ತನ್ನ ಕಾರಿಗೆ ತಾನೇ ಬೆಂಕಿ ಹಚ್ಚಿ ಅದರೊಳಗೆ ಕುಳಿತ ಭೂಪ!

ಆಮ್‌ಸ್ಟರ್‌ಡ್ಯಾಮ್‌

    ಆಮ್‌ಸ್ಟರ್‌ಡ್ಯಾಮ್‌ ಸ್ಕ್ವೇರ್‌ನಲ್ಲಿ ಇತ್ತೀಚೆಗೆ ಕಾರೊಂದು ಸ್ಫೋಟಗೊಂಡು ಹೊತ್ತಿ ಉರಿದಿದೆ.ಈ ಘಟನೆಯ ದೃಶ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಲಾಗಿದ್ದು, ಇದು ಈಗ ವೈರಲ್  ಆಗಿದೆ.ವಿಡಿಯೊದಲ್ಲಿ ಸ್ಕ್ವೇರ್‌ನ ಆಗ್ನೇಯ ಮೂಲೆಯಲ್ಲಿರುವ ರಾಷ್ಟ್ರೀಯ ಸ್ಮಾರಕದ ಬಳಿ ಇರುವ ಕೆಂಪು ಕಾರೊಂದು ಹೊತ್ತಿ ಉರಿಯುವುದು ಸೆರೆಯಾಗಿದೆ. ಈ ಭಯಾನಕ ದೃಶ್ಯ ಕಂಡು ನೆಟ್ಟಿಗರು ಕೂಡ ಶಾಕ್‌ ಆಗಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಕಾರಿನ ಡ್ರೈವರ್‌ ಉದ್ದೇಶಪೂರ್ವಕವಾಗಿ ಕಾರಿಗೆ ಬೆಂಕಿಯನ್ನು ಹಚ್ಚಿದ್ದಾನೆ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ.

    ವೈರಲ್ ಆದ ವಿಡಿಯೊದಲ್ಲಿ ರಾಷ್ಟ್ರೀಯ ಸ್ಮಾರಕದ ಬಳಿ ಸಾಕಷ್ಟು ಜನರು ಓಡಾಡುತ್ತಿರುವಾಗ ಅಲ್ಲಿ ನಿಲ್ಲಿಸಿದ್ದ ಕೆಂಪು ಬಣ್ಣದ ಕಾರಿನಲ್ಲಿ ಹೊಗೆ ಕಂಡುಬಂದಿದೆ. ಸ್ವಲ್ಪ ಸಮಯದ ನಂತರ ಸಣ್ಣ ಸ್ಫೋಟ ಸಂಭವಿಸಿ ಎಲ್ಲರ ಕಣ್ಣೆದುರಿನಲ್ಲೇ ಕಾರು ಹೊತ್ತಿ ಉರಿದಿದೆ. ಇದನ್ನು ನೋಡಿದ ಜನರು ದಿಕ್ಕೆಟ್ಟು ಓಡಿದ್ದಾರೆ. ಹಲವಾರು ಪೊಲೀಸ್ ವಾಹನಗಳು ಉರಿಯುತ್ತಿರುವ ಕಾರನ್ನು ಸುತ್ತುವರಿದು ಬೆಂಕಿಯನ್ನು ನಂದಿಸಲು ಹರಸಾಹಸ ಮಾಡಿದ್ದಾರೆ. ನಂತರ ಕಾರಿನಿಂದ ವ್ಯಕ್ತಿಯೊಬ್ಬ ಹೊರಬಂದಿದ್ದು ಆತನ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣ ಪೊಲೀಸರು ಆತನ ಮೈಮೇಲಿದ್ದ ಬೆಂಕಿಯನ್ನು ನಂದಿಸಿದ್ದಾರೆ.

    ಅದೃಷ್ಟವಶಾತ್‍ ಆ ಸಮಯದಲ್ಲಿ ಕಾರಿನ ಬಳಿ ಸಾಕಷ್ಟು ಜನರು ಇದ್ದರೂ ಕೂಡ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಗಾಯಗೊಂಡ ಕಾರಿನ ಡ್ರೈವರ್‌ ಉದ್ದೇಶಪೂರ್ವಕವಾಗಿ ಬೆಂಕಿಯನ್ನು ಹಚ್ಚಿದ್ದಾನೆ ಎಂಬ ಅನುಮಾನ ಪೊಲೀಸರಲ್ಲಿ ಮೂಡಿದೆ. ಹೀಗಾಗಿ ಗಾಯಗೊಂಡ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆತನನ್ನು ಉತ್ತರ ನೆದರ್‌ಲ್ಯಾಂಡ್ಸ್‌ ಪ್ರಾಂತ್ಯದ 50 ವರ್ಷದ ಡಚ್ ಪ್ರಜೆ ಎಂದು ಗುರುತಿಸಲಾಗಿದೆ. ಆದರೆ ಪೊಲೀಸರು ಆತನ ಹೆಸರನ್ನು ಬಹಿರಂಗಪಡಿಸಿಲ್ಲ. ಪೊಲೀಸರು ಎಲ್ಲಾ ಸನ್ನಿವೇಶಗಳನ್ನು ಕೂಲಂಕೂಷವಾಗಿ ಪರಿಶೀಲಿಸಿದಾಗ ಆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಅನುಮಾನಗಳು ಮೂಡಿವೆ. ಹಾಗಾಗಿ ಆತನೇ ಬೆಂಕಿ ಹಚ್ಚಿದ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link