ಜಾತಿ-ಧರ್ಮ ಚುನಾವಣಾಸ್ತ್ರವಾಗದಿರಲಿ : ಆಯೋಗ

ವದೆಹಲಿ: 

    ಲೋಕಸಭೆ ಚುನಾವಣೆ ವೇಳೆ ಜಾತಿ, ಧರ್ಮ ಮತ್ತು ಭಾಷೆಗಳ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸಬೇಡಿ ಮತ್ತು ಭಕ್ತ ಹಾಗೂ ಭಗವಂತನ ನಡುವಿನ ಸಂಬಂಧಗಳನ್ನು ಅವಮಾನಿಸಬೇಡಿ ಎಂದು ಕೇಂದ್ರ ಚುನಾವಣಾ ಆಯೋಗವು ಎಲ್ಲ ರಾಜಕೀಯ ಪಕ್ಷಗಳಿಗೆ ಸೂಚಿಸಿದೆ.

    ‘ದೇವಸ್ಥಾನ, ಮಸೀದಿ, ಚರ್ಚ್ ಮತ್ತು ಗುರುದ್ವಾರ ಸೇರಿದಂತೆ ಧಾರ್ಮಿಕ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ.ನೀತಿಸಂಹಿತೆ ಉಲ್ಲಂಘಿಸಿದರೆ ಅಭ್ಯರ್ಥಿಗಳು ಮತ್ತು ಪ್ರಚಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.’ ಎಂದು ತಿಳಿಸಿದೆ.

   ‘ವಿಷಯಾಧರಿತ ಚರ್ಚೆಗಳ‌ ಮೂಲಕ ಚುನಾವಣಾ ಪ್ರಚಾರವನ್ನು ನಡೆಸಬೇಕು. ಪಕ್ಷಗಳು ಮತ್ತು ಅದರ ನಾಯಕರು ಆಧಾರ ರಹಿತ ಮತ್ತು ಜನರ ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡುವಂತಿಲ್ಲ’ ಎಂದು ತಿಳಿಸಿದೆ.

    ಸಾಮಾಜಿಕ ಜಾಲತಾಣ ಬಳಕೆಯ ಬಗ್ಗೆಯೂ ಸೂಚನೆ ನೀಡಿದ ಆಯೋಗ, ‘ಪ್ರತಿಸ್ಪರ್ಧಿಗಳನ್ನು ನಿಂದಿಸುವ, ಅವಮಾನಿಸುವ, ಕೆಟ್ಟ ಅಭಿರುಚಿಯ ಮತ್ತು ಘನತೆಗೆ ಕುಂದು ತರುವ ಪೋಸ್ಟ್‌ಗಳನ್ನು ಮಾಡುವಂತಿಲ್ಲ’ ಎಂದು ತಿಳಿಸಿದೆ.

   ‘ಸಾರ್ವತ್ರಿಕ ಚುನಾವಣೆಯಲ್ಲಿ ನೈತಿಕ ರಾಜಕೀಯಕ್ಕೆ ವೇದಿಕೆ ಒದಗಿಸುವ ಮತ್ತು ಗೊಂದಲ ಕಡಿಮೆ ಮಾಡುವ ಉದ್ದೇಶವನ್ನು ಆಯೋಗ ಹೊಂದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap