ಫಾಸ್ಟ್‌ಟ್ಯಾಗ್ ಬದಲಿಗೆ ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆ : ಕೇಂದ್ರದಿಂದ ಸ್ಪಷ್ಟನೆ

ನವದೆಹಲಿ: 

    ದೇಶಾದ್ಯಂತ ಮೇ 1ರಿಂದ ಫಾಸ್ಟ್‌ಟ್ಯಾಗ್ ಬದಲಿಗೆ ಉಪಗ್ರಹ ಆಧಾರಿತ ಟೋಲಿಂಗ್  ವ್ಯವಸ್ಥೆ ಜಾರಿಗೆ ಬರುತ್ತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಭಾರತದಾದ್ಯಂತ ಉಪಗ್ರಹ ಅಥವಾ ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆಯನ್ನು ಯಾವಾಗ ಜಾರಿಗೆ ತರಬೇಕು ಎನ್ನುವ ಕುರಿತು ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ  ಶುಕ್ರವಾರ ಸ್ಪಷ್ಟಪಡಿಸಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಸದ್ಯ ಫಾಸ್ಟ್‌ಟ್ಯಾಗ್ ಅನ್ನೇ ಬಳಸಲಾಗುತ್ತದೆ. ಹೀಗಾಗಿ ಬಳಕೆದಾರರು ತಮ್ಮ ಫಾಸ್ಟ್‌ಟ್ಯಾಗ್ ವ್ಯಾಲೆಟ್‌ಗಳನ್ನು ಯುಪಿಐ ಅಥವಾ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿ ತಡೆರಹಿತ ಟೋಲ್ ಪಾವತಿಗಳನ್ನು ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

   ಉಪಗ್ರಹ ಆಧಾರಿತ ಟೋಲಿಂಗ್ ವ್ಯವಸ್ಥೆ ಮೇ 1ರಿಂದ ಪ್ರಾರಂಭಿಸಲಾಗುತ್ತದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಇದು ಸುಳ್ಳು. ದೇಶಾದ್ಯಂತ ಉಪಗ್ರಹ ಆಧಾರಿತ ಟೋಲಿಂಗ್ ಅನ್ನು ಅನುಷ್ಠಾನಗೊಳಿಸುವ ಬಗ್ಗೆ ಇನ್ನೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಥವಾ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

   ಹೆದ್ದಾರಿಗಳಲ್ಲಿನ ಒತ್ತಡ ಕಡಿಮೆ ಮಾಡಲು ANPR-FASTag ಆಧಾರಿತ ಹೊಸ ಹೈಬ್ರಿಡ್ ಟೋಲಿಂಗ್ ವ್ಯವಸ್ಥೆಯನ್ನು ನವದೆಹಲಿ- ಮುಂಬೈ ಕಾರಿಡಾರ್‌ನಂತಹ ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಇದನ್ನು ಕೂಡ ಇನ್ನೂ ರಾಷ್ಟ್ರವ್ಯಾಪಿ ಅನುಷ್ಠಾನಕ್ಕೆ ಯೋಜನೆ ಮಾಡಲಾಗಿಲ್ಲ. ಇದರ ಅನುಷ್ಠಾನವು ಯೋಜನೆಯ ಯಶಸ್ಸು ಮತ್ತು ಬಳಕೆದಾರರ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ.

   ಇದು ಹೆದ್ದಾರಿಯಲ್ಲಿ ತಡೆಯನ್ನು ಕಡಿಮೆ ಟೋಲಿಂಗ್ ವ್ಯವಸ್ಥೆಯ ಹೊಸ ಟೋಲ್ ಸಂಗ್ರಹ ತಂತ್ರಜ್ಞಾನವಾಗಿದೆ. ಇದು ಸ್ವಯಂಚಾಲಿತವಾಗಿ ನಂಬರ್ ಪ್ಲೇಟ್ ಅನ್ನು ಗುರುತಿಸುತ್ತದೆ. ಇದಕ್ಕಾಗಿ ಕ್ಯಾಮೆರಾಗಳನ್ನು ಅಸ್ತಿತ್ವದಲ್ಲಿರುವ ಫಾಸ್ಟ್‌ಟ್ಯಾಗ್ ರೇಡಿಯೋ-ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್   ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ. ಈ ವ್ಯವಸ್ಥೆಯು ತಡೆರಹಿತ ಮತ್ತು ತಡೆ-ಮುಕ್ತ ಟೋಲಿಂಗ್‌ಗೆ ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ನಿಲ್ಲಬೇಕಾಗಿಲ್ಲ. ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಟೋಲ್ ಬೂತ್‌ಗಳಲ್ಲಿ ನಿರಂತರ ಸಂಚಾರಕ್ಕೆ ಅನುವು ಮಾಡಿಕೊಡುವುದು ಇದರ ಗುರಿಯಾಗಿದೆ. ಟೋಲ್ ಪಾವತಿಸದ ವಾಹನಗಳಿಗೆ ಇ-ನೋಟೀಸ್ ಕಳುಹಿಸಲಾಗುತ್ತದೆ. ಟೋಲ್ ಪಾವತಿಸಲು ವಿಫಲವಾದರೆ VAHAN ವ್ಯವಸ್ಥೆಯ ಅಡಿಯಲ್ಲಿ ಫಾಸ್ಟ್‌ಟ್ಯಾಗ್ ಅಮಾನತು ಮಾಡಬಹುದು ಮತ್ತು ದಂಡ ಕೂಡ ವಿಧಿಸಬಹುದು.

   ಸದ್ಯಕ್ಕೆ ಆಯ್ದ ಸ್ಥಳಗಳಲ್ಲಿ ಈ ವ್ಯವಸ್ಥೆ ಸ್ಥಾಪನೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈಗಾಗಲೇ ಬಿಡ್‌ಗಳನ್ನು ಆಹ್ವಾನಿಸಿದೆ. ಆದರೆ ಇದು ಸೀಮಿತ ಪ್ರಯೋಗ. ದೇಶಾದ್ಯಂತ ಈ ವ್ಯವಸ್ಥೆ ಸ್ಥಾಪನೆಗೆ ಯಾವುದೇ ಯೋಜನೆ ಹಾಕಿಕೊಳ್ಳಲಾಗಿಲ್ಲ.

Recent Articles

spot_img

Related Stories

Share via
Copy link