು ವಶಕ್ಕೆ ಪಡೆದುಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿರುತ್ತಾರೆ. ಮೃತನ ಶವ ಪರೀಕ್ಷೆಯನ್ನು ತಾಲ್ಲೂಕು ಆಸ್ಪತ್ರೆ ವೈದ್ಯರಿಂದ ಮಾ.4 ರಂದು ನೆರವೇರಿಸಲಾಯಿತು ಕಾರಿನ ಚಾಲಕ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ