ನವದೆಹಲಿ:
ಸಂಸತ್ತಿನಲ್ಲಿ ಯಾವುದೇ ಚರ್ಚೆಯಿಲ್ಲದೆ 2023-24ನೇ ಸಾಲಿನ, ಸುಮಾರು 45 ಲಕ್ಷ ಕೋಟಿ ರೂಪಾಯಿ ಕೇಂದ್ರ ಬಜೆಟ್ ಅನ್ನು ಲೋಕಸಭೆಯಲ್ಲಿ ಗುರುವಾರ ಅಂಗೀಕರಿಸಲಾಯಿತು.
ರಾಹುಲ್ ಗಾಂಧಿಯವರ ಕ್ಷಮೆಯಾಚನೆ ಮತ್ತು ಅದಾನಿ ಪ್ರಕರಣದ ಕುರಿತು ಚರ್ಚೆಗೆ ಬೇಡಿಕೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷದ ಸಂಸದರು ತೀವ್ರ ವಾಗ್ವಾದದಲ್ಲಿ ತೊಡಗಿದ್ದರಿಂದ ಲೋಕಸಭೆಯನ್ನು ಎರಡು ಬಾರಿ ಮುಂದೂಡಲಾಯಿತು.
ಎರಡು ಮುಂದೂಡಿಕೆಗಳ ನಂತರ ಇಂದು ಸಂಜೆ 6 ಗಂಟೆಗೆ ಲೋಕಸಭೆ ಕಲಾಪ ಪುನಃ ಆರಂಭವಾದ ಕೂಡಲೇ, ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಪಕ್ಷಗಳ ಕಟ್ ಮೋಷನ್ ಅಥವಾ ಸರ್ಕಾರದ ಖರ್ಚು ಯೋಜನೆಗೆ ತಿದ್ದುಪಡಿಗಳನ್ನು ಮತಕ್ಕೆ ಹಾಕಿದರು ಮತ್ತು ಅದನ್ನು ಧ್ವನಿ ಮತದಿಂದ ತಿರಸ್ಕರಿಸಲಾಯಿತು.
ನಂತರ ವಿತ್ತ ಸಚಿವೆ ನಿರ್ಮಲಾ ಸೀತಾರ್ಮನ್ ಅವರು 2023-24ನೇ ಸಾಲಿನ ಅನುದಾನಕ್ಕಾಗಿ ಚರ್ಚೆ ಮತ್ತು ಮತದಾನಕ್ಕೆ ಸಂಬಂಧಿಸಿದ ಹಣಕಾಸು ಮಸೂದೆಯನ್ನು ಮಂಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ