ಕುಬೇರ ಚಿತ್ರ ಪದರ್ಶನದ ವೇಳೆ ಅವಘಡ ; ಥಿಯೇಟರ್‌ನ ಸೀಲಿಂಗ್ ಕುಸಿತ

ತೆಲಂಗಾಣ: 

    ತಮಿಳಿನ ಸೂಪರ್ ಸ್ಟಾರ್  ಧನುಷ್  ಅಭಿನಯದ ಕುಬೇರ  ಚಿತ್ರ ಪ್ರದರ್ಶನದ ವೇಳೆ ಥಿಯೇಟರ್ ನ ಸೀಲಿಂಗ್ ಕುಸಿದಿರುವ  ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧನುಷ್, ರಶ್ಮಿಕಾ ಮಂದಣ್ಣ ಮತ್ತು ನಾಗಾರ್ಜುನ ಪ್ರಮುಖ ಪಾತ್ರದಲ್ಲಿರುವ ಕುಬೇರ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ತೆಲಂಗಾಣದಲ್ಲಿ ಚಿತ್ರ ಪ್ರದರ್ಶನದ ಸಮಯದಲ್ಲಿ ಥಿಯೇಟರ್ ಸೀಲಿಂಗ್ ಕುಸಿದಿರುವ ವಿಡಿಯೋ ವೈರಲ್ ಆಗಿದೆ. ಚಿತ್ರ ಪ್ರದರ್ಶನದ ಸಮಯದಲ್ಲೇ ಮಲ್ಟಿಪ್ಲೆಕ್ಸ್ ಒಳಗಿನ ಸೀಲಿಂಗ್‌ನ ಒಂದು ಭಾಗ ಬಿದ್ದಿದೆ ಎನ್ನಲಾಗಿದೆ.

    ಜೂನ್ 20 ರಂದು ತೆರೆಗೆ ಬಂದ ಕುಬೇರ ಸಿನಿಮಾ ತೆಲಂಗಾಣ ಥಿಯೇಟರ್‌ನಲ್ಲಿ ಅದ್ಬುತ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪ್ರದರ್ಶನದ ವೇಳೆ ಥಿಯೇಟರ್ ನ ಸೀಲಿಂಗ್‌ನ ಒಂದು ಭಾಗವು ಸಿನಿಮಾ ಪ್ರೇಕ್ಷಕರ ಮೇಲೆ ಬಿದ್ದಿದೆ ಎನ್ನಲಾಗಿದೆ. ಇದರ ಆಘಾತಕಾರಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

   ಬುಧವಾರ ರಾತ್ರಿ ತೆಲಂಗಾಣದ ಮುಕುಂದ್ ಥಿಯೇಟರ್‌ನ ಸೀಲಿಂಗ್‌ನ ಒಂದು ಭಾಗ ಕುಬೇರ ಚಿತ್ರ ಪ್ರದರ್ಶನದ ವೇಳೆ ಕುಸಿದಿದೆ. ಇದರಿಂದ ಹಲವಾರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಪ್ರೇಕ್ಷಕರ ಸುರಕ್ಷತೆ ನಿರ್ಲಕ್ಷಿಸಿರುವ ಥಿಯೇಟರ್ ಮಾಲೀಕರನ್ನು ಸಿನಿಮಾ ವೀಕ್ಷಿಸಲು ಬಂದಿದ್ದ ಅನೇಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬಿಡುಗಡೆಯಾದ ಮೊದಲ ವಾರದಲ್ಲಿ ಕುಬೇರ ಚಿತ್ರವು 70 ಕೋಟಿ ರೂ. ಗಳಿಸುವ ನಿರೀಕ್ಷೆ ಇದೆ. ದೇಶಾದ್ಯಂತ ಬಿಡುಗಡೆಯಾಗಿರುವ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ 14.75 ಕೋಟಿ ರೂ. ಗಳಿಸಿತು. ಕೆಲವು ದಿನಗಳಿಂದ ಚಿತ್ರವು ಪ್ರೇಕ್ಷಕರನ್ನು ಸೆಳೆದಿದ್ದು, ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿದೆ. ಮೊದಲ ಶನಿವಾರ ಕುಬೇರಾ 16.5 ಕೋಟಿ ರೂ. ಹಾಗೂ ಭಾನುವಾರ 17.35 ಕೋಟಿ ರೂ. ಗಳಿಸಿದೆ. ಈವರೆಗೆ ಚಿತ್ರವು ಒಟ್ಟು 66.84 ಕೋಟಿ ರೂ. ಗಳಿಸಿದೆ. 

   120 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ದುಷ್ಕರ್ಮಿಗಳ ಕಥೆಯನ್ನು ಬಣ್ಣಿಸಿದ್ದು, ಇದರಲ್ಲಿ ಧನುಷ್ ಭಿಕ್ಷುಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಶೇಖರ್ ಕಮ್ಮುಲಾ ನಿರ್ದೇಶಿಸಿದ್ದು, ಶೀಘ್ರದಲ್ಲೇ ಇದು ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

Recent Articles

spot_img

Related Stories

Share via
Copy link