ಬೆಂಗಳೂರು:
ನಗರದಲ್ಲಿ ಅಕ್ರಮವಾಗಿ ಮಕ್ಕಳನ್ನು ಭಿಕ್ಷಾಟನೆಗೆ ತಳ್ಳಿದ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಒಟ್ಟು 47 ಮಕ್ಕಳನ್ನು ರಕ್ಷಿಸಲಾಗಿದ್ದು 37 ಪೋಷಕರನ್ನು ಸಿಸಿಬಿ ವಶಕ್ಕೆ ಪಡೆದಿದೆ.
ನಗರದ ಕೆ.ಜಿ.ಹಳ್ಳಿ ಹಾಗೂ ಫ್ರೇಜರ್ ಟೌನ್ ಸುತ್ತಮುತ್ತಲಿನ ಸಿಗ್ನಲ್ಗಳಲ್ಲಿ ಅಕ್ರಮವಾಗಿ ಮಕ್ಕಳನ್ನು ಬಿಕ್ಷಾಟಣೆಗೆ ಬಳಸಿಕೊಳ್ಳಲಾಗಿದೆ. ಅಕ್ರಮವಾಗಿ ಮಕ್ಕಳನ್ನು ಬಿಕ್ಷಾಟಣೆಗೆ ಬಳಸುತ್ತಿದ್ದ 37 ಪೋಷಕರನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಹಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಹಾಗೂ ಮಕ್ಕಳ ಮೂಲವನ್ನು ಪತ್ತೆ ಹಚ್ಚಲು ತನೆಖೆ ನಡೆಸುತ್ತಿದ್ದಾರೆ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.