ನವದೆಹಲಿ :
ಜಗತ್ತು ಕಂಡ ಅಪ್ರತಿಮ ಸುಂದರಿ ಹಾಗು ಈಜಿಪ್ಟ್ ನ ಸಾಮ್ರಾಜ್ಙಿ ರಾಣಿ ಕ್ಲಿಯೋಪಾತ್ರ ಜೀವನದ ಕುರಿತಂತೆ ನೆಟ್‌ಫ್ಲಿಕ್‌ನಲ್ಲಿ ಬಿಡುಗಡೆಯಾಗಲಿರುವ “ಕ್ವೀನ್ ಕ್ಲಿಯೋಪಾತ್ರ” ಸಾಕ್ಷ್ಯಚಿತ್ರದಲ್ಲಿ ರಾಣಿ “ಕ್ಲಿಯೋ ಪಾತ್ರ” ಪಾತ್ರಕ್ಕೆ ಕಪ್ಪು ವರ್ಣಿಯ ಮಹಿಳೆಯನ್ನು ಆಯ್ಕೆ ಮಾಡಿಕೊಡಿರುವುದಕ್ಕಾಗಿ ಈಜಿಪ್ಟ್ನ ವಕೀಲರೊಬ್ಬರು ನೆಟ್‌ಫ್ಲಿಕ್ಸ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮೇ 10ರಂದು ಪ್ರಸಾರವಾಗಬೇಕಿದ್ದ ಸಾಕ್ಷ್ಯಚಿತ್ರದ ನಾಯಕಿಯಾಗಿ ಬ್ರಿಟಿಷ್ ನಟಿ ಅಡೆಲೆ ಜೇಮ್ಸ್ ಅಭಿನಯಿಸಿದ್ದಾರೆ. ಈ ಹಿನ್ನೆಲೆ ಮೊಹಮ್ಮದ್-ಅಲ್-ಸೆಮರಿ ಎಂಬ ವಕೀಲ, ರಾಣಿಯ ಪಾತ್ರದಲ್ಲಿ ಕಪ್ಪು ಮಹಿಳೆಯನ್ನು ತೋರಿಸಿರುವುದು ಸರಿಯಲ್ಲ ಎಂದಿದ್ದು, ಇಜಿಪ್ಟ್ ನ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಲು ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ