ಮಹಿಳೆಯರ ಕುರಿತು ಅಸಭ್ಯ ಹೇಳಿಕೆ ನೀಡಿದ್ರಾ ಬಾಬಾ ಅನಿರುದ್ಧಾಚಾರ್ಯ? ಕೇಸ್‌ ಕೈಗೆತ್ತಿಕೊಂಡ ಕೋರ್ಟ್‌

ನವದೆಹಲಿ:

    ಆಧ್ಯಾತ್ಮಿಕ ಗುರು ಅನಿರುದ್ಧಾಚಾರ್ಯ  ಅವರ ಮೇಲೆ ಬಹು ದೊಡ್ಡ ಆರೋಪವೊಂದು ಕೇಳಿ ಬಂದಿದ್ದು, ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಎಂದು ನೀಡಿದ್ದಾರೆ ಹೇಳಲಾಗಿದೆ. ಅಖಿಲ ಭಾರತ ಹಿಂದೂ ಮಹಾಸಭಾದ ಆಗ್ರಾ ಜಿಲ್ಲಾ ಅಧ್ಯಕ್ಷೆ ಮೀರಾ ರಾಥೋಡ್ ಸಲ್ಲಿಸಿದ ದೂರನ್ನು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯವು ಸ್ವೀಕರಿಸಿದ್ದು ಪ್ರಕರಣ ದಾಖಲಿಸಿದೆ. ನ್ಯಾಯಾಲಯವು ಜನವರಿ 1 ರಂದು ರಾಥೋಡ್ ಅವರ ಹೇಳಿಕೆಯನ್ನು ದಾಖಲಿಸಲಿದೆ.

   ಅಕ್ಟೋಬರ್‌ನಲ್ಲಿ ಅನಿರುದ್ಧಾಚಾರ್ಯ ಅವರು ಹೇಳಿಕೆ ನೀಡಿದ್ದ ವಿಡಿಯೋ ಬಳಿಕ ಕೇಸ್‌ ದಾಖಲಿಸಲಾಗಿದೆ. ಅನಿರುದ್ಧಾಚಾರ್ಯ ಯುವತಿಯರು ಮತ್ತು ಮದುವೆಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಈ ಹೇಳಿಕೆಯು ಆನ್‌ಲೈನ್‌ನಲ್ಲಿ ವ್ಯಾಪಕ ಟೀಕೆಗೆ ಕಾರಣವಾಯಿತು, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಮಹಿಳಾ ಗುಂಪುಗಳು ಅವರು ಮಹಿಳೆಯರನ್ನು ಕೀಳಾಗಿ ಬಿಂಬಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

  ಹಿಂದೂ ಮಹಾಸಭಾದ ಆಗ್ರಾ ಘಟಕದ ನೇತೃತ್ವ ವಹಿಸಿರುವ ರಾಥೋಡ್, ಈ ಹೇಳಿಕೆಗಳನ್ನು ಸಾರ್ವಜನಿಕವಾಗಿ ಖಂಡಿಸಿದರು, ಅವು ಧಾರ್ಮಿಕ ವ್ಯಕ್ತಿಗೆ ತಕ್ಕುದಲ್ಲ ಎಂದು ಹೇಳಿದರು. “ಇಂತಹ ಹೇಳಿಕೆಗಳು ನಮ್ಮ ಸಂತರಿಗೆ ಸರಿಹೊಂದುವುದಿಲ್ಲ” ಎಂದು ಅವರು ಹೇಳಿದರು. ಆರಂಭದಲ್ಲಿ ಅವರು ವೃಂದಾವನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು, ಆದರೆ ಯಾವುದೇ ಎಫ್‌ಐಆರ್ ದಾಖಲಾಗದಿದ್ದಾಗ, ಅವರು ನ್ಯಾಯಾಲಯಕ್ಕೆ ಈ ವಿಷಯವನ್ನು ವರ್ಗಾಯಿಸಿದ್ದಾರೆ. “ಪ್ರಕರಣ ದಾಖಲಾಗುವವರೆಗೂ ನಾನು ನನ್ನ ಜಡೆ ಕಟ್ಟುವುದಿಲ್ಲ ಎಂದು ನಿರ್ಧರಿಸಿದ್ದೆ. ಈಗ ನ್ಯಾಯಾಲಯ ನಮ್ಮ ಅರ್ಜಿಯನ್ನು ಸ್ವೀಕರಿಸಿದೆ, ಬಹುಶಃ ಅದನ್ನು ಮತ್ತೆ ಕಟ್ಟುವ ಸಮಯ ಬಂದಿದೆ ಎಂದು ರಾಥೋಡ್‌ ಹೇಳಿದ್ದಾರೆ. 

   ವೀಡಿಯೊ ಟೀಕೆಗೆ ಗುರಿಯಾದ ನಂತರ, ಅನಿರುದ್ಧಾಚಾರ್ಯ ಸ್ಪಷ್ಟೀಕರಣವನ್ನು ನೀಡಿ, ತಮ್ಮ ಮಾತುಗಳನ್ನು ಸಂದರ್ಭದಿಂದ ಹೊರತೆಗೆದಿದ್ದಾರೆ ಎಂದು ವಾದಿಸಿದರು. ಪುರುಷರು ಮತ್ತು ಮಹಿಳೆಯರ ಬಗ್ಗೆ ತಾವು ಕಾಮೆಂಟ್‌ಗಳನ್ನು ಮಾಡಿದ್ದೇನೆ ಮತ್ತು ಮಹಿಳೆಯರನ್ನು ಪ್ರತ್ಯೇಕಿಸುವುದು ಉದ್ದೇಶವಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದರು. ಬಹು ಪುರುಷರೊಂದಿಗೆ ಸಂಬಂಧ ಹೊಂದಿರುವ ಮಹಿಳೆ ಒಳ್ಳೆಯ ಸ್ವಭಾವದವಳು ಆಗಿರಲು ಸಾಧ್ಯವಿಲ್ಲ, ಮತ್ತು ಬಹು ಮಹಿಳೆಯರೊಂದಿಗೆ ಸಂಬಂಧ ಹೊಂದಿರುವ ಪುರುಷನನ್ನು ವ್ಯಭಿಚಾರಿ ಎಂದು ಪರಿಗಣಿಸಲಾಗುತ್ತದೆ ಎಂದು ತಾನು ಹೇಳಿದ್ದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Recent Articles

spot_img

Related Stories

Share via
Copy link