ದೇಶದಲ್ಲಿ ವಾಟ್ಸಪ್ ನಿಷೇಧ !?

 

ಹೊಸದಿಲ್ಲಿ:

    ದೇಶದಲ್ಲಿ ವಾಟ್ಸಪ್ ಮೂಲಕ ಸುಳ್ಳು ಸುದ್ದಿ ಮತ್ತು ನಕಲಿ ಸಂದೇಶ ರವಾನೆಯಾಗಿ ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಡೆಯಲು ಕೇಂದ್ರ ಸರಕಾರ ಮುಂದಾಗಿದ್ದು, ಅಂತಹ ಸುದ್ದಿಗಳ ಮೂಲ ಪತ್ತೆಹಚ್ಚಲು ಕ್ರಮ ಕೈಗೊಳ್ಳುವಂತೆ ವಾಟ್ಸಪ್‌ಗೆ ಸೂಚನೆ ನೀಡಿದೆ. ಮತ್ತು ಅದಕ್ಕೆ ತಪ್ಪಿದಲ್ಲಿ ದೇಶದಲ್ಲಿ ನಿಷೇಧಕ್ಕೆ ಒಳಗಾಗಬಹುದು ಎಂದು ವಾಟ್ಸಪ್‌ಗೆ ಎಚ್ಚರಿಸಿದೆ.

    ಆದರೆ ಕೇಂದ್ರದ ಬೇಡಿಕೆಗೆ ವಾಟ್ಸಪ್ ಸಮ್ಮತಿ ಸೂಚಿಸಿಲ್ಲ, ಬದಲಾಗಿ ಬಳಕೆದಾರರ ಸಂದೇಶವನ್ನು ಕಂಪನಿ ನೋಡುವುದಿಲ್ಲ, ಅವರ ವೈಯಕ್ತಿಕ ಮಾಹಿತಿ ಮತ್ತು ಹಿತಾಸಕ್ತಿ ರಕ್ಷಿಸುವುದು ಕಂಪನಿಯ ನಿಯಮವಾಗಿದ್ದು, ಅದನ್ನು ಮೀರಲಾಗದು ಎಂದಿದೆ.

    ವಾಟ್ಸಪ್ ಬಳಸಿ ಕಳುಹಿಸಲಾಗುವ ಎಲ್ಲ ಸಂದೇಶಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಷನ್‌ಗೆ ಒಳಪಟ್ಟಿವೆ. ಇದರಿಂದ ಸಂದೇಶ ಸೋರಿಕೆಯಾಗುವುದಿಲ್ಲ. ಹೀಗಾಗಿ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲ ಎಂದು ವಾಟ್ಸಪ್ ಹೇಳಿದೆ.

    ಆದರೆ ಸಂದೇಶ ತೆರೆದು ನೋಡುವುದು ಬೇಡ, ದೇಶದಲ್ಲಿ ಕೆಲವೊಂದು ಪ್ರಕರಣಗಳಲ್ಲಿ ವಾಟ್ಸಪ್ ಮೂಲಕ ಹರಡಲಾದ ಸಂದೇಶವೇ ಗಲಭೆಗೆ ಮೂಲ ಎಂದು ತನಿಖೆಯ ವೇಳೆ ಪತ್ತೆಯಾಗಿದೆ. ಹೀಗಾಗಿ ಅದನ್ನು ಪತ್ತೆಹಚ್ಚಲು ವಾಟ್ಸಪ್ ಸೂಕ್ತ ವ್ಯವಸ್ಥೆ ರೂಪಿಸಬೇಕು. ಅದಕ್ಕಾಗಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಬೇಕು, ಇಲ್ಲದಿದ್ದರೆ ದೇಶದಲ್ಲಿ ವಾಟ್ಸಪ್ ನಿಷೇಧಕ್ಕೆ ಚಿಂತಿಸಲಾಗುವುದು ಎಂದಿದೆ.

Recent Articles

spot_img

Related Stories

Share via
Copy link
Powered by Social Snap